'ಮಾದಕ ಚೆಲುವೆ' ಸನ್ನಿ ಲಿಯೋನ್‌ಗೆ ಶುರುವಾಯ್ತು ತಮಿಳು ಕಲಿಯುವ ಮೋಹ! ಇದರ ಹಿಂದಿನ ಕಥೆಯೇನು?

ಬಾಲಿವುಡ್‌ನ ಮಾದಕ ನಟಿ ಸನ್ನಿ ಲಿಯೋನ್‌ಗೆ ಆಗಾಗ ದಕ್ಷಿಣ ಭಾರತದ ಮೇಲೆ ಒಲವು ಮೂಡುತ್ತದೆ. ಈಚೆಗೆ ಅವರು ಕನ್ನಡ ಸಿನಿಮಾವೊಂದರ ಹಾಡಿಗೆ ಹೆಜ್ಜೆ ಹಾಕಿದ್ದರು. ಈಗ ಅವರಿಗೆ ತಮಿಳಿನ ಮೇಲೆ ಒಲವು ಮೂಡಿದೆ.

'ಮಾದಕ ಚೆಲುವೆ' ಸನ್ನಿ ಲಿಯೋನ್‌ಗೆ ಶುರುವಾಯ್ತು ತಮಿಳು ಕಲಿಯುವ ಮೋಹ! ಇದರ ಹಿಂದಿನ ಕಥೆಯೇನು?
Linkup
ಮಾಜಿ ನೀಲಿ ತಾರೆ ಈಗ ಬಾಲಿವುಡ್‌ನಲ್ಲಿ ಸಕ್ರಿಯರಾಗಿದ್ದಾರೆ. ಆಗೊಮ್ಮೆ ಹೀಗೊಮ್ಮೆ ದಕ್ಷಿಣ ಭಾರತದ ಕಡೆಗೂ ಸನ್ನಿ ಕಣ್ಣು ಹಾಯಿಸುತ್ತಾರೆ. ಅವರು ಬರುವುದು ಕೂಡ ಐಟಂ ಸಾಂಗ್, ಅತಿಥಿ ಪಾತ್ರಗಳನ್ನು ಮಾಡಲು ಮಾತ್ರ. ಆದರೆ ಈಗ ಅವರಿಗೆ ಇದ್ದಕಿದ್ದಂತೆಯೇ ತಮಿಳಿನ ಮೋಹ ಹೆಚ್ಚಾಗಿದೆ. ಹೌದು, ಸನ್ನಿ ಈಗ ತಮಿಳು ಕಲಿಕೆಯಲ್ಲಿ ಬ್ಯುಸಿ ಆಗಿದ್ದಾರೆ. ಅಷ್ಟಕ್ಕೂ ಇದರ ಹಿಂದಿನ ಕಥೆ ಏನು? ತಮಿಳು ಸಿನಿಮಾಗೆ ಸನ್ನಿ ನಾಯಕಿನಿರ್ದೇಶಕ ಯುವನ್ ಹೊಸದೊಂದು ಐತಿಹಾಸಿಕ ಹಾರರ್‌ ಕಾಮಿಡಿ ಸಿನಿಮಾವನ್ನು ಕೈಗೆತ್ತಿಕೊಂಡಿದ್ದು, ಅದರಲ್ಲಿ ನಾಯಕಿಯಾಗಿ ಸನ್ನಿ ಇರಲಿದ್ದಾರೆ. ವಿಶೇಷವೆಂದರೆ, ಈ ಸಿನಿಮಾದ ಕಥೆ ಎರಡು ಭಾಗಗಳಲ್ಲಿ ನಡೆಯಲಿದೆಯಂತೆ. ಒಂದು ಪ್ರಸ್ತುತ ಜನರೇಷನ್‌ನ ಕಥೆಯಾಗಿದ್ದರೆ, ಮತ್ತೊಂದು 1 ಸಾವಿರ ವರ್ಷಗಳ ಹಿಂದಿನ ಕಥೆಯಂತೆ. ಸನ್ನಿ ಇಲ್ಲಿ ರಾಣಿಯಾಗಿ ಕಾಣಿಸಿಕೊಳ್ಳುವುದು ಮತ್ತೊಂದು ವಿಶೇಷ. ಐತಿಹಾಸಿಕ ಕಥೆಯೊಂದಿಗೆ ಹಾರರ್‌ ಕಾಮಿಡಿಯನ್ನು ಬಳಸಿಕೊಂಡಿರುವುದರಿಂದ ಈ ಸಿನಿಮಾದ ಮೇಲೆ ಕುತೂಹಲ ಹೆಚ್ಚಾಗಿದೆ. ಮುಂಬೈನಲ್ಲಿ ಅದ್ದೂರಿ ಸೆಟ್ಈ ಸಿನಿಮಾದ ಬಹುತೇಕ ದೃಶ್ಯಗಳನ್ನು ಚೆನ್ನೈನಲ್ಲಿ ಚಿತ್ರೀಕರಣ ಮಾಡಲಿದ್ದೇವೆ. ಐತಿಹಾಸಿಕ ಕಥೆಯ ಇರುವ ದೃಶ್ಯಗಳನ್ನು ಮುಂಬೈನಲ್ಲಿ ಸೆಟ್ ಹಾಕಿ ಶೂಟಿಂಗ್ ಮಾಡಲಿದ್ದೇವೆ. ನಾನು ಮೂರು ವರ್ಷಗಳ ಹಿಂದೆಯೇ ಸ್ಕ್ರಿಪ್ಟ್‌ ಸಿದ್ಧಗೊಂಡಿತ್ತು. ಆರು ತಿಂಗಳ ಹಿಂದೆ ನಿರ್ಮಾಪಕರಾದ ಶಕ್ತಿ ಮತ್ತು ಶಶಿಕುಮಾರ್ ಅವರಿಗೆ ಕಥೆ ಹೇಳಿದೆ, ಅವರು ತುಂಬ ಇಷ್ಟಪಟ್ಟರು. ಆನಂತರ ದೊಡ್ಡ ನಟಿಯೇ ಈ ಪಾತ್ರ ಮಾಡಬೇಕು ಎಂದು ಅವರು ನಿರ್ಧಾರ ಮಾಡಿದರು. ಯಾಕೆಂದರೆ, ಇದೊಂದು ಪವರ್ ಫುಲ್ ಆಗಿರುವಂತಹ ಪಾತ್ರ. ಅದಕ್ಕೆ ಸನ್ನಿ ಲಿಯೋನ್ ಸೂಕ್ತವಾಗಿ ಹೊಂದಿಕೊಳ್ಳುತ್ತಾರೆ ಎಂದೆನಿಸಿತು' ಎಂದು ಹೇಳುತ್ತಾರೆ ಯುವನ್. ರಾಣಿಯಾದ ಸನ್ನಿ'ಸನ್ನಿ ಅವರನ್ನೇ ಆಯ್ಕೆ ಮಾಡಬೇಕೆಂದು ಅವರೊಂದಿಗೆ ಮೀಟಿಂಗ್ ಫಿಕ್ಸ್ ಮಾಡಿದ್ದೆವು. ಅವರು ಕಥೆ ಕೇಳಿ ತುಂಬ ಎಂಜಾಯ್ ಮಾಡಿದರು. ಅಲ್ಲದೆ, ತಕ್ಷಣವೇ ನಟಿಸಲು ಒಪ್ಪಿಕೊಂಡರು. ಈ ಹಿಂದೆಯೂ ಅವರು ಐತಿಹಾಸಿಕ ಕಥೆ ಇರುವ ಸಿನಿಮಾ ಮಾಡಿದ್ದಾರೆ. ಆದರೆ, ಇದು ಕೊಂಚ ಬೇರೆ ಥರದ ಹಾರರ್ ಕಾಮಿಡಿ ಇರುವ ಕಥೆ. ಕಾಲಿವುಡ್‌ನಲ್ಲಿ ಇಂಥದ್ದೊಂದು ಪ್ರಯತ್ನ ಇಲ್ಲಿವರೆಗೂ ಆಗಿಲ್ಲ. ಫ್ಲಾಶ್‌ಬ್ಯಾಕ್‌ ಎಪಿಸೋಡ್‌ನಲ್ಲಿ ಅವರು ರಾಣಿಯಾಗಿ ಕಾಣಿಸಿಕೊಳ್ಳಲಿದ್ದಾರೆ' ಎಂದು ಯುವನ್ ಹೇಳಿದ್ದಾರೆ.