ಖಾಸಗೀಕರಣಕ್ಕೆ 2 ಬ್ಯಾಂಕ್‌, 1 ವಿಮೆ ಕಂಪನಿಯ ಹೆಸರು ಅಂತಿಮಗೊಳಿಸಿದ ನೀತಿ ಆಯೋಗ

ಖಾಸಗೀಕರಣಗೊಳಿಸಲು ಸಾರ್ವಜನಿಕ ವಲಯದ 2 ಬ್ಯಾಂಕ್‌ಗಳು, 1 ಸಾಮಾನ್ಯ ವಿಮೆ ಕಂಪನಿಯ ಹೆಸರನ್ನು ನೀತಿ ಆಯೋಗವು ಸರಕಾರಕ್ಕೆ ಸಲ್ಲಿಸಿದೆ. ಬಂಡವಾಳ ಹಿಂತೆಗೆತಕ್ಕೆ ಸಂಬಂಧಿಸಿದ ಕಾರ್ಯದರ್ಶಿಗಳ ಗ್ರೂಪ್‌ಗೆ ನೀತಿ ಆಯೋಗವು ಖಾಸಗೀಕರಣದ ಪಟ್ಟಿ ಸಲ್ಲಿಸಿದೆ.

ಖಾಸಗೀಕರಣಕ್ಕೆ 2 ಬ್ಯಾಂಕ್‌, 1 ವಿಮೆ ಕಂಪನಿಯ ಹೆಸರು ಅಂತಿಮಗೊಳಿಸಿದ ನೀತಿ ಆಯೋಗ
Linkup
ಹೊಸದಿಲ್ಲಿ: ಸಾರ್ವಜನಿಕ ವಲಯದ 2 ಬ್ಯಾಂಕ್‌ಗಳು ಮತ್ತು ಒಂದು ಸಾಮಾನ್ಯ ವಿಮೆ ಕಂಪನಿಯನ್ನು ಖಾಸಗೀಕರಣಗೊಳಿಸಲು ನೀತಿ ಆಯೋಗವು ಸರಕಾರಕ್ಕೆ ಹೆಸರಿಸಿದೆ. ಬಂಡವಾಳ ಹಿಂತೆಗೆತಕ್ಕೆ ಸಂಬಂಧಿಸಿದ ಕಾರ್ಯದರ್ಶಿಗಳ ಗ್ರೂಪ್‌ಗೆ ನೀತಿ ಆಯೋಗವು ಖಾಸಗೀಕರಣದ ಪಟ್ಟಿ ಸಲ್ಲಿಸಿದೆ. ಖಾಸಗೀಕರಣಗೊಳ್ಳಲಿರುವ ಬ್ಯಾಂಕ್‌ ಮತ್ತು ವಿಮೆ ಸಂಸ್ಥೆಯಲ್ಲಿನ ಉದ್ಯೋಗಿಗಳ ವೇತನ, ಪಿಂಚಣಿ ಸೇರಿದಂತೆ ಹಿತಾಸಕ್ತಿಯನ್ನು ಸಂಪೂರ್ಣ ರಕ್ಷಿಸಲಾಗುವುದು ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಭರವಸೆ ನೀಡಿದ್ದಾರೆ. ಸಾರ್ವಜನಿಕ ವಲಯದ ಎರಡು ಬ್ಯಾಂಕ್‌, ಒಂದು ಸಾಮಾನ್ಯ ವಿಮೆ ಕಂಪನಿಯ ಜತೆಗೆ, ಏರ್‌ ಇಂಡಿಯಾ, ಬಿಪಿಸಿಎಲ್‌, ಶಿಪ್ಪಿಂಗ್‌ ಕಾರ್ಪೊರೇಷನ್‌ನ ಖಾಸಗೀಕರಣವನ್ನು ಈ ವರ್ಷ ಕೈಗೊಳ್ಳಲು ಸಿದ್ಧತೆ ನಡೆಯುತ್ತಿದೆ. ಬಂಡವಾಳ ಹಿಂತೆಗೆತದ ಮೂಲಕ 1.75 ಲಕ್ಷ ಕೋಟಿ ರೂ. ಸಂಗ್ರಹಿಸುವ ಗುರಿಯನ್ನು ಸರಕಾರ ಹೊಂದಿದೆ. ತೆರಿಗೆ ಸಂಗ್ರಹ ಕೊರತೆ ಎದುರಿಸುತ್ತಿರುವ ಸರಕಾರವು, ತೆರಿಗೆಯೇತರ ಮೂಲಗಳ ಮೂಲಕ ಆದಾಯ ವೃದ್ಧಿಸಲು ಮುಂದಾಗಿದೆ.