ನಾನು 20Kg ಸಣ್ಣಗಾದೆ, ಮೊದಲಿಗಿಂತಲೂ ಆರೋಗ್ಯವಾಗಿದ್ದೇನೆ: 'ರಣಧೀರ' ನಟಿ ಖುಷ್ಬೂ ಸುಂದರ್

ಖ್ಯಾತ ನಟಿ ಖುಷ್ಬೂ ಸುಂದರ್ ಅವರು 20 ಕೆಜಿ ತೂಕ ಇಳಿಸಿಕೊಂಡಿದ್ದಾರೆ. ಆದರೆ ಅವರಿಗೆ ಅನಾರೋಗ್ಯವಾಗಿದೆ ಅಂತ ಕೆಲವರು ಹೇಳಿದ್ದಾರಂತೆ. ಅದಕ್ಕೆಲ್ಲ ಖುಷ್ಬೂ ಉತ್ತರ ನೀಡಿದ್ದಾರೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

ನಾನು 20Kg ಸಣ್ಣಗಾದೆ, ಮೊದಲಿಗಿಂತಲೂ ಆರೋಗ್ಯವಾಗಿದ್ದೇನೆ: 'ರಣಧೀರ' ನಟಿ ಖುಷ್ಬೂ ಸುಂದರ್
Linkup
'ರಣಧೀರ', 'ಅಂಜದ ಗಂಡು' ಸಿನಿಮಾ ನಟಿ ಅವರು 20ಕೆಜಿ ತೂಕ ಇಳಿಸಿಕೊಂಡಿದ್ದಾರೆ. ನಟಿ ಖುಷ್ಬೂ ಸಣ್ಣಗಾಗಿದ್ದಕ್ಕೆ ಸಾಕಷ್ಟು ಪಾಸಿಟಿವ್, ನೆಗೆಟಿವ್ ಕಾಮೆಂಟ್ಸ್ ಬಂದಿದೆ. ಅದರಲ್ಲಿ ಅವರಿಗೆ ಅನಾರೋಗ್ಯ ಆಗಿದೆ ಅಂತ ಕೂಡ ಕೆಲವರು ಹೇಳಿದ್ದಾರಂತೆ. ಸಣ್ಣಗಾಗಿದ್ದರ ಬಗ್ಗೆ ಖುಷ್ಬೂ ಪ್ರತಿಕ್ರಿಯೆ ನೀಡಿದ್ದಾರೆ. ದಪ್ಪಗಿದ್ದಾಗಿನ ಫೋಟೋ ಹಾಗೂ ಸಣ್ಣಗಾದ ನಂತರದ ಫೋಟೋವನ್ನು ಖುಷ್ಬೂ ಸುಂದರ್ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅದರ ಜೊತೆಗೆ ಅವರು 20 ಕೆಜಿ ಸಣ್ಣಗಾಗಿದ್ದೇನೆ. "ಮೊದಲಿಗಿಂತಲೂ ನಾನು ಈಗ ಆರೋಗ್ಯವಾಗಿದ್ದೇನೆ. 20ಕೆಜಿ ಸಣ್ಣಗಾಗಿದ್ದೇನೆ. ಆರೋಗ್ಯವೇ ಭಾಗ್ಯ ಎಂಬುದನ್ನು ನೆನಪಿಟ್ಟುಕೊಳ್ಳಿ. ನಿಮ್ಮನ್ನು ನೀವು ನೋಡಿಕೊಳ್ಳಿ. ನನಗೆ ಅನಾರೋಗ್ಯವಾಗಿದೆ ಎಂದು ಕೆಲವರು ಹೇಳಿದ್ದೀರಾ, ನಿಮ್ಮ ಕಾಳಜಿಗೆ ಧನ್ಯವಾದಗಳು. ಈ ಹಿಂದೆಂದಿಗಿಂತಲೂ ನಾನು ಫಿಟ್ ಆಗಿದ್ದೇನೆ. ನಿಮ್ಮಲ್ಲಿ 10 ಜನರಿಗೆ ನಾನು ತೂಕ ಇಳಿಸಿಕೊಳ್ಳಲು ಪ್ರೇರಣೆ ಆದರೆ, ನಾನು ಗೆದ್ದೇ ಎಂದರ್ಥ" ಎಂದು ಖುಷ್ಬೂ ಸುಂದರ್ ಸೋಶಿಯಲ್ ಮೀಡಿಯಾ ಪೋಸ್ಟ್ ಹಾಕಿದ್ದಾರೆ. ಖುಷ್ಬೂ ಸುಂದರ್ ಪೋಸ್ಟ್‌ಗೆ ಸಾಕಷ್ಟು ಕಾಮೆಂಟ್‌ಗಳು ಬಂದಿದ್ದು, ಅನೇಕ ಸೆಲೆಬ್ರಿಟಿಗಳು ಖುಷ್ಬೂ ಅವರು ಸಣ್ಣಗಾಗಿದ್ದು ಕಂಡು ಖುಷಿ ವ್ಯಕ್ತಪಡಿಸಿದ್ದಾರೆ. ಹೇಗೆ ಇದ್ದರೂ ಕೂಡ ನೀವು ಚೆನ್ನ ಅಂತಲೂ ಹಲವರು ಹೇಳಿದ್ದಾರೆ. ಒಟ್ಟಿನಲ್ಲಿ ಇಷ್ಟು ವರ್ಷಗಳಲ್ಲಿ ಖುಷ್ಬೂ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ತೂಕ ಇಳಿಸಿಕೊಂಡಿರೋದನ್ನು ನೋಡಿ ಅನೇಕರು ಅಚ್ಚರಿ ಪಟ್ಟಿದ್ದಾರೆ. 1990ರ ಸಮಯದಲ್ಲಿ ಖುಷ್ಬೂ ಹೇಗೆ ಇದ್ದರೋ ಆ ರೀತಿ ಈಗ ಕಾಣಿಸುತ್ತಿದ್ದಾರೆ ಎಂದು ಅನೇಕರು ಅಭಿಪ್ರಾಯ ಹಂಚಿಕೊಂಡಿದ್ದಾರೆ. ಖುಷ್ಬೂ ಸುಂದರ್ ಹೇಗೆ ಸಣ್ಣಗಾದರು ಎಂದು ಕೂಡ ಕೆಲವರಿಗೆ ಪ್ರಶ್ನೆ ಮೂಡಿರಬಹುದು. ಆರೋಗ್ಯಕರವಾದ ಆಹಾರ, ಮನೆಕೆಲಸ, ಯೋಗ, ವರ್ಕೌಟ್ ಮಾಡಿ ಸಣ್ಣಗಾದೆ ಎಂದು ಖುಷ್ಬೂ ಈ ಹಿಂದೆಯೇ ಹೇಳಿದ್ದರು. ಲಾಕ್‌ಡೌನ್‌ ಸಮಯದಲ್ಲಿ 70 ದಿನಗಳ ಕಾಲ ಮನೆಯ ಎಲ್ಲ ಕೆಲಸವನ್ನು ತಾವೇ ಮಾಡಿದ್ದ ಖುಷ್ಬೂ ಸಹಜವಾಗಿ ತೂಕ ಕಳೆದುಕೊಂಡಿದ್ದರು. ಅಷ್ಟೇ ಅಲ್ಲದೆ ವಾಕಿಂಗ್ ತೂಕ ಇಳಿಸಿಕೊಳ್ಳಲು ಒಳ್ಳೆಯ ವರ್ಕೌಟ್ ಎಂದು ವಾಕಿಂಗ್ ಮಾಡುತ್ತಿದ್ದ ವಿಡಿಯೋವನ್ನು ಖುಷ್ಬೂ ಸುಂದರ್ ಹಂಚಿಕೊಂಡಿದ್ದರು. ಸಣ್ಣಗಾದ ಮೇಲಂತೂ ಖುಷ್ಬೂ ಒಂದಾದ ಮೇಲೆ ಒಂದರಂತೆ ಟ್ರೆಡಿಷನಲ್, ವೆಸ್ಟರ್ನ್ ಡ್ರೆಸ್‌ನಲ್ಲಿರುವ ಫೋಟೋಗಳನ್ನು ಖುಷ್ಬೂ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಾರೆ. 51 ವರ್ಷದ ಖುಷ್ಬೂ ಈ ವಯಸ್ಸಿನಲ್ಲಿಯೂ ದಿನದಿಂದ ದಿನಕ್ಕೆ ಇಷ್ಟೊಂದು ಚೆನ್ನಾಗಿ ಕಾಣಿಸುತ್ತಿರುವುದನ್ನು ಕಂಡು ಕೆಲವರು ಖುಷಿ ವ್ಯಕ್ತಪಡಿಸುತ್ತಿದ್ದಾರೆ. ಧಾರಾವಾಹಿ ನಿರ್ಮಾಣದಲ್ಲಿ ಗಮನಕೊಡುತ್ತಿರುವ ಖುಷ್ಬೂ ಸುಂದರ್ ಅವರು ಸಿನಿಮಾಗಳು, ರಿಯಾಲಿಟಿ ಶೋಗಳಲ್ಲಿಯೂ ಭಾಗವಹಿಸುತ್ತಿದ್ದಾರೆ. ಅಷ್ಟೇ ಅಲ್ಲದೆ ರಾಜಕೀಯದಲ್ಲಿಯೂ ಖುಷ್ಬೂ ಫುಲ್ ಬ್ಯುಸಿಯಿದ್ದಾರೆ. ಸದ್ಯ ಅವರು ತಮಿಳು ಭಾಷೆಯ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ ಎಂದು ಹೇಳಬಹುದು. ಪುನೀತ್ ರಾಜ್‌ಕುಮಾರ್ ಮನೆಗೆ ಇತ್ತೀಚೆಗೆ ಭೇಟಿ ನೀಡಿದ್ದ ಅವರು, ದೊಡ್ಮನೆ ಕುಟುಂಬಕ್ಕೆ ಸಾಂತ್ವನ ಹೇಳಿದ್ದರು. ಅಷ್ಟೇ ಅಲ್ಲದೆ ಕುಮಾರ್ ಬಂಗಾರಪ್ಪ ಪುತ್ರಿ ಮದುವೆಗೂ ಅವರು ಹಾಜರಿ ಹಾಕಿದ್ದರು.