ಸೂಪರ್ ಹಿಟ್ 'ಪೊಕಿರಿ' & 'ವಿಕ್ರಮಾರ್ಕುಡು' ಚಿತ್ರಗಳ ಆಫರ್ ರಿಜೆಕ್ಟ್ ಮಾಡಿದ್ದ 'ಆ ಸ್ಟಾರ್' ಹೀರೋ!

2006ರಲ್ಲಿ ತೆಲುಗಿನಲ್ಲಿ ತೆರೆಕಂಡಿದ್ದ 'ಪೊಕಿರಿ' ಮತ್ತು 'ವಿಕ್ರಮಾರ್ಕುಡು' ಸಿನಿಮಾಗಳು ಆ ಕಾಲಕ್ಕೆ ದೊಡ್ಡ ದಾಖಲೆ ಮಾಡಿದ್ದವು. ಈ ಸಿನಿಮಾಗಳಿಂದ ಮಹೇಶ್ ಬಾಬು ಮತ್ತು ರವಿ ತೇಜಗೆ ದೊಡ್ಡ ಬ್ರೇಕ್ ಸಿಕ್ಕಿತ್ತು. ಆದರೆ ಈ ಸಿನಿಮಾಗಳ ಆಫರ್ ಅನ್ನು ತೆಲುಗಿನ ಸ್ಟಾರ್ ನಟರೊಬ್ಬರು ರಿಜೆಕ್ಟ್ ಮಾಡಿದ್ದರು.

ಸೂಪರ್ ಹಿಟ್ 'ಪೊಕಿರಿ' & 'ವಿಕ್ರಮಾರ್ಕುಡು' ಚಿತ್ರಗಳ ಆಫರ್ ರಿಜೆಕ್ಟ್ ಮಾಡಿದ್ದ 'ಆ ಸ್ಟಾರ್' ಹೀರೋ!
Linkup
ತೆಲುಗು ಚಿತ್ರರಂಗದಲ್ಲಿ ಕಳೆದ 15 ವರ್ಷಗಳಲ್ಲಿ ತೆರೆಕಂಡ ಸೂಪರ್ ಹಿಟ್ ಸಿನಿಮಾಗಳ ಪಟ್ಟಿ ಮಾಡಿದ್ರೆ ಟಾಪ್ 5ರಲ್ಲಿ '' ಮತ್ತು '' ಇದ್ದೇ ಇರುತ್ತವೆ. ಯಾಕೆಂದರೆ, ಇವೆರಡೂ ಸಿನಿಮಾಗಳು ಆ ಕಾಲಕ್ಕೆ ಮಾಡಿದ ಕಲೆಕ್ಷನ್‌ ಸಾಮಾನ್ಯದ್ದೇನಲ್ಲ! 'ವಿಕ್ರಮಾರ್ಕುಡು' ಚಿತ್ರದಿಂದ ರವಿ ತೇಜಗೆ ಭಾರಿ ಜನಪ್ರಿಯತೆ ಸಿಕ್ಕರೆ, ಮಹೇಶ್‌ ಬಾಬು ಕರಿಯರ್‌ಗೆ 'ಪೊಕಿರಿ' ಹೊಸ ತಿರುವು ನೀಡಿತು. ಆದರೆ, ಈ ಎರಡೂ ಸಿನಿಮಾಗಳ ಆಫರ್‌ ಮೊದಲು ಹೋಗಿದ್ದು 'ಪವರ್ ಸ್ಟಾರ್' ಪವನ್ ಕಲ್ಯಾಣ್‌ಗೆ ಅನ್ನೋದು ವಿಶೇಷ. ಆದರೆ, ಅವರು ಈ ಎರಡೂ ಸಿನಿಮಾಗಳನ್ನು ರಿಜೆಕ್ಟ್ ಮಾಡಿ, ತಮಗೆ ದಕ್ಕಬಹುದಾಗಿದ್ದ ಎರಡು ಭರ್ಜರಿ ಹಿಟ್ ಸಿನಿಮಾಗಳನ್ನು ಮಿಸ್ ಮಾಡಿಕೊಂಡರು ಪವನ್ ಕಲ್ಯಾಣ್‌. 'ವಿಕ್ರಮಾರ್ಕುಡು' ಆಫರ್ ಕೊಟ್ಟಿದ್ದ ವಿಜಯೇಂದ್ರ ಪ್ರಸಾದ್! 'ವಿಕ್ರಮಾರ್ಕುಡು' ಚಿತ್ರಕ್ಕೆ ಕಥೆ ಬರೆದವರು ಕೆ.ವಿ. ವಿಜಯೇಂದ್ರ ಪ್ರಸಾದ್ ಅವರು. ಅವರು ಮೊದಲಿಗೆ ಈ ಕಥೆಯನ್ನು ಹೇಳಿದ್ದು ಪವನ್ ಕಲ್ಯಾಣ್‌ಗೆ. ಅವರಿಂದಲೇ ವಿಕ್ರಮ್ ಸಿಂಗ್ ರಾಥೋಡ್ ಪಾತ್ರ ಮಾಡಿಸಬೇಕು ಎಂಬುದು ಅವರ ಇಚ್ಛೆ ಆಗಿತ್ತು. ಆದರೆ, ಪವನ್ ಕಥೆಯನ್ನು ತುಂಬ ಇಷ್ಟಪಟ್ಟರು. ಆದರೆ, ಆ ವೇಳೆ ಸಿನಿಮಾಗಳಿಂದ ಕೊಂಚ ಸಮಯ ಬ್ರೇಕ್ ತೆಗೆದುಕೊಳ್ಳಬೇಕೆಂದು ನಿರ್ಧಾರ ಮಾಡಿದ್ದರು. ಆದ್ದರಿಂದ ಅವರಿಗೆ 'ವಿಕ್ರಮಾರ್ಕುಡು' ಚಿತ್ರದಲ್ಲಿ ನಟಿಸಲು ಸಾಧ್ಯವಾಗಲಿಲ್ಲ. ಅಂತಿಮವಾಗಿ ರವಿ ತೇಜಗೆ ಆ ಸಿನಿಮಾದ ಚಾನ್ಸ್ ಸಿಕ್ಕಿತ್ತು. ಅವರ ವೃತ್ತಿ ಜೀವನಕ್ಕೆ ದೊಡ್ಡ ಅನುಕೂಲವಾಯ್ತು. 'ಪೊಕಿರಿ' ಮಾಡಲಿಲ್ಲವೇಕೆ ಪವನ್? ಪುರಿ ಜಗನ್ನಾಥ್ ಅವರ ಬ್ಲಾಕ್ ಬಸ್ಟರ್ ಸಿನಿಮಾ 'ಪೊಕಿರಿ' ಆಫರ್ ಕೂಡ ಮಹೇಶ್ ಬಾಬುಗಿಂತ ಮೊದಲು ಬಳಿ ಹೋಗಿತ್ತು. ಆದರೆ, ಆ ಸಮಯಕ್ಕೆ ಕಾಲ್‌ಶೀಟ್ ಹೊಂದಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಆಫರ್ ರಿಜೆಕ್ಟ್ ಮಾಡಿದ್ದರಂತೆ ಪವನ್‌. ನಂತರ ಅದು ಮಹೇಶ್ ಬಾಬು ಅವರಿಗೆ ಸಿಕ್ಕಿತ್ತು. ಆನಂತರದ್ದು ಇತಿಹಾಸ! 'ಪೊಕಿರಿ' & 'ವಿಕ್ರಮಾರ್ಕುಡು' ದಾಖಲೆಗಳು 2006ರಲ್ಲಿ ಎರಡು ತಿಂಗಳ ಅಂತರದಲ್ಲಿ ತೆರೆಕಂಡ ಈ ಎರಡೂ ಸಿನಿಮಾಗಳು ಆ ಕಾಲಕ್ಕೆ ಮಾಡಿದ ದಾಖಲೆ ಸಾಮಾನ್ಯದ್ದೇನಲ್ಲ. 11 ಕೋಟಿ ರೂ.ಗಳಲ್ಲಿ ನಿರ್ಮಾಣಗೊಂಡ 'ವಿಕ್ರಮಾರ್ಕುಡು' 25 ಕೋಟಿ ರೂ.ಗಳಿಗೂ ಅಧಿಕ ಗಳಿಕೆ ಮಾಡಿತು. ಜೊತೆಗೆ 6 ಭಾಷೆಗಳಿಗೆ ರಿಮೇಕ್ ಆಯ್ತು. ಕನ್ನಡದಲ್ಲಿ ನಟ ಸುದೀಪ್ ಅದರ ರಿಮೇಕ್‌ನಲ್ಲಿ ನಟಿಸಿದರು. ಇನ್ನು, 'ಪೊಕಿರಿ' ಕೂಡ 10 ರಿಂದ 12 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಾಣಗೊಂಡ 50 ರಿಂದ 60 ಕೋಟಿ ರೂ. ದುಡಿಯಿತು. ಜೊತೆ 5-6 ಭಾಷೆಗಳಿಗೂ ರಿಮೇಕ್ ಆಯಿತು. ಕನ್ನಡಕ್ಕೆ 'ಪೊರ್ಕಿ' ಹೆಸರಿನಲ್ಲಿ ರಿಮೇಕ್ ಆಗಿತ್ತು. ದರ್ಶನ್‌ ಇಲ್ಲಿ ನಾಯಕರಾಗಿ ಕಾಣಿಸಿಕೊಂಡಿದ್ದರು.