ಎರಡೂ ಡೋಸ್ ಲಸಿಕೆ ಪಡೆದ ದೇಶಿ ವಿಮಾನ ಪ್ರಯಾಣಿಕರಿಗೆ ಆರ್‌ಟಿ-ಪಿಸಿಆರ್ ವರದಿ ಕಡ್ಡಾಯವಲ್ಲ: ಕೇಂದ್ರದ ಚಿಂತನೆ

ಎರಡೂ ಡೋಸ್ ಲಸಿಕೆ ಪಡೆದಿರುವ ಪ್ರಯಾಣಿಕರು ದೇಶಿ ವಿಮಾನಗಳಲ್ಲಿ ಪ್ರಯಾಣಿಸುವಾಗ ಆರ್‌ಟಿ-ಪಿಸಿಆರ್ ನೆಗೆಟಿವ್ ವರದಿ ಕಡ್ಡಾಯವಲ್ಲ ಎಂಬ ನಿರ್ಧಾರ ತೆಗೆದುಕೊಳ್ಳುವ ಸಂಬಂಧ ಸರ್ಕಾರ ಚಿಂತನೆ ನಡೆಸಿದೆ.

ಎರಡೂ ಡೋಸ್ ಲಸಿಕೆ ಪಡೆದ ದೇಶಿ ವಿಮಾನ ಪ್ರಯಾಣಿಕರಿಗೆ ಆರ್‌ಟಿ-ಪಿಸಿಆರ್ ವರದಿ ಕಡ್ಡಾಯವಲ್ಲ: ಕೇಂದ್ರದ ಚಿಂತನೆ
Linkup
ಹೊಸದಿಲ್ಲಿ: ಎರಡೂ ಡೋಸ್ ಕೋವಿಡ್ 19 ಪಡೆದಿರುವ ಆಂತರಿಕ ಪ್ರಯಾಣಿಕರಿಗೆ ನೆಗೆಟಿವ್ ವರದಿ ಕಡ್ಡಾಯವಲ್ಲ ಎನ್ನುವ ಮತ್ತು ತಡೆಮುಕ್ತ ಪ್ರಯಾಣಕ್ಕೆ ಅನುಕೂಲರವಾದ ವ್ಯವಸ್ಥೆಯೊಂದನ್ನು ಸ್ಥಾಪಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಲಸಿಕೆಯ ಎರಡೂ ಲಸಿಕೆಗಳನ್ನು ಪಡೆದಿರುವ ವ್ಯಕ್ತಿಗಳಿಗೆ ಆರ್‌ಟಿ-ಪಿಸಿಆರ್ ಪರೀಕ್ಷೆಯಿಲ್ಲದೆಯೇ ದೇಶದೊಳಗಿನ ವಿಮಾನದಲ್ಲಿ ಪ್ರಯಾಣಿಸಲು ಅವಕಾಶ ನೀಡುವ ಸಂಬಂಧ ಅಂತಿಮ ನಿರ್ಧಾರ ತೆಗೆದುಕೊಳ್ಳಲು ವಿವಿಧ ಸಚಿವಾಲಯಗಳು ಮತ್ತು ಅಧಿಕಾರಿಗಳನ್ನು ಒಳಗೊಂಡ ಜಂಟಿ ತಂಡವೊಂದು ಚರ್ಚೆ ನಡೆಸುತ್ತಿದೆ. ಇದರಲ್ಲಿ ಆರೋಗ್ಯ ಸಚಿವಾಲಯವೂ ಭಾಗಿಯಾಗಿದೆ ಎಂದು ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ತಿಳಿಸಿದ್ದಾರೆ. ನಾಗರಿಕ ವಿಮಾನಯಾನ ಸಚಿವಾಲಯವೊಂದೇ ಈ ನಿರ್ಧಾರವನ್ನು ತೆಗೆದುಕೊಳ್ಳುವುದಿಲ್ಲ. ಸರ್ಕಾರದೊಂದಿಗೆ ಕೆಲಸ ಮಾಡುತ್ತಿರುವ ಆರೋಗ್ಯ ಪರಿಣತರು ಸೇರಿದಂತೆ ನೋಡಲ್ ಏಜೆನ್ಸಿಗಳು, ಪ್ರಯಾಣಿಕರ ಹಿತಾಸಕ್ತಿಗಾಗಿ ನಿರ್ಧಾರ ರೂಪಿಸುವ ನಿಟ್ಟಿನಲ್ಲಿ ಕೊಡುಗೆ ಸಲ್ಲಿಸುತ್ತಿವೆ ಎಂದು ಅವರು ಹೇಳಿದ್ದಾರೆ. ದೇಶದ ಕೆಲವು ರಾಜ್ಯಗಳಲ್ಲಿ ಸಕ್ರಿಯ ಕೋವಿಡ್ ಪ್ರಕರಣಗಳ ಸಂಖ್ಯೆ ಇನ್ನೂ ಅಧಿಕವಾಗಿರುವುದರಿಂದ ಅವುಗಳಿಗೆ ಪ್ರಯಾಣಿಸುವ ಮೊದಲು ದೇಶಿ ಪ್ರಯಾಣಿಕರು ಆರ್‌ಟಿ-ಪಿಸಿಆರ್ ನೆಗೆಟಿವ್ ವರದಿಯನ್ನು ಸಲ್ಲಿಸುವುದು ಪ್ರಸ್ತುತ ಕಡ್ಡಾಯವಾಗಿದೆ. 'ಆರೋಗ್ಯವು ರಾಜ್ಯದ ವಿಚಾರ. ರಾಜ್ಯವೊಂದನ್ನು ಪ್ರವೇಶಿಸುವ ಮುನ್ನ ಆರ್‌ಟಿ-ಪಿಸಿಆರ್ ನೆಗೆಟಿವ್ ವರದಿ ತರುವಂತೆ ಪ್ರಯಾಣಿಕರಿಗೆ ಸೂಚಿಸುವುದು ಕೂಡ ಆ ನಿರ್ದಿಷ್ಟ ರಾಜ್ಯದ ಹಕ್ಕಾಗಿರುತ್ತದೆ' ಎಂದು ಪುರಿ ತಿಳಿಸಿದ್ದಾರೆ.