ಮುಂಬಯಿ ತಲ್ಲಣ: ಕಾಮೋತ್ತೇಜಕ ಇಂಜಕ್ಷನ್ ನೀಡಿ ಪಿಯು ವಿದ್ಯಾರ್ಥಿನಿ ಮೇಲೆ ನಿರಂತರ ಅತ್ಯಾಚಾರಗೈದ ಪಾಪಿ
ಮುಂಬಯಿ ತಲ್ಲಣ: ಕಾಮೋತ್ತೇಜಕ ಇಂಜಕ್ಷನ್ ನೀಡಿ ಪಿಯು ವಿದ್ಯಾರ್ಥಿನಿ ಮೇಲೆ ನಿರಂತರ ಅತ್ಯಾಚಾರಗೈದ ಪಾಪಿ
ನೆರೆಮನೆ ವ್ಯಕ್ತಿ ತನಗೆ ಕಾಮೋತ್ತೇಜಕ ಮಾತ್ರೆ ಮತ್ತು ಇಂಜಕ್ಷನ್ಗಳನ್ನು ನೀಡಿ ಅತ್ಯಾಚಾರ ಎಸಗಿದ. ಆತನ ಪತ್ನಿಗೂ ಈ ಕೃತ್ಯ ತಿಳಿದಿತ್ತು. ಆಕೆ ಕೂಡ ಗಂಡನಿಗೆ ಕುಮ್ಮಕ್ಕು ನೀಡಿದ್ದಳು, ಎಂದು ಸಂತ್ರಸ್ತೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಈ ಸಂಬಂಧ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಈ ಬಗ್ಗೆ ತನಿಖೆ ನಡೆಯುತ್ತಿದೆ.
ಮುಂಬಯಿ: ಪದವಿಪೂರ್ವ ಕಾಲೇಜು ವಿದ್ಯಾರ್ಥಿನಿ ಮೇಲೆ ನಿರಂತರ ಎಂಟು ವರ್ಷಗಳಿಂದ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬಯಿಯ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. 16 ವರ್ಷದ ಸಂತ್ರಸ್ತ ವಿದ್ಯಾರ್ಥಿನಿಯು ಅಂಧೇರಿಯ ವ್ಯಾಪಾರಿಯೊಬ್ಬರ ಪುತ್ರಿಯಾಗಿದ್ದು, ಉತ್ತರ ಪ್ರದೇಶದ ತನ್ನ ನೆರೆ ಮನೆಯ ಕುಟುಂಬವೊಂದರಿಂದ ನಿರಂತರ ದೌರ್ಜನ್ಯಕ್ಕೆ ಒಳಗಾಗಿದ್ದಾಗಿ ತಿಳಿಸಿದ್ದಾಳೆ.
''ನೆರೆಮನೆ ವ್ಯಕ್ತಿ ತನಗೆ ಕಾಮೋತ್ತೇಜಕ ಮಾತ್ರೆ ಮತ್ತು ಇಂಜಕ್ಷನ್ಗಳನ್ನು ನೀಡಿ ಅತ್ಯಾಚಾರ ಎಸಗಿದ. ಆತನ ಪತ್ನಿಗೂ ಈ ಕೃತ್ಯ ತಿಳಿದಿತ್ತು. ಆಕೆ ಕೂಡ ಗಂಡನಿಗೆ ಕುಮ್ಮಕ್ಕು ನೀಡಿದ್ದಳು,'' ಎಂದು ಸಂತ್ರಸ್ತೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಈ ದಂಪತಿಯ ಜತೆಗೆ ದೌರ್ಜನ್ಯಕ್ಕೆ ಕಾರಣರಾದ ಬಾಲಕಿಯ ಇನ್ನಿಬ್ಬರು ಸಂಬಂಧಿಕರನ್ನು ಕೂಡ ಪೊಲೀಸರು ಬಂಧಿಸಿದ್ದಾರೆ. ಬಾಲಕಿಯ ಚಿಕ್ಕಪ್ಪ ಮತ್ತು ಆತನ 19 ವರ್ಷದ ಪುತ್ರ ಈಗ ಜೈಲಿನಲ್ಲಿದ್ದಾರೆ.