ಹುದ್ದೆ ಇರಲಿ, ಇಲ್ಲದಿರಲಿ, ರಾಹುಲ್ ಮತ್ತು ಪ್ರಿಯಾಂಕ ಬೆನ್ನಿಗೆ ನಿಲ್ಲುತ್ತೇನೆ - ಸಿಧು

ಕಳೆದ ವಾರ ಪಂಜಾಬ್‌ ಕಾಂಗ್ರೆಸ್‌ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ನವಜೋತ್‌ ಸಿಂಗ್‌ ಸಿಧು, ಹುದ್ದೆ ಇರಲಿ, ಇಲ್ಲದೇ ಇರಲಿ, ರಾಹುಲ್‌ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಪರ ನಿಲ್ಲುತ್ತೇನೆ ಎಂದು ಶನಿವಾರ ಹೇಳಿದ್ದಾರೆ.

ಹುದ್ದೆ ಇರಲಿ, ಇಲ್ಲದಿರಲಿ, ರಾಹುಲ್ ಮತ್ತು ಪ್ರಿಯಾಂಕ ಬೆನ್ನಿಗೆ ನಿಲ್ಲುತ್ತೇನೆ - ಸಿಧು
Linkup
ಹೊಸದಿಲ್ಲಿ: ಕಾಂಗ್ರೆಸ್‌ ಹೈಕಮಾಂಡ್‌ ಪಾಲಿಗೆ ತಲೆನೋವಾಗಿರುವ ಪಂಜಾಬ್‌ ಪ್ರದೇಶ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ , ಶನಿವಾರ ಸ್ವಲ್ಪ ಮಟ್ಟಿಗೆ ನಿರಾಳತೆ ಮೂಡಿಸುವ ಹೇಳಿಕೆ ನೀಡಿ ಹೈಕಮಾಂಡ್‌ ಚಿಂತೆ ದೂರ ಮಾಡಿದ್ದಾರೆ. ಕಳೆದ ವಾರ ರಾಜ್ಯ ಕಾಂಗ್ರೆಸ್‌ ಅಧ್ಯಕ್ಷ ಸ್ಥಾನಕ್ಕೆ ದಿಢೀರ್‌ ರಾಜೀನಾಮೆ ನೀಡಿ, ಹೈಕಮಾಂಡ್‌ಗೆ ಅಚ್ಚರಿ ನೀಡಿದ್ದ ನವಜೋತ್‌ ಸಿಂಗ್‌ ಸಿಧು, ಶನಿವಾರ ಅಪರಾಹ್ನ ಟ್ಟೀಟ್‌ ಮಾಡಿದ್ದು, “ಹುದ್ದೆ ಇರಲಿ, ಇಲ್ಲದೇ ಇರಲಿ, ಹಾಗೂ ಬೆನ್ನಿಗೆ ನಿಲ್ಲುತ್ತೇನೆ,” ಎಂದು ಹೇಳಿದ್ದಾರೆ. ಮುಂದಿನ ವರ್ಷ ನಡೆಯಲಿರುವ ಪಂಜಾಬ್‌ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಸಿಧು ಕಾಂಗ್ರೆಸ್‌ ಪಾಲಿಗೆ ನಿರ್ಣಾಯಕರಾಗಿದ್ದಾರೆ. ಹೀಗಾಗಿ ಅವರ ನಿರ್ಧಾರ ಕೈ ಪಾಳಯಕ್ಕೆ ಪ್ರಮುಖವಾಗಿದೆ. ಪಂಜಾಬ್‌ ಮುಖ್ಯಮಂತ್ರಿಯಾಗಿದ್ದ ಕ್ಯಾಪ್ಟನ್‌ ಅಮರಿಂದರ್‌ ಸಿಂಂಗ್‌ ಜತೆಗಿನ ಸಿಧು ತಿಕ್ಕಾಟದ ಸಂದರ್ಭದಲ್ಲಿ, ಗಾಂಧಿ ಕುಟುಂಬ ಅವರ ಬೆನ್ನಿಗೆ ನಿಂತಿತ್ತು. ಇದೀಗ ಸಿಧು, ಗಾಂಧೀಜಿ ಮತ್ತು ಶಾಸ್ತ್ರೀಜಿ ತತ್ವಗಳನ್ನು ಎತ್ತಿ ಹಿಡಿಯುವುದಾಗಿ ಹೇಳಿದ್ದು, ಕಾಂಗ್ರೆಸ್‌ ಜಯ ಸಾಧಿಸುವುದನ್ನು ಖಚಿತಪಡಿಸಲು ಬದ್ಧವಾಗಿರುವುದಾಗಿ ಹೇಳಿದ್ದಾರೆ. "ಗಾಂಧೀಜಿ ಮತ್ತು ಶಾಸ್ತ್ರೀಜಿಯವರ ತತ್ವಗಳನ್ನು ಎತ್ತಿಹಿಡಿಯುತ್ತೇನೆ… ಹುದ್ದೆ ಇರಲಿ ಅಥವಾ ಇಲ್ಲದೇ ಇರಲಿ, ರಾಹುಲ್‌ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರ ಪರವಾಗಿ ನಿಲ್ಲುತ್ತೇನೆ! ಎಲ್ಲಾ ನಕಾರಾತ್ಮಕ ಶಕ್ತಿಗಳು ನನ್ನನ್ನು ಸೋಲಿಸಲು ಪ್ರಯತ್ನಿಸಲಿ, ಆದರೆ ಪ್ರತಿ ಔನ್ಸ್ ಪಾಸಿಟಿವ್ ಶಕ್ತಿಯೊಂದಿಗೆ ಪಂಜಾಬ್ ಗೆಲ್ಲುವಂತೆ, ಪಂಜಾಬಿಯತ್ (ಜಾಗತಿಕ ಸಹೋದರತ್ವ) ಗೆಲ್ಲುವಂತೆ ಮತ್ತು ಪ್ರತಿ ಪಂಜಾಬಿ ಗೆಲ್ಲುವಂತೆ ಮಾಡುತ್ತೇನೆ," ಎಂದು ಅವರು ಟ್ಟೀಟ್‌ ಮಾಡಿದ್ದಾರೆ. ರಾಜೀನಾಮೆ ನೀಡಿದ್ದರೂ, ನವಜೋತ್‌ ಸಿಂಗ್‌ ಸಿಧು ತಮ್ಮ ನಿರ್ಧಾರದಿಂದ ಹಿಂದೆ ಸರಿಯಲಿದ್ದಾರೆ ಎಂದು ಮೂಲಗಳು ಗುರುವಾರ ಹೇಳಿದ್ದವು. ಹೀಗಾಗಿ ಮುಖ್ಯಸ್ಥರಾಗಿ ಸಿಧು ಮುಂದುವರಿಯಲಿದ್ದಾರೆ. ಪಂಜಾಬ್‌ ಮುಖ್ಯಮಂತ್ರಿ ಚರಣ್‌ಜಿತ್‌ ಸಿಂಗ್‌ ಚನ್ನಿ ಅವರ ಕೆಲವು ನಿರ್ಧಾರಗಳ ಬಗ್ಗೆ ನವಜೋತ್‌ ಸಿಂಗ್‌ ಸಿಧು ಅಸಮಾಧಾನಗೊಂಡಿದ್ದರು ಎನ್ನಲಾಗಿದೆ. ಪಂಜಾಬ್‌ ಪೊಲೀಸ್‌ ಮುಖ್ಯಸ್ಥರು, ಅಡ್ವೊಕೇಟ್‌ ಜನರಲ್‌ ನೇಮಕ ಹಾಗೂ ಕೆಲವು ಶಾಸಕರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವುದು ಸಿಧುಗೆ ಇಷ್ಟವಿರಲಿಲ್ಲ. ಇದೇ ಕಾರಣಕ್ಕೆ ಅವರು ರಾಜೀನಾಮೆ ನೀಡಿದ್ದರು ಎಂದು ತಿಳಿದು ಬಂದಿತ್ತು. ಆದರೆ ತಮ್ಮ ನಿರ್ಧಾರ ಬದಲಿಸಿಕೊಳ್ಳಲು ಸಿದ್ಧ ಎಂದು ಸಿಎಂ ಚರಣ್‌ಜಿತ್‌ ಸಿಂಗ್‌ ಚನ್ನಿ ಹೇಳಿದ್ದರು. ಇದೇ ಹಿನ್ನೆಲೆಯಲ್ಲಿ ಇಬ್ಬರೂ ಭೇಟಿಯಾಗಿ ಸುದೀರ್ಘ ಮಾರುಕತೆ ನಡೆಸಿದ್ದರು. “ಕಾಂಗ್ರೆಸ್‌ ನಾಯಕತ್ವ ನವಜೋತ್‌ ಸಿಂಗ್‌ ಸಿಧು ಅವರನ್ನು ಅರ್ಥ ಮಾಡಿಕೊಂಡಿದೆ ಮತ್ತು ಸಿಧು ಕಾಂಗ್ರೆಸ್‌ ನಾಯಕತ್ವಕ್ಕಿಂತ ದೊಡ್ಡವರಲ್ಲ. ಕಾಂಗ್ರೆಸ್‌ ಹಾಗೂ ಕಾಂಗ್ರೆಸ್‌ ನಾಯಕತ್ವದ ಬಗ್ಗೆ ಯಾವುದೇ ಕಾಳಜಿ ತೋರದೇ ಇರಲು ಅವರೇನು ಅಮರಿಂದರ್‌ ಸಿಂಗ್‌ ಅಲ್ಲ,” ಎಂದು ಸಿಧು ಅವರ ಸಲಹೆಗಾರ ಕೂಡ ಹೇಳಿದ್ದರು.