ಭಾರತದ ನಕ್ಷೆಯಲ್ಲಿ ಲಡಾಕ್ಅ‌ನ್ನು ಪ್ರತ್ಯೇಕ ದೇಶವೆಂದು ತೋರಿಸಿದ ಟ್ವಿಟರ್‌: ಮತ್ತೆ ಎಡವಟ್ಟು

ಜಮ್ಮು-ಕಾಶ್ಮೀರದ ತಪ್ಪು ನಕ್ಷೆಯನ್ನು ತೋರಿಸುವ ಮೂಲಕ ಸರಕಾರದ ಕೆಂಗಣ್ಣಿಗೆ ಗುರಿಯಾಗಿದೆ. ಭಾರತದ ನಕ್ಷೆಯಲ್ಲಿ ಜಮ್ಮು-ಕಾಶ್ಮೀರವನ್ನು ತಪ್ಪಾಗಿ ತೋರಿಸಿರುವುದಲ್ಲದೆ, ಕೇಂದ್ರಾಡಳಿತ ಪ್ರದೇಶ ಲಡಾಕ್‌ ಅನ್ನು ಪ್ರತ್ಯೇಕ ದೇಶವೆಂದು ಟ್ವಿಟರ್‌ ತನ್ನ ವೆಬ್‌ಸೈಟ್‌ನಲ್ಲಿ ತೋರಿಸಿದೆ.

ಭಾರತದ ನಕ್ಷೆಯಲ್ಲಿ ಲಡಾಕ್ಅ‌ನ್ನು ಪ್ರತ್ಯೇಕ ದೇಶವೆಂದು ತೋರಿಸಿದ ಟ್ವಿಟರ್‌: ಮತ್ತೆ ಎಡವಟ್ಟು
Linkup
ಹೊಸದಿಲ್ಲಿ: ಕೇಂದ್ರ ಸರಕಾರದೊಂದಿಗೆ ಹೊಸ ಐಟಿ ಮಾರ್ಗಸೂಚಿಗಳ ಪಾಲನೆ ವಿಚಾರದಲ್ಲಿ ಈಗಾಗಲೇ ಸಂಘರ್ಷಕ್ಕೆ ಇಳಿದಿರುವ , ಜಮ್ಮು-ಕಾಶ್ಮೀರದ ವಿಚಾರದಲ್ಲಿ ಹೊಸ ವಿವಾದ ಮೈಮೇಲೆ ಎಳೆದುಕೊಂಡಿದೆ. ಜಮ್ಮು-ಕಾಶ್ಮೀರದ ತಪ್ಪು ನಕ್ಷೆಯನ್ನು ತೋರಿಸುವ ಮೂಲಕ ಸರಕಾರದ ಕೆಂಗಣ್ಣಿಗೆ ಗುರಿಯಾಗಿದೆ. ಭಾರತದ ನಕ್ಷೆಯಲ್ಲಿ ಜಮ್ಮು-ಕಾಶ್ಮೀರವನ್ನು ತಪ್ಪಾಗಿ ತೋರಿಸಿರುವುದಲ್ಲದೆ, ಕೇಂದ್ರಾಡಳಿತ ಪ್ರದೇಶ ಅನ್ನು ಪ್ರತ್ಯೇಕ ದೇಶವೆಂದು ಟ್ವಿಟರ್‌ ತನ್ನ ವೆಬ್‌ಸೈಟ್‌ನಲ್ಲಿ ತೋರಿಸಿದೆ. ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿರುವ ಸರಕಾರ ಟ್ವಿಟರ್‌ಗೆ ನೋಟಿಸ್‌ ಜಾರಿ ಮಾಡಿದೆ. ಈ ಮುನ್ನ, ಲೆಹ್‌ ಅನ್ನು ಚೀನಾದ ಭಾಗವೆಂದು ತೋರಿಸುವ ಮೂಲಕ ಟ್ವಿಟರ್‌ ವಿವಾದಕ್ಕೆ ಗುರಿಯಾಗಿದ್ದನ್ನು ಸ್ಮರಿಸಬಹುದು. ಮತ್ತೆ ನಿಯಮ ಉಲ್ಲಂಘನೆ! ಟ್ವಿಟರ್‌ ಚಂದಾದಾರರ ದೂರುಗಳನ್ನು ಆಲಿಸುವುದಕ್ಕೆ ನೇಮಕ ಮಾಡಲಾಗಿದ್ದ ಅಧಿಕಾರಿ ಧರ್ಮೇಂದ್ರ ಚತುರ್‌ ಅವರ ನಿರ್ಗಮನದ ಬೆನ್ನಲ್ಲೇ ಅಮೆರಿಕದ ಕ್ಯಾಲಿಫೋರ್ನಿಯಾ ಮೂಲದ ವ್ಯಕ್ತಿಯನ್ನು ಆ ಹುದ್ದೆಗೆ ನೇಮಕ ಮಾಡುವ ಮೂಲಕ ಟ್ವಿಟರ್‌ ಮತ್ತೊಮ್ಮೆ ಐಟಿ ನಿಯಮ ಉಲ್ಲಂಘಿಸಿದೆ. ಟ್ವಿಟರ್‌ ಗ್ಲೋಬಲ್‌ನ ಕಾನೂನು ನೀತಿ ನಿರ್ದೇಶಕ ಜೆರೆಮಿ ಕೆಸೆಲ್‌ ಅವರನ್ನು ಟ್ವಿಟರ್‌ ಇಂಡಿಯಾದಲ್ಲಿ ದೂರು ಆಲಿಸುವ ಅಧಿಕಾರಿಯಾಗಿ ಟ್ವಿಟರ್‌ ನೇಮಿಸಿದೆ. ಎಲ್ಲಾ ನೋಡಲ್‌ ಅಧಿಕಾರಿಗಳು, ಭಾರತೀಯ ಮೂಲದವರೇ ಆಗಿರಬೇಕೆಂದು ನಿಯಮವಿದ್ದರೂ, ಟ್ವಿಟರ್‌ ಇದನ್ನು ಉಲ್ಲಂಘಿಸಿದೆ. ಹೊಸ ಐಟಿ ಕಾನೂನುಗಳ ಪಾಲನೆಗೆ ಸಂಬಂಧಿಸಿದಂತೆ ಕೇಂದ್ರ ಸರಕಾರ ಮತ್ತು ಟ್ವಿಟರ್‌ ಜಟಾಪಟಿ ನಡುವೆಯೇ ಚತುರ್‌ ತಮ್ಮ ಸ್ಥಾನದಿಂದ ನಿರ್ಗಮಿಸಿದ್ದರು.