ಮುಗಿಯದ ಪಂಜಾಬ್‌ ಕಾಂಗ್ರೆಸ್‌ ಬಿಕ್ಕಟ್ಟು, ಸಿಧು-ಸಿಂಗ್‌ಗೆ ಬುದ್ಧಿ ಹೇಳಿದ ಸೋನಿಯಾ ಗಾಂಧಿ

ಪಂಜಾಬ್‌ನಲ್ಲಿ ಸಿಎಂ ಕ್ಯಾ. ಅಮರೀಂದರ್‌ ಸಿಂಗ್‌ ಮತ್ತು ರಾಜ್ಯ ಕಾಂಗ್ರೆಸ್‌ ಅಧ್ಯಕ್ಷ ನವಜೋತ್‌ ಸಿಧು ನಡುವಿನ ಹಾವು-ಮುಂಗುಸಿ ಕದನ ಮುಂದುವರಿದಿದ್ದು, ಸೋನಿಯಾ ಗಾಂಧಿ ಇಬ್ಬರಿಗೂ ಸಮಾಧಾನ ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮುಗಿಯದ ಪಂಜಾಬ್‌ ಕಾಂಗ್ರೆಸ್‌ ಬಿಕ್ಕಟ್ಟು, ಸಿಧು-ಸಿಂಗ್‌ಗೆ ಬುದ್ಧಿ ಹೇಳಿದ ಸೋನಿಯಾ ಗಾಂಧಿ
Linkup
ಹೊಸದಿಲ್ಲಿ: ಪಂಜಾಬ್‌ನಲ್ಲಿ ಮುಖ್ಯಮಂತ್ರಿ ಕ್ಯಾ. ಮತ್ತು ರಾಜ್ಯ ಕಾಂಗ್ರೆಸ್‌ ನೂತನ ಅಧ್ಯಕ್ಷ ನವಜೋತ್‌ ಸಿಧು ನಡುವಿನ ಹಾವು-ಮುಂಗುಸಿ ಕದನ ಮುಂದುವರಿದಿದೆ. ಡ್ರಗ್ಸ್‌ ಹಾವಳಿ ನಿಯಂತ್ರಿಸುವ ವಿಷಯದಲ್ಲಿ ಸಿಧು ತಮ್ಮದೇ ಸರಕಾರವನ್ನು ಟೀಕಿಸಿದ ಬೆನ್ನ ಹಿಂದೆಯೇ ಕ್ಯಾಪ್ಟನ್‌ ಅಮರೀಂದರ್‌ ಪಕ್ಷದ ಅಧ್ಯಕ್ಷೆ ಅವರ ಬಳಿ ಹೋಗಿ ದೂರು ನೀಡಿದ್ದಾರೆ. ಚುನಾವಣೆ ಹೊಸ್ತಿಲಲ್ಲಿ ಯಾರ ವಿರೋಧವನ್ನೂ ಕಟ್ಟಿಕೊಳ್ಳಲು ಹಿಂಜರಿಯುತ್ತಿರುವ ಸೋನಿಯಾ, ಇಬ್ಬರಿಗೂ ಸಮಾಧಾನ ಹೇಳಿ ಕಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. "ರಾಜ್ಯದಲ್ಲಿಚುನಾವಣೆ ಸಮೀಪಿಸಿದೆ. ಈ ಹೊತ್ತಲ್ಲಿ ಪಕ್ಷದ ಮುಂದಾಳುಗಳು ಕಚ್ಚಾಡುವುದು ಸರಿಯಲ್ಲ. ಒಗ್ಗಟ್ಟಿನಿಂದ ಕೆಲಸ ಮಾಡಿ," ಎಂದು ಸೋನಿಯಾ ಬುದ್ಧಿ ಹೇಳಿ ಕಳಿಸಿದ್ದಾರೆ. ಸಂಘರ್ಷದಿಂದಲೇ ಅಮರೀಂದರ್‌ ಸಂಪುಟ ತೊರೆದು ಬಂದಿದ್ದ ಸಿಧು, ಇತ್ತೀಚೆಗೆ ಸಿಎಂ ವಿರೋಧದ ನಡುವೆ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಸ್ಥಾನ ಗಿಟ್ಟಿಸಿದ್ದರು. ಬಳಿಕ ವಿರಾಮ ಪಡೆದಿದ್ದ ಇಬ್ಬರ ಸಂಘರ್ಷ ಎರಡು ದಿನಗಳ ಹಿಂದೆ ಸಿಧು ವಾಗ್ದಾಳಿಯೊಂದಿಗೆ ಮರು ಕಳಿಸಿತ್ತು. ಮಾದಕ ದ್ರವ್ಯ ದಂಧೆಯಲ್ಲಿಆರೋಪ ಎದುರಿಸುತ್ತಿರುವ ಅಕಾಲಿ ದಳದ ಬಿಕ್ರಮ್‌ ಮಜೀತಿಯಾ ಮತ್ತಿತರರ ವಿರುದ್ಧ ಕ್ರಮ ಕೈಗೊಳ್ಳದೇ ಸಿಂಗ್‌ ಸರಕಾರ ಕೈಕಟ್ಟಿ ಕುಳಿತಿದೆ ಎಂದು ಸಿಧು ಹರಿಹಾಯ್ದಿದ್ದರು. ಇದರಿಂದ ಕೆರಳಿದ ಕ್ಯಾಪ್ಟನ್‌ ಅಮರೀಂದರ್‌ ದಿಲ್ಲಿಗೆ ತೆರಳಿ ಪಕ್ಷ ವರಿಷ್ಠರಿಗೆ ದೂರು ನೀಡಿದ್ದರು.