ಪ್ರಿಯಕರನೊಂದಿಗೆ ಪತ್ನಿಯ ಮದುವೆ ಮಾಡಿಸಿದ ಪತಿ: ಹೀಗೊಂದು ರಿಯಲ್ ಲೈಫ್ ಸ್ಟೋರಿ!

ಮದುವೆಯಾದ ಮೇಲೂ ಪ್ರಿಯಕರನ ಕನವರಿಕೆಯಲ್ಲಿದ್ದ ಪತ್ನಿಯ ದು:ಖ ನೋಡಲಾಗದ ಪತಿಯೋರ್ವ, ಪ್ರಿಯಕರನೊಂದಿಗೆ ಆಕೆಯ ಮದುವೆ ಮಾಡಿಸಿದ ಘಟನೆ ಗುರುಗ್ರಾಮ್‌ನಲ್ಲಿ ನಡೆದಿದೆ. ತನ್ನ ಪತ್ನಿಯನ್ನು ಆಕೆಯ ಪ್ರಿಯಕರನಿಗೆ ಒಪ್ಪಿಸಿದ ಪತಿಯ ನಡೆಗೆ ಮೆಚ್ಚುಗೆ ವ್ಯಕ್ತವಾಗಿದೆ.

ಪ್ರಿಯಕರನೊಂದಿಗೆ ಪತ್ನಿಯ ಮದುವೆ ಮಾಡಿಸಿದ ಪತಿ: ಹೀಗೊಂದು ರಿಯಲ್ ಲೈಫ್ ಸ್ಟೋರಿ!
Linkup
ಗುರುಗ್ರಾಮ್: ಮದುವೆಯಾದ ಮೇಲೂ ಪ್ರಿಯಕರನ ಕನವರಿಕೆಯಲ್ಲಿದ್ದ ಪತ್ನಿಯ ದು:ಖ ನೋಡಲಾಗದ ಪತಿಯೋರ್ವ, ಪ್ರಿಯಕರನೊಂದಿಗೆ ಆಕೆಯ ಮದುವೆ ಮಾಡಿಸಿದ ಘಟನೆ ಗುರುಗ್ರಾಮ್‌ನಲ್ಲಿ ನಡೆದಿದೆ. ಯಾವುದೇ ಬಾಲಿವುಡ್ ಸಿನಿಮಾಗೂ ಕಡಿಮೆ ಇಲ್ಲದ ಈ ಘಟನೆಯಲ್ಲಿ ಪಂಕಜ್ ಶರ್ಮಾ ಎಂಬ ವ್ಯಕ್ತಿ ಹೀರೋ ಆಗಿ ಮೆರೆದಿದ್ದಾರೆ. ಹೌದು, ಗುರುಗ್ರಾಮ್‌ನ ಖಾಸಗಿ ಕಂಪನಿಯೊಂದರಲ್ಲಿ ಅಕೌಂಟಂಟ್ ಆಗಿರುವ ಪಂಕಜ್ ಶರ್ಮಾ ಕಳೆದ ಮೇನಲ್ಲಿ ಕೋಮಲ್ ಎಂಬಾಕೆಯೊಂದಿಗೆ ಮದುವೆಯಾಗಿದ್ದರು. ಆದರೆ ಮದುವೆ ಬಳಿಕ ಕೋಮಲ್ ತನ್ನ ಪತಿ ಪಂಕಜ್ ಅವರೊಂದಿಗೆ ಉತ್ತಮ ಸಂಬಂಧ ಹೊಂದಿರಲಿಲ್ಲ. ಕೋಮಲ್ ತನ್ನೊಂದಿಗೆ ಸರಿಯಾಗಿ ವರ್ತಿಸದಿರುವುದನ್ನು ಗಮನಿಸಿದ ಪಂಕಜ್, ಆಕೆಯನ್ನು ಸಮಾಧಾನದಿಂದ ಕೂರಿಸಿಕೊಂಡು ಸಮಸ್ಯೆ ಏನು ಎಂದು ಕೇಳಿದ್ದಾರೆ. ಆಗ ಕೋಮಲ್ ತಾನು ಪಿಂಟೂ ಎಂಬಾತನನ್ನು ಪ್ರೀತಿಸುತ್ತಿದ್ದು, ಆತನೊಂದಿಗೆ ಮದುವೆಯಾಗಬೇಕು ಎಂದು ಬಯಸಿದ್ದೆ. ಆದರೆ ಮನೆಯವರ ಒತ್ತಾಯಕ್ಕೆ ಮಣಿದು ಅನಿವಾರ್ಯವಾಗಿ ನಿಮ್ಮೊಂದಿಗೆ ಮದುವೆಯಾಗಿದ್ದಾಗಿ ಹೇಳಿದ್ದಾಳೆ. ಕೋಮಲ್ ಪ್ರೇಮ ಕಥೆಯನ್ನು ತಿಳಿದುಕೊಂಡ ಪಂಕಜ್, ಆಕೆಯ ಪ್ರಿಯಕ ಪಿಂಟೂವಿನೊಂದಿಗೆ ಸಂಪರ್ಕ ಸಾಧಿಸಿದ್ದಾರೆ. ಕೋಮಲ್‌ಳನ್ನು ಮದುವೆಯಾಗುವಂತೆ ಪಿಂಟೂವಿನ ಮನವೋಲಿಸಿದ್ದಾರೆ. ಅಲ್ಲದೇ ಇಬ್ಬರ ಮದುವೆಗೆ ಸಿದ್ಧತೆ ಕೂಡ ಮಾಡಿ, ಪ್ರೇಮಿಗಳನ್ನು ಒಂದಾಗಿಸಿದ್ದಾರೆ. ಕೋಮಲ್ ಮತ್ತು ಪಿಂಟೂ ಮದುವೆಯಲ್ಲಿ ಪಂಕಜ್ ಮನೆಯವರೂ ಭಾಗಿಯಾಗಿ ವಧು-ವರನನ್ನು ಆಶೀರ್ವದಿಸಿರುವುದು ವಿಶೇಷ. ಪ್ರೇಮಿಗಳನ್ನು ಒಂದು ಮಾಡಿದ ಪಂಕಜ್ ಅವರಿಗೆ ಪ್ರಶಂಸೆಯ ಸುರಿಮಳೆಯಾಗುತ್ತಿದೆ. 1999ರಲ್ಲಿ ಸಲ್ಮಾನ್ ಖಾನ್, ಐಶ್ವರ್ಯ ರೈ ಹಾಗೂ ಅಜಯ್ ದೇವಗನ್ ನಟನೆಯ 'ಹಮ್ ದಿಲ್ ದೇಚುಕೆ ಸನಮ್' ಎಂಬ ಬಾಲಿವುಡ್ ಚಿತ್ರ ಇಂತದ್ದೇ ಕೈಥಾಹಂದರವನ್ನು ಹೊಂದಿತ್ತು. ಆದರೆ ಅಂತ್ಯದಲ್ಲಿ ಐಶ್ವರ್ಯಾ ರೈ ತಾನು ಮದುವೆಯಾದ ಅಜಯ್ ದೇವಗನ್ ಅವರನ್ನೇ ಆಯ್ಕೆ ಮಾಡಿಕೊಳ್ಳುವ ಕಥೆ ಇದಾಗಿತ್ತು. ಆದರೆ ಈ ನೈಜ ಘಟನೆಯಲ್ಲಿ ಕೋಮಲ್ ತನ್ನ ಪ್ರಿಯಕರ ಪಿಂಟೂವನ್ನು ಮದುವೆಯಾಗಿದ್ದಾಳೆ.