ಮೂರು ವಾರಗಳಲ್ಲಿ ಬಾಡಿ ಶೇಪ್ ಸಂಪೂರ್ಣ ಬದಲು; ಹೊಟ್ಟೆ ಬರಿಸಿಕೊಂಡ ಸ್ಟಾರ್ ನಟರು!

ಲಾಕ್‌ಡೌನ್‌ನಲ್ಲಿ ಬಹುತೇಕರು ದಪ್ಪ ಆಗಿದ್ದಾರೆ, ಆದರೆ ಇನ್ನೂ ಕೆಲವರು ಸಮಯದ ಸದ್ಬಳಕೆ ಮಾಡಿಕೊಂಡು ಸಣ್ಣಗಾಗಿದ್ದಾರೆ. ಅಂತೆಯೇ ಸ್ಟಾರ್ ನಟರಿಬ್ಬರು ಸಿಕ್ಸ್ ಪ್ಯಾಕ್ ಹಾಳು ಮಾಡಿಕೊಂಡಿದ್ದಾರೆ.

ಮೂರು ವಾರಗಳಲ್ಲಿ ಬಾಡಿ ಶೇಪ್ ಸಂಪೂರ್ಣ ಬದಲು; ಹೊಟ್ಟೆ ಬರಿಸಿಕೊಂಡ ಸ್ಟಾರ್ ನಟರು!
Linkup
ನಟ ಹಾಗೂ ಅವರು ಇತ್ತೀಚಿನ ಫೋಟೋ ಹಂಚಿಕೊಂಡು ಎಲ್ಲರಿಗೂ ಶಾಕ್ ನೀಡಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಮೂರು ವಾರಗಳ ಹಿಂದಿನ ಫೋಟೋ, ಈಗಿನ ಫೋಟೋವನ್ನು ಅವರು ಹಂಚಿಕೊಂಡಿದ್ದಾರೆ. ಈ ಎರಡು ಫೋಟೋ ನೋಡಿದರೆ ಅವರ ದೇಹದ ಶೇಪ್ ಸಂಪೂರ್ಣ ಬದಲಾಗಿದೆ. ಎರಡು ಫೋಟೋಗಳನ್ನು ಹಂಚಿಕೊಂಡಿರುವ ಮಾರ್ಕ್‌ ವಾಲ್‌ಬಾರ್ಗ್ ಅವರು "ಮೂರು ವಾರಗಳ ಹಿಂದೆ, ಲಾರೆನ್ಸ್ ಅವರಿಗೆ ಧನ್ಯವಾದಗಳು" ಎಂದು ಸೋಶಿಯಲ್ ಮೀಡಿಯಾ ಪೋಸ್ಟ್ ಹಾಕಿದ್ದಾರೆ. ಆ ಪೋಸ್ಟ್‌ಗೆ ಅವರ ಪತ್ನಿ ರಿಯಾ ಡರ್ಹ್ಯಾಮ್ ಕಾಮೆಂಟ್ ಮಾಡಿದ್ದು, 'ಹಾಟ್ ಆಗಿ ಕಾಣಿಸುತ್ತಿದೆ' ಎಂದು ಹೇಳಿದ್ದಾರೆ. 'ಚಬ್ಬಿ, ಚಬ್ಬಿ' ಅಂತ ಕೂಡ ಕಾಮೆಂಟ್ ಬಂದಿದೆ. 'ಲಾಕ್‌ಡೌನ್' ನಂತರ ಹೇಗೆ ಕಾಣಸ್ತಾರೆ ಎಂಬುದಕ್ಕೆ ಉದಾಹರಣೆ ಎಂದು ಕೂಡ ಕಾಮೆಂಟ್ ಬರುತ್ತಿದೆ. ಮಾರ್ಕ್‌ ವಾಲ್‌ಬಾರ್ಗ್ ಅವರು ಜಿಮ್ ವರ್ಕೌಟ್, ಡಯೆಟ್ ಇಲ್ಲದೆ ಈ ರೀತಿ ದಪ್ಪ ಆಗಿದ್ದಾರಾ? ಅಥವಾ ಸಿನಿಮಾಕ್ಕಾಗಿ ಈ ರೀತಿ ಆಗಿದ್ದಾರಾ? ಎಂಬ ಪ್ರಶ್ನೆ ಅಭಿಮಾನಿಗಳಿಗೆ ಕಾಡುತ್ತಿದೆ. ಒಂದು ವೇಳೆ ಸಿನಿಮಾಕ್ಕಾಗಿ ಈ ರೀತಿ ದೇಹ ಬೆಳೆಸಿಕೊಂಡರೆ ಯಾವ ರೀತಿಯ ಸಿನಿಮಾ? ಪಾತ್ರ ಎಂದು ಕುತೂಹಲದಿಂದ ಇದ್ದೇವೆ ಎಂದು ಕೂಡ ಅಭಿಮಾನಿಗಳು ಪ್ರಶ್ನೆ ಮಾಡಿದ್ದಾರೆ. ನಟ ವಿಲ್ ಸ್ಮಿಥ್ ಕೂಡ ನಿಜವಾದ ಫೋಟೋ ಶೇರ್ ಮಾಡಿಕೊಂಡು, "ನನ್ನ ಜೀವನದ ಕೆಟ್ಟ ಶೇಪ್‌ನಲ್ಲಿದ್ದೇನೆ. ನಿಮ್ಮ ಜೊತೆ ರಿಯಲ್ ಆಗಿ ಇದ್ದೇನೆ" ಅಂತ ಕೂಡ ಹೇಳಿದ್ದಾರೆ. ಇನ್ನೂ ಕೆಲವರು ಸೋಶಿಯಲ್ ಮೀಡಿಯಾದ ಇತಿಹಾಸದಲ್ಲಿ ಉತ್ತಮ ಫೋಟೋ ಇದು ಅಂತ ಕೂಡ ಪ್ರತಿಕ್ರಿಯೆ ಬಂದಿದೆ. ಇನ್ನು ಮತ್ತೆ ಈ ನಟರು ಫಿಟ್‌ನೆಸ್‌ಗೆ ಮರಳಲಿದ್ದಾರೆ. ಕಲಾವಿದರು ದೇಹ ಸೌಂದರ್ಯಕ್ಕೆ ಸದಾ ಒತ್ತು ನೀಡುತ್ತಿರುತ್ತಾರೆ. ಆದರೆ ಲಾಕ್‌ಡೌನ್‌ನಿಂದ ಸಾಕಷ್ಟು ಜನರು ದಪ್ಪಗಾಗಿದ್ದರು, ಇನ್ನೂ ಕೆಲವರು ಸಮಯ ಸಿಕ್ಕಿದ್ದರಿಂದ ತೂಕ ಇಳಿಸಿಕೊಂಡಿದ್ದರು.