2ನೇ ಅವಧಿಗೆ ಸಿಎಂ ಆಗಿ ಪಿಣರಾಯಿ ವಿಜಯನ್ ಪ್ರಮಾಣ ವಚನ; ಪ್ರಧಾನಿ ಮೋದಿ ಅಭಿನಂದನೆ

ಕೇರಳದ ಮುಖ್ಯಮಂತ್ರಿಯಾಗಿ ಪಿಣರಾಯಿ ವಿಜಯನ್ ಗುರುವಾರ ಎರಡನೇ ಬಾರಿಗೆ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ತಿರುವನಂತಪುರಂನ ಸೆಂಟ್ರಲ್ ಸ್ಟೇಡಿಯಂನಲ್ಲಿ ಕೋವಿಡ್ ನಿಯಮಗಳೊಂದಿಗೆ ಪ್ರಮಾಣವಚನ ಸಮಾರಂಭ ನಡೆಯಿತು. ಸಿಪಿಐ (ಎಂ) ಪಕ್ಷವನ್ನು ಏಪ್ರಿಲ್ 6 ರ ವಿಧಾನಸಭಾ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವಿನಿಂದ ಮುನ್ನಡೆಸಿದ್ದರು.

2ನೇ ಅವಧಿಗೆ ಸಿಎಂ ಆಗಿ ಪಿಣರಾಯಿ ವಿಜಯನ್ ಪ್ರಮಾಣ ವಚನ; ಪ್ರಧಾನಿ ಮೋದಿ ಅಭಿನಂದನೆ
Linkup
ತಿರುವನಂತಪುರಂ: ಸತತ ಎರಡನೇ ಅವಧಿಗೆ ಕೇರಳ ಮಖ್ಯಮಂತ್ರಿಯಾಗಿ ಸಿಪಿಐ(ಎಂ) ನಾಯಕ ಪಿಣರಾಯಿ ವಿಜಯನ್‌ ಗುರುವಾರ ಪ್ರಮಾಣ ವಚನ ಸ್ವೀಕರಿಸಿದರು. ನಗರದ ಸೆಂಟ್ರಲ್‌ ಸ್ಟೇಡಿಯಂನಲ್ಲಿ ಕೋವಿಡ್‌ ಶಿಷ್ಟಾಚಾರದಂತೆ ನಡೆದ ಸರಳ ಸಮಾರಂಭದಲ್ಲಿ ಸಿಎಂ ಜತೆ ಎಲ್‌ಡಿಎಫ್‌ ಮೈತ್ರಿಕೂಟದ 19 ಸಚಿವರೂ ಪ್ರಮಾಣ ವಚನ ಸ್ವೀಕರಿಸಿದರು. ಪಿಣರಾಯಿ ಸೇರಿ 14 ಮಂದಿ ಭಾರತೀಯ ಸಂವಿಧಾನದ ಹೆಸರಿನಲ್ಲಿ, ಐವರು ದೇವರ ಹೆಸರಿನಲ್ಲಿ, ಒಬ್ಬರು ಅಲ್ಲಾಹುವಿನ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಪ್ರಧಾನಿ ಅವರು ಟ್ವೀಟ್‌ ಮಾಡಿ ಪಿಣರಾಯಿ ಅವರನ್ನು ಅಭಿನಂದಿಸಿದ್ದಾರೆ. ನಿರೀಕ್ಷೆಯಂತೆ ವೀಣಾ ಜಾರ್ಜ್‌ ಅವರಿಗೆ ಆರೋಗ್ಯ ಖಾತೆ ನೀಡಲಾಗಿದೆ. ಹಿಂದಿನ ಸರಕಾರದಲ್ಲಿ ಕೆ.ಕೆ.ಶೈಲಜಾ ಅವರು ಈ ಖಾತೆಯನ್ನು ಯಶಸ್ವಿಯಾಗಿ ನಿಭಾಯಿಸಿದ್ದರು. ಪ್ರತಿಪಕ್ಷ ಯುಡಿಎಫ್‌ ನಾಯಕರು ಕಾರ್ಯಕ್ರಮದಲ್ಲಿ ಗೈರಾಗಿದ್ದರು. ಆದರೆ, ಸಮಾರಂಭಕ್ಕೂ ಮುನ್ನ ಪಿಣರಾಯಿ ಅವರಿಗೆ ಕರೆ ಮಾಡಿದ್ದ ಕಾಂಗ್ರೆಸ್‌ ಮುಖಂಡ ರಮೇಶ್‌ ಚೆನ್ನಿತ್ತಾಲ ಅವರು, ಕೊರೊನಾ ಕಾರಣದಿಂದ ಗೈರಾಗುತ್ತಿದ್ದೇವೆ. ಕಾರ್ಯಕ್ರಮದ ನೇರ ಪ್ರಸಾರ ವೀಕ್ಷಿಸುತ್ತೇವೆ ಎಂದು ತಿಳಿಸಿದರು. ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಹೆಚ್ಚು ಜನ ಸೇರದಂತೆ ನೋಡಿಕೊಳ್ಳಬೇಕು ಎಂದು ಕೇರಳ ಹೈಕೋರ್ಟ್‌ ಆದೇಶಿಸಿತ್ತು.