ಹೊಸವರ್ಷದ ಮೇಲೆ ಕಣ್ಣಿಟ್ಟ ರಾಜಮೌಳಿ; 'ಆರ್‌ಆರ್‌ಆರ್' ಸಿನಿಮಾ ರಿಲೀಸ್ ದಿನಾಂಕ ಮತ್ತೊಮ್ಮೆ ಬದಲು!

ಎಸ್‌ಎಸ್ ರಾಜಮೌಳಿ ನಿರ್ದೇಶನದ, ಜ್ಯೂನಿಯರ್ ಎನ್‌ಟಿಆರ್, ರಾಮ್ ಚರಣ್ ತೇಜ ಅಭಿನಯದ 'ಆರ್‌ಆರ್‌ಆರ್‌' ಸಿನಿಮಾ ರಿಲೀಸ್ ದಿನಾಂಕವನ್ನು ಮತ್ತೊಮ್ಮೆ ಬದಲಾಯಿಸಿದೆ. ಇದಕ್ಕೆ ಕಾರಣ ಏನು?

ಹೊಸವರ್ಷದ ಮೇಲೆ ಕಣ್ಣಿಟ್ಟ ರಾಜಮೌಳಿ; 'ಆರ್‌ಆರ್‌ಆರ್' ಸಿನಿಮಾ ರಿಲೀಸ್ ದಿನಾಂಕ ಮತ್ತೊಮ್ಮೆ ಬದಲು!
Linkup
ಅಕ್ಟೋಬರ್ 13ಕ್ಕೆ ನಿರ್ದೇಶನದ ಬಹುನಿರೀಕ್ಷಿತ 'ಆರ್‌ಆರ್‌ಆರ್‌' ಸಿನಿಮಾ ರಿಲೀಸ್ ಆಗಲಿದೆ ಎಂದು ಅಭಿಮಾನಿಗಳು ಫುಲ್ ಖುಷಿಯಲ್ಲಿದ್ದರು. ಆದರೆ ಈ ಸಿನಿಮಾ ರಿಲೀಸ್ ಇನ್ನೂ ಮುಂದಕ್ಕೆ ಹೋಗಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ವಿಷಯವನ್ನು ಚಿತ್ರತಂಡ ಅಧಿಕೃತವಾಗಿ ಹೇಳಿದೆ. ಸಿನಿಮಾಗಳ ಹಬ್ಬ, ಒಂದಾದ ಮೇಲೆ ಒಂದು ರಿಲೀಸ್ ದಸರಾಕ್ಕೆ 'ಆರ್‌ಆರ್‌ಆರ್' ರಿಲೀಸ್ ಆಗ್ತಿಲ್ಲ. ಕೊರೊನಾ ವೈರಸ್ ಮುಗಿದು ಜನಜೀವನ ಸಹಜಸ್ಥಿತಿಗೆ ಮರಳುತ್ತಿದ್ದಂತೆ ಬಿಗ್ ಬಜೆಟ್ ಸಿನಿಮಾಗಳು ದಸರಾ, ಕ್ರಿಸ್‌ಮಸ್, ದೀಪಾವಳಿ ಎನ್ನುತ್ತ ರಿಲೀಸ್ ಡೇಟ್ ಘೋಷಣೆ ಮಾಡುತ್ತಿವೆ. ಇವೆಲ್ಲವುಗಳನ್ನು ಗಮನದಲ್ಲಿಟ್ಟುಕೊಂಡು RRR ಸಿನಿಮಾ ತಂಡ ರಿಲೀಸ್ ದಿನಾಂಕವನ್ನು ಮತ್ತೊಮ್ಮೆ ಬದಲಾವಣೆ ಮಾಡಿಕೊಂಡಿದೆ. 'ಕೊಂಡ ಪೋಲಂ, 'ಮಹಾ ಸಮುದ್ರಂ', 'ಮೋಸ್ಟ್ ಎಲಿಜಿಬಲ್ ಬ್ಯಾಚುಲರ್' ಸಿನಿಮಾಗಳು ಕ್ರಮವಾಗಿ ಅಕ್ಟೋಬರ್ 8, 14, 15ಕ್ಕೆ ರಿಲೀಸ್ ಆಗಲಿವೆ. ಹೀಗಾಗಿ 2022ರ ಜನವರಿ 7ರಂದು 'ಆರ್‌ಆರ್‌ಆರ್' ಸಿನಿಮಾ ತೆರೆ ಕಾಣಲಿದೆಯಂತೆ. ಪದೇ ಪದೇ ರಿಲೀಸ್ ದಿನಾಂಕ ಬದಲಾವಣೆ ಕಳೆದ ಜುಲೈ 30ರಂದು 'ಆರ್‌ಆರ್‌ಆರ್‌' ರಿಲೀಸ್ ಆಗಿತ್ತು, ಕೊರೊನಾ ಲಾಕ್‌ಡೌನ್ ಕಾರಣಕ್ಕೆ ಮತ್ತೆ ಸಿನಿಮಾ ರಿಲೀಸ್ ಮಾಡೋದು ತಡವಾಯ್ತು. ಲಾಕ್‌ಡೌನ್ ಕ್ರಮೇಣವಾಗಿ ಸಡಿಲ ಮಾಡುತ್ತ ಬಂದರೂ ಕೂಡ ಚಿತ್ರಮಂದಿರ ಆರಂಭಿಸಲು ಅವಕಾಶ ಕೊಟ್ಟಿರಲಿಲ್ಲ. ಆಮೇಲೆ ಥಿಯೇಟರ್ ಆರಂಭಿಸಿದನಂತರದಲ್ಲಿ ಜನರು ಚಿತ್ರಮಂದಿರದತ್ತೆ ಮುಖ ಮಾಡುತ್ತಿರಲಿಲ್ಲ. ಮೂರನೇ ಅಲೆ ಬರುತ್ತದೆಂಬ ಭಯದಲ್ಲಿ ಕೆಲವರಿದ್ದರು. ಅಂತೂ ಜನವರಿ 7ರಂದು 'ಆರ್‌ಆರ್‌ಆರ್' ಸಿನಿಮಾ ರಿಲೀಸ್ ಆಗಲಿದೆಯಂತೆ. ಸ್ಟಾರ್ ನಟರ ಮಹಾಸಂಗಮ ಜ್ಯೂನಿಯರ್ ಎನ್‌ಟಿಆರ್, ರಾಮ್‌ ಚರಣ್ ತೇಜ, ಅಜಯ್ ದೇವಗನ್, ಸಮುದ್ರಖಣಿ, ಆಲಿಯಾ ಭಟ್‌ರಂತಹ ಸ್ಟಾರ್ ನಟರು ಈ ಸಿನಿಮಾದಲ್ಲಿ ನಟಿಸುತ್ತಿರೋದು ಸಿನಿಮಾ ಮೇಲಿನ ನಿರೀಕ್ಷೆಯನ್ನು ಹೆಚ್ಚು ಮಾಡಿದೆ. ಈಗಾಗಲೇ ಜ್ಯೂನಿಯರ್ ಎನ್‌ಟಿಆರ್, ರಾಮ್‌ಚರಣ್ ತೇಜ ಪಾತ್ರದ ಲುಕ್ ನೋಡಿ ಅಭಿಮಾನಿಗಳು ಸಖತ್ ಥ್ರಿಲ್ ಆಗಿದ್ದಾರೆ. ಕೊಮರಾಮ್‌ ಭೀಮ್‌ ಪಾತ್ರದಲ್ಲಿ ಎನ್‌ಟಿಆರ್ ಕಾಣಿಸಿಕೊಂಡರೆ, ಅಲ್ಲೂರಿ ಸೀತಾರಾಮ ರಾಜು ಪಾತ್ರದಲ್ಲಿ ರಾಮ್‌ ಚರಣ್ ತೇಜ ಕಾಣಿಸಿಕೊಂಡಿದ್ದಾರೆ. ಕನ್ನಡ, ತೆಲುಗು, ಮಲಯಾಳಂ ಮತ್ತು ತಮಿಳು ಹಾಗೂ ಹಿಂದಿಯಲ್ಲಿ ರಿಲೀಸ್ ಆಗಲಿರುವ 'ಆರ್‌ಆರ್‌ಆರ್‌' ಚಿತ್ರವು ಇಂಗ್ಲಿಷ್, ಪೋರ್ಚುಗೀಸ್, ಕೊರಿಯನ್, ಟರ್ಕಿಷ್, ಸ್ಪ್ಯಾನಿಶ್‌ ಭಾಷೆಗಳಿಗೆ ಡಬ್ ಆಗಲಿದೆ. ಡಿವಿವಿ ದಾನಯ್ಯ ನಿರ್ಮಾಣ ಮಾಡುತ್ತಿರುವ ಈ ಚಿತ್ರಕ್ಕೆ ಎಂ.ಎಂ.ಕೀರವಾಣಿ ಸಂಗೀತ ನೀಡಿದ್ದಾರೆ. 400 ಕೋಟಿ ರೂಪಾಯಿ ಬಜೆಟ್‌ನಲ್ಲಿ ತಯಾರಾದ ಈ ಚಿತ್ರ, ಬಿಡುಗಡೆಗೂ ಮುನ್ನವೇ 900 ಕೋಟಿ ರೂಪಾಯಿ ಬಿಸಿನೆಸ್ ಮಾಡಿದೆ ಎಂದು ಈ ಹಿಂದೆ ವರದಿಯಾಗಿತ್ತು. 'ಆರ್‌ಆರ್‌ಆರ್‌' ಚಿತ್ರದ ಹಾಡುಗಳಿಗೆ ಎಂಎಂ ಕೀರವಾಣಿ ಸಂಗೀತ ನೀಡಿದ್ದಾರೆ. 'ಆರ್‌ಆರ್‌ಆರ್‌' ಚಿತ್ರದ ಒಂದು ಹಾಡನ್ನು ಚಿತ್ರೀಕರಣ ಮಾಡಲು ಬರೋಬ್ಬರಿ 1 ತಿಂಗಳು ಕಾಲ ಸಮಯವನ್ನು ಮೀಸಲಿಟ್ಟಿದ್ದರು ಎಂದು ಹೇಳಲಾಗಿತ್ತು.