'ಮಲಯಾಳಂ ಮಾತನಾಡಬೇಡಿ' ನರ್ಸ್‌ಗಳಿಗೆ ದಿಲ್ಲಿ ಸರಕಾರಿ ಆಸ್ಪತ್ರೆ ಆದೇಶ: ಭಾಷೆ ನಿಷೇಧಕ್ಕೆ ಭಾರೀ ಆಕ್ರೋಶ
'ಮಲಯಾಳಂ ಮಾತನಾಡಬೇಡಿ' ನರ್ಸ್‌ಗಳಿಗೆ ದಿಲ್ಲಿ ಸರಕಾರಿ ಆಸ್ಪತ್ರೆ ಆದೇಶ: ಭಾಷೆ ನಿಷೇಧಕ್ಕೆ ಭಾರೀ ಆಕ್ರೋಶ
ಮಲಯಾಳಂ, ಭಾರತೀಯ ಭಾಷೆ. ಅದನ್ನು ಮಾತಾಡುವುದು ಅಪರಾಧ ಎಂದು ಯಾವ ಕಾನೂನಿನಲ್ಲಿ ಹೇಳಲಾಗಿದೆ ತೋರಿಸಿ. ಇದು ಅನ್ಯ ಭಾಷೆಗಳನ್ನು ಮುಗಿಸುವ ತಂತ್ರ, ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕಿಡಿಕಾರಿದ್ದರು. ನರ್ಸ್‌ಗಳು ಸಹ ಈ ಆದೇಶದ ವಿರುದ್ಧ ಪ್ರತಿಭಟನೆ ನಡೆಸಿದ್ದರು.
ಹೊಸದಿಲ್ಲಿ: ದಿಲ್ಲಿಯ ಸರಕಾರಿ ಆಸ್ಪತ್ರೆಯಲ್ಲಿ ನರ್ಸಿಂಗ್ ಸಿಬ್ಬಂದಿ ತಮ್ಮ ನಡುವಿನ ಸಂಭಾಷಣೆಗೆ '' ಭಾಷೆ ಬಳಸಬಾರದು ಎಂದು ಹೊರಡಿಸಿದ್ದ ಆದೇಶವನ್ನು ನರ್ಸ್‌ಗಳ ಪ್ರತಿಭಟನೆ ಬಳಿಕ ವಾಪಸ್ ಪಡೆಯಲಾಗಿದೆ.
ನಗರದ ಸರಕಾರಿ ಆಸ್ಪತ್ರೆಯಲ್ಲಿ ಕೇರಳದಿಂದ ಬಂದ ಆಯಾಗಳ ಸಂಖ್ಯೆ ಹೆಚ್ಚಾಗಿದೆ. ಸಹಜವಾಗಿಯೇ ಅವರು ಪರಸ್ಪರ ಮುಖಾಮುಖಿಯಾದಾಗ ತಮ್ಮ ಮಾತೃಭಾಷೆ ಮಲಯಾಳಂನಲ್ಲಿ ಮಾತಾಡುತ್ತಿದ್ದರು. ಇದರಿಂದ ಕಿರಿಕಿರಿಗೆ ಒಳಗಾದ ಆಸ್ಪತ್ರೆಯ ನರ್ಸಿಂಗ್ ಸುಪರಿಂಟೆಂಡೆಂಟ್, ಆಸ್ಪತ್ರೆ ಆವರಣದಲ್ಲಿ ಮಲಯಾಳಂ ಭಾಷೆ ಬಳಸದಂತೆ ನಿಷೇಧ ಹೇರಿ ಆದೇಶ ಹೊರಡಿಸಿದ್ದರು.
''ಆಸ್ಪತ್ರೆ ಕರ್ತವ್ಯದಲ್ಲಿದ್ದಾಗ ಹಿಂದಿ ಮತ್ತು ಇಂಗ್ಲಿಷ್ ಭಾಷೆಯನ್ನು ಮಾತ್ರ ಬಳಸಬೇಕು. ಶುಶ್ರೂಷಕ ಸಿಬ್ಬಂದಿ ಮಲಯಾಳಂ ಮಾತಾಡುವುದರಿಂದ ಹಿಂದಿ ಭಾಷಿಕ ರೋಗಿಗಳ ಚಿಕಿತ್ಸೆಗೆ ಅಡ್ಡಿಯುಂಟಾಗುತ್ತದೆ,'' ಎಂದು ಅವರು ತಿಳಿಸಿದ್ದರು.
ಈ ಆದೇಶ ರಾದ್ಧಾಂತಕ್ಕೆ ಕಾರಣವಾಗಿತ್ತು.''ಮಲಯಾಳಂ, ಭಾರತೀಯ ಭಾಷೆ. ಅದನ್ನು ಮಾತಾಡುವುದು ಅಪರಾಧ ಎಂದು ಯಾವ ಕಾನೂನಿನಲ್ಲಿ ಹೇಳಲಾಗಿದೆ ತೋರಿಸಿ. ಇದು ಅನ್ಯ ಭಾಷೆಗಳನ್ನು ಮುಗಿಸುವ ತಂತ್ರ,'' ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕಿಡಿಕಾರಿದ್ದರು. ಸಹ ಈ ಆದೇಶದ ವಿರುದ್ಧ ಪ್ರತಿಭಟನೆ ನಡೆಸಿದ್ದರು.
ಈ ಎಲ್ಲಾ ಬೆಳವಣಿಗೆಗಳ ಬೆನ್ನ ಹಿಂದೆಯೇ, ''ಅಂಥದ್ದೊಂದು ಆದೇಶ ಅಕ್ರಮ. ಅದನ್ನು ವಾಪಸ್ ಪಡೆಯಲಾಗಿದೆ. ಪ್ರಕರಣ ಕುರಿತು ತನಿಖೆಗೆ ಆದೇಶಿಸಲಾಗಿದೆ,'' ಎಂದು ದಿಲ್ಲಿ ವೈದ್ಯಕೀಯ ನಿರ್ದೇಶಕ ಡಾ.ಅನಿಲ್ ಅಗರ್ವಾಲ್ ಹೇಳಿದರು. ಇದರೊಂದಿಗೆ ಸದ್ಯ ವಿವಾದಕ್ಕೆ ತೆರೆ ಬಿದ್ದಿದೆಯಾದರೂ ಭಾಷೆ ತಾರತಮ್ಯದ ಚರ್ಚೆ ಮುಂದುವರಿದಿದೆ.