'2.0' ನಿರ್ದೇಶಕ ಶಂಕರ್‌ ಪುತ್ರಿ ಚಿತ್ರರಂಗ ಪ್ರವೇಶ; 'ಸ್ಟಾರ್' ನಟನ ಫ್ಯಾಮಿಲಿಯಿಂದ ಲಾಂಚ್‌

'ಐ', 'ಅನ್ನಿಯನ್', 'ಶಿವಾಜಿ', 'ಎಂಧೀರನ್', '2.0' ಮುಂತಾದ ಸಿನಿಮಾಗಳಿಂದ ಫೇಮಸ್ ಆಗಿರುವ ನಿರ್ದೇಶಕ ಶಂಕರ್. ಇದೀಗ ಅವರ ಪುತ್ರಿ ಚಿತ್ರರಂಗ ಪ್ರವೇಶ ಮಾಡಿದ್ದಾರೆ. ಸ್ಟಾರ್ ನಟನ ಕುಟುಂಬವು ನಿರ್ಮಿಸುತ್ತಿರುವ ಸಿನಿಮಾದಿಂದ ನಾಯಕಿಯಾಗುತ್ತಿದ್ದಾರೆ ಅವರು.

'2.0' ನಿರ್ದೇಶಕ ಶಂಕರ್‌ ಪುತ್ರಿ ಚಿತ್ರರಂಗ ಪ್ರವೇಶ; 'ಸ್ಟಾರ್' ನಟನ ಫ್ಯಾಮಿಲಿಯಿಂದ ಲಾಂಚ್‌
Linkup
ಭಾರತದ ಸ್ಟಾರ್ ನಿರ್ದೇಶಕರಲ್ಲಿ ಶಂಕರ್ ಕೂಡ ಒಬ್ಬರು. 'ಅನ್ನಿಯನ್', 'ಶಿವಾಜಿ', 'ಎಂಧೀರನ್', '2.0' ಥರದ ಬಿಗ ಬಜೆಟ್ ಸಿನಿಮಾಗಳನ್ನು ಮಾಡಿ, ದೊಡ್ಡ ಹೆಸರು ಮಾಡಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಅವರ ಪುತ್ರಿ ಐಶ್ವರ್ಯಾ ವಿವಾಹವು ಖ್ಯಾತ ಕ್ರಿಟೆಟಿಗ ರೋಹಿತ್ ದಾಮೋದರನ್‌ ಅವರೊಂದಿಗೆ ನಡೆದಿತ್ತು. ಇದೀಗ ಮತ್ತೋರ್ವ ಪುತ್ರಿ ಕುರಿತಾಗಿ ಸುದ್ದಿಯೊಂದು ಹೊರಬಿದ್ದಿದೆ. ಅದೇನೆಂದರೆ, ಶಂಕರ್ ಅವರ 2ನೇ ಪುತ್ರಿ ಚಿತ್ರರಂಗಕ್ಕೆ ಎಂಟ್ರಿ ನೀಡುವುದಕ್ಕೆ ಸಜ್ಜಾಗಿದ್ದಾರೆ. ವಿಶೇಷವೆಂದರೆ, ಅವರನ್ನು ಲಾಂಚ್ ಮಾಡುವ ಹೊಣೆಯನ್ನು ನಟ ಅವರ ಕುಟುಂಬ ವಹಿಸಿಕೊಂಡಿದೆ! ಸೂರ್ಯ ಸಿನಿಮಾದಲ್ಲಿ ಅದಿತಿ ಶಂಕರ್ ಶಂಕರ್ ಅವರ 2ನೇ ಪುತ್ರಿ ಹೆಸರು ಅದಿತಿ ಶಂಕರ್. ಇದೀಗ ಅವರನ್ನು ಸಿನಿಮಾರಂಗಕ್ಕೆ ಲಾಂಚ್ ಮಾಡುತ್ತಿರುವುದು ಖ್ಯಾತ ಸ್ಟಾರ್ ದಂಪತಿ ಸೂರ್ಯ ಮತ್ತು ಜ್ಯೋತಿಕಾ! ಹೌದು, ತಮ್ಮ 2ಡಿ ಎಂಟರ್‌ಟೇನ್‌ಮೆಂಟ್ ಬ್ಯಾನರ್‌ನಲ್ಲಿ ನಿರ್ಮಾಣವಾಗುತ್ತಿರುವ 'ವಿರುಮಾನ್' ಸಿನಿಮಾಕ್ಕೆ ಅದಿತಿಯನ್ನು ನಾಯಕಿಯನ್ನಾಗಿ ಸೆಲೆಕ್ಟ್ ಮಾಡಿದ್ದಾರೆ ಸೂರ್ಯ ಮತ್ತು . ಈ ಚಿತ್ರಕ್ಕೆ ಸೂರ್ಯ ಅವರ ಸಹೋದರ ಕಾರ್ತಿ ಹೀರೋ. ಮುತ್ತಯ್ಯ ಇದರ ನಿರ್ದೇಶನದ ಹೊಣೆ ಹೊತ್ತುಕೊಂಡಿದ್ದಾರೆ. ಇನ್ನು, ಪುತ್ರಿಯನ್ನು ತಮ್ಮ ಬ್ಯಾನರ್‌ ಮೂಲಕ ಸೂರ್ಯ ಮತ್ತು ಜ್ಯೋತಿಕಾ ಲಾಂಚ್ ಮಾಡುತ್ತಿರುವುದಕ್ಕೆ ನಿರ್ದೇಶಕ ಶಂಕರ್ ಖುಷಿಯಾಗಿದ್ದಾರೆ. 'ಯಾವಾಗಲೂ ಅತ್ಯುತ್ತಮ ಸಿನಿಮಾಗಳನ್ನೇ ನಿರ್ಮಿಸುವ 2ಡಿ ಎಂಟರ್‌ಟೇನ್‌ಮೆಂಟ್ ಮೂಲಕ ನನ್ನ ಪುತ್ರಿ ಅದಿತಿಯನ್ನು ಲಾಂಚ್ ಮಾಡುತ್ತಿರುವುದಕ್ಕೆ ಪ್ರೀತಿಯ ಸೂರ್ಯ ಮತ್ತು ಜ್ಯೋತಿಕಾಗೆ ಧನ್ಯವಾದಗಳು. ಹಾಗೆಯೇ ಕಾರ್ತಿ, ನಿರ್ದೇಶಕ ಮುತ್ತಯ್ಯ, ಸಂಗೀತ ನಿರ್ದೇಶಕ ಯುವನ್ ಶಂಕರ್ ರಾಜಾ ಅವರಿಗೂ ಥ್ಯಾಂಕ್ಸ್' ಎಂದಿದ್ದಾರೆ ಶಂಕರ್. ಸಿನಿಮಾರಂಗಕ್ಕೆ ಸಕಲ ಸಿದ್ಧತೆ ಮಾಡಿಕೊಂಡು ಬರುತ್ತಿರುವ ಮಗಳ ಮೇಲೆ ಸಿನಿಪ್ರೇಮಿಗಳ ಪ್ರೀತಿ ಇರಲಿದೆ ಎಂಬ ನಂಬಿಕೆಶಂಕರ್ ಅವರದ್ದು. ಇನ್ನು, ತಮ್ಮ ಮೊದಲ ಸಿನಿಮಾ ಬಗ್ಗೆ ಪ್ರತಿಕ್ರಿಯೆ ನೀಡಿರುವ ನಟಿ ಅದಿತಿ, 'ನಾನಂತೂ ಈ ಸಿನಿಮಾಕ್ಕೆ ಆಯ್ಕೆ ಆಗಿರುವುದಕ್ಕಾಗಿ ಸಖತ್ ಎಕ್ಸೈಟ್ ಆಗಿದ್ದೇನೆ. ಚೊಚ್ಚಲ ಚಿತ್ರಕ್ಕೆ ಇದಕ್ಕಿಂತ ಒಳ್ಳೆಯ ಅವಕಾಶ ಬೇರೊಂದಿಲ್ಲ' ಎಂದು ಹೇಳಿಕೊಂಡಿದ್ದಾರೆ. ಇನ್ನು, 'ವಿರುಮಾನ್' ಸಿನಿಮಾದಲ್ಲಿ ಕಾರ್ತಿ ಮತ್ತು ಅದಿತಿ ಜೊತೆಗೆ ಪ್ರಕಾಶ್ ರಾಜ್ ಒಂದು ಮುಖ್ಯ ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ. ರಾಜ್‌ ಕಿರಣ್, ಸೂರಿ, ಆರ್‌ಕೆ ಸುರೇಶ್‌ ಮುಂತಾದವರು ಪೋಷಕ ಪಾತ್ರಗಳಲ್ಲಿ ಇದ್ದಾರೆ. ಯುವನ್ ಶಂಕರ್ ರಾಜಾ ಸಂಗಿತ ನೀಡುತ್ತಿದ್ದು, ಇದೊಂದು ರೊಮ್ಯಾನ್ಸ್, ಕಾಮಿಡಿ, ಸೆಂಟಿಮೆಂಟ್ ಮತ್ತು ಆಕ್ಷನ್‌ ಇರುವ ಪ್ಯಾಕೇಜ್ ಸಿನಿಮಾ ಎಂದು ಹೇಳಲಾಗಿದೆ.