ತಮಿಳುನಾಡು ಸಿಎಂ ಸ್ಟಾಲಿನ್ ಪುತ್ರನ ಹೊಸ ಸಿನಿಮಾಕ್ಕೆ 'ಸ್ಟಾರ್' ನಟನ ಪುತ್ರಿ ಆಯ್ಕೆ!

ಡಿಎಂಕೆ ಪಕ್ಷವು ಪ್ರಚಂಡ ಜಯಭೇರಿ ಬಾರಿಸಿ, ತಮಿಳುನಾಡಿನಲ್ಲಿ ಹೊಸ ಸರ್ಕಾರ ರಚಿಸಿದೆ. ಪಕ್ಷದ ಮುಖ್ಯಸ್ಥ ಎಂ.ಕೆ. ಸ್ಟಾಲಿನ್ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡಿದ್ದಾರೆ. ಇದೀಗ ಅವರ ಪುತ್ರ, ಶಾಸಕ, ನಟ ಉದಯನಿಧಿ ಸ್ಟಾಲಿನ್ ಪುನಃ ಸಿನಿಮಾರಂಗದತ್ತ ಮುಖ ಮಾಡಿದ್ದಾರೆ.

ತಮಿಳುನಾಡು ಸಿಎಂ ಸ್ಟಾಲಿನ್ ಪುತ್ರನ ಹೊಸ ಸಿನಿಮಾಕ್ಕೆ 'ಸ್ಟಾರ್' ನಟನ ಪುತ್ರಿ ಆಯ್ಕೆ!
Linkup
ತಮಿಳುನಾಡಿನಲ್ಲಿ ರಾಜಕಾರಣ ಮತ್ತು ಸಿನಿಮಾ ಒಂದಕ್ಕೊಂದು ಬೆಸೆದುಕೊಂಡಿವೆ. ಅಂದಿನ ಎಂಜಿಆರ್‌, ಜಯಲಲಿತಾ ಅವರಿಂದಿಡಿದು ಈಗಿನ ಕಮಲ್ ಹಾಸನ್ ಅವರ ವರೆಗೂ ಅದು ಮುಂದುವರಿದುಕೊಂಡು ಬಂದಿದೆ. ಪ್ರಸ್ತುತ ತಮಿಳಿನಾಡಿನ ಸಿಎಂ ಆಗಿರುವ ಕೂಡ ದಶಕಗಳ ಹಿಂದೆ ಬಣ್ಣ ಹಚ್ಚಿ ನಟಿಸಿದ್ದವರೇ! ಅವರ ಪುತ್ರ ಕೂಡ ಈಗ ಡಿಎಂಕೆ ಪಕ್ಷದಿಂದ ಶಾಸಕ ಆಗಿದ್ದಾರೆ. ಅದಕ್ಕೂ ಮೊದಲು ಉದಯನಿಧಿ ಕೂಡ ಓರ್ವ ನಟ. ಸದ್ಯ ರಾಜಕಾರಣದಲ್ಲಿ ಬ್ಯುಸಿ ಆಗಿದ್ದ ಉದಯನಿಧಿ, ಈಗ ಪುನಃ ಸಿನಿಮಾರಂಗದ ಕಡೆ ಮುಖ ಮಾಡಿದ್ದಾರೆ. ರಿಮೇಕ್‌ನಲ್ಲಿ ಉದಯನಿಧಿ! 2019ರಲ್ಲಿ ಆಯುಷ್ಮಾನ್ ಖುರಾನಾ ಹಿಂದಿಯಲ್ಲಿ ನಟಿಸಿದ ಸಿನಿಮಾ ಅರ್ಟಿಕಲ್ 15. ನೈಜ ಘಟನೆಗಳಿಂದ ಪ್ರೇರಿತವಾಗಿ ಮೂಡಿಬಂದಿದ್ದ ಆ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಒಳ್ಳೆಯ ಕಲೆಕ್ಷನ್ ಮಾಡಿದ್ದಲ್ಲದೆ, ಪ್ರೇಕ್ಷಕರಿಂದಲೂ ಮೆಚ್ಚುಗೆ ಪಡೆದುಕೊಂಡಿತ್ತು. ಅನುಭವ್ ಸಿನ್ಹಾ ನಿರ್ದೇಶನದ ಈ ಸಿನಿಮಾವನ್ನು ತಮಿಳಿಗೆ ರಿಮೇಕ್ ಮಾಡಲಾಗುತ್ತಿದೆ. ಅದರಲ್ಲಿ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಉದಯನಿಧಿ ಬಣ್ಣ ಹಚ್ಚಲಿದ್ದಾರೆ. ವಿಶೇಷವೆಂದರೆ, ಆ ಸಿನಿಮಾದ ಒಂದು ಮುಖ್ಯ ಪಾತ್ರದಲ್ಲಿ ದಕ್ಷಿಣ ಭಾರತದ ಖ್ಯಾತ ನಟ ಡಾ. ರಾಜಶೇಖರ್ ಅವರ ಪುತ್ರಿ ಕಾಣಿಸಿಕೊಳ್ಳಲಿದ್ದಾರೆ. ರಾಜಶೇಖರ್, ತೆಲುಗು ಚಿತ್ರರಂಗದ ಹಿರಿಯ ನಟ. 1984ರಿಂದಲೂ ತೆಲುಗು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಇದೀಗ ಅವರ ಪುತ್ರಿ ಕೂಡ ನಟಿಯಾಗಿ ಗುರುತಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ಅವರು ತೆಲುಗಿನಲ್ಲಿ ಒಂದೆರಡು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ಜೊತೆಗೆ 'ಅನ್ಬರಿವ್' ಸಿನಿಮಾ ಮೂಲಕ ತಮಿಳಿಗೆ ಎಂಟ್ರಿ ಕೊಟ್ಟಿರುವ ಅವರು, ಈಗ ಅರ್ಟಿಕಲ್ 15 ಚಿತ್ರದ ತಮಿಳು ರಿಮೇಕ್‌ನಲ್ಲೂ ಅವಕಾಶ ಪಡೆದುಕೊಂಡಿದ್ದಾರೆ. ಈ ಸಿನಿಮಾದಲ್ಲಿ ಅವರಿಗೆ ಬಹಳ ಮಹತ್ವದ ಪಾತ್ರ ಇರಲಿದೆಯಂತೆ. 'ಅರ್ಟಿಕಲ್‌ 15' ರಿಮೇಕ್‌ಗೆ ಈಗಾಗಲೇ ಚಿತ್ರೀಕರಣ ಆರಂಭಗೊಂಡಿದ್ದು, ಮೊದಲ ಹಂತದ ಶೂಟಿಂಗ್ ಮುಕ್ತಾಯಗೊಂಡಿದೆ. ಉದಯನಿಧಿಗೆ ನಾಯಕಿಗೆ ತಾನ್ಯಾ ರವಿಚಂದ್ರನ್ ಕಾಣಿಸಿಕೊಳ್ಳಲಿದ್ದಾರೆ. ಅಂದಹಾಗೆ, 2012ರಲ್ಲಿ ತೆರೆಕಂಡ 'ಒರು ಕಲ್ ಒರು ಕನ್ನಡಿ' ಸಿನಿಮಾ ಮೂಲಕ ಉದಯನಿಧಿ ನಟರಾಗಿ ಚಿತ್ರರಂಗಕ್ಕೆ ಪ್ರವೇಶ ಪಡೆದರು. ಮೊದಲ ಚಿತ್ರಕ್ಕೆ ಅವರಿಗೆ ಅನೆಕ ಪ್ರಶಸ್ತಿಗಳು ಲಭಿಸಿದ್ದವು. ಆನಂತರ ಗೇತು, ಮಣಿದಾನ್, ಸೈಕೋ, ನಿಮಿರ್, ನನ್ಬೆಂಡ ಸೇರಿದಂತೆ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ.