ಪೆಗಾಸಸ್ ಅಭಿವೃದ್ಧಿಪಡಿಸಿದ ಎನ್‌ಎಸ್‌ಓ ಒಂದು ಖಾಸಗಿ ಕಂಪನಿ: ಇಸ್ರೇಲ್ ರಾಯಭಾರಿ!

ಭಾರತದಲ್ಲಿ ಪೆಗಾಸಸ್ ಫೋನ್ ಕದ್ದಾಲಿಕೆ ಪ್ರಕರಣ ಮತ್ತೆ ಸದ್ದು ಮಾಡುತ್ತಿದೆ. ಈ ಎಲ್ಲಾ ಬೆಳವಣಿಗೆಗಳ ಬಗ್ಗೆ ಮಾತನಾಡಿರುವ ಭಾರತಕ್ಕೆ ಇಸ್ರೇಲ್ ರಾಯಭಾರಿಯಾಗಿರುವ ನಾವೊರ್ ಗಿಲೋನ್, ಇದು ಭಾರತದ ಆಂತರಿಕ ವಿಷಯ ಎಂದು ಹೇಳಿದ್ದಾರೆ.

ಪೆಗಾಸಸ್ ಅಭಿವೃದ್ಧಿಪಡಿಸಿದ ಎನ್‌ಎಸ್‌ಓ ಒಂದು ಖಾಸಗಿ ಕಂಪನಿ: ಇಸ್ರೇಲ್ ರಾಯಭಾರಿ!
Linkup
ಹೊಸದಿಲ್ಲಿ: ಭಾರತದಲ್ಲಿ ಪೆಗಾಸಸ್ ಫೋನ್ ಕದ್ದಾಲಿಕೆ ಪ್ರಕರಣ ಮತ್ತೆ ಸದ್ದು ಮಾಡುತ್ತಿದೆ. ಪ್ರಕರಣದ ತನಿಖೆಗಾಗಿ ಸಮಿತಿ ರಚಿಸುವ ಸುಪ್ರೀಂಕೋರ್ಟ್ ನಿರ್ಣಯ ರಾಜಕೀಯ ಆರೋಪ-ಪ್ರತ್ಯಾರೋಪಗಳಿಗೆ ಸಾಕ್ಷಿಯಾಗಿದೆ. ಈ ಎಲ್ಲಾ ಬೆಳವಣಿಗೆಗಳ ಬಗ್ಗೆ ಮಾತನಾಡಿರುವ ಭಾರತಕ್ಕೆ ಇಸ್ರೇಲ್ ರಾಯಭಾರಿಯಾಗಿರುವ , ಇದು ಭಾರತದ ಆಂತರಿಕ ವಿಷಯ ಎಂದು ಹೇಳಿದ್ದಾರೆ. ಪೆಗಾಸಸ್ ಅಭಿವೃದ್ಧಿಪಡಿಸಿದ ಇಸ್ರೇಲ್‌ನ ಎನ್‌ಎಸ್‌ಓ ಒಂದು ಖಾಸಗಿ ಸಂಸ್ಥೆಯಾಗಿದೆ. ಸಾಫ್ಟ್‌ವೇರ್‌ನ ಸ್ವರೂಪದಿಂದಾಗಿ ಇದನ್ನು ರಫ್ತು ಮಾಡಲು ಎನ್‌ಎಸ್‌ಓ ಸಂಸ್ಥೆ ಇಸ್ರೇಲ್ ಸರ್ಕಾರದ ಪರವಾನಗಿಯನ್ನು ಪಡೆಯಬೇಕಾಗಿದೆ. ಆದರೆ ಭಾರತದಲ್ಲಿ ಈ ಸಾಫ್ಟವೇರ್ ದುರ್ಬಳಕೆ ಕುರಿತು ನಡೆಯುತ್ತಿರುವ ಚರ್ಚೆಗಳು ಆಂತರಿಕ ವಿಷಯವಾಗಿದೆ ಎಂದು ನಾವೊರ್ ಗಿಲೋನ್ ಸ್ಪಷ್ಟಪಡಿಸಿದ್ದಾರೆ. ಇದೇ ವೇಳೆ ಹೊಸದಿಲ್ಲಿಯಲ್ಲಿರುವ ಇಸ್ರೇಲ್ ರಾಯಭಾರ ಕಚೇರಿ ಬಳಿ ನಡೆದ ಸ್ಪೋಟ ಪ್ರಕರಣದ ಬಗ್ಗೆ ಪ್ರತಿಕ್ರಿಯೆ ನೀಡಿದ ನಾವೊರ್ ಗಿಲೋನ್, ಭಾರತದ ತನಿಖಾ ಸಂಸ್ಥೆಗಳೊಂದಿಗೆ ಇಸ್ರೇಲ್ ನಿಕಟವಾಗಿ ಕೆಲಸ ಮಾಡುತ್ತಿದೆ ಎಂದು ಹೇಳಿದ್ದಾರೆ. ಸ್ಫೋಟ ನಡೆಸಿದ ದುಷ್ಕರ್ಮಿಗಳ ಬಗ್ಗೆ ನಮಗೆ ಹೆಚ್ಚಿನ ಮಾಹಿತಿ ಇಲ್ಲ. ಆದರೆ ಭಾರತದ ತನಿಖಾ ಸಂಸ್ಥೆಗಳು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡಸುತ್ತಿವೆ ಎಂದು ನಾವೊರ್ ಗಿಲೋನ್ ಹೇಳಿದ್ದಾರೆ. ಇರಾನ್ ಬಗ್ಗೆ ಮತ್ತು ಇಸ್ರೇಲ್ ನಿಲುವುಗಳು ಎರಡು ಸಾರ್ವಭೌಮ ರಾಷ್ಟ್ರಗಳು ಹೊಂದಿರುವ ನಿಲುವುಗಳಾಗಿವೆ. ಈ ಕುರಿತು ನಾವು ಮುಕ್ತ ಮಾತುಕತೆ ನಡೆಸುತ್ತಿದ್ದೇವೆ ಎಂದು ನಾವೊರ್ ಗಿಲೋನ್ ಇದೇ ವೇಳೆ ನುಡಿದರು. ಇರಾನ್ ಬಗೆಗಿನ ನಮ್ಮ ನಿಲುವಿಗೂ ಭಾರತದ ನಿಲುವಿಗೂ ಹೊಂದಿಕೆಯಾಗಬೇಕು ಎಂಬ ನಿಯಮವೇನೂ ಇಲ್ಲ. ಎರಡು ಸಾರ್ವಭೌಮ ರಾಷ್ಟ್ರಗಳು ಮತ್ತೊಂದು ರಾಷ್ಟ್ರದ ಬಗೆಗೆ ಭಿನ್ನ ನಿಲುವು ಹೊಂದುವುದು ಸಾಮಾನ್ಯ ಸಂಗತಿ ಎಂಬ ಅರಿವು ನಮಗಿದೆ ಎಂದು ನಾವೊರ್ ಗಿಲೋನ್ ಮಾರ್ಮಿಕವಾಗಿ ಹೇಳಿದ್ದಾರೆ. ಭಾರತದ ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ ಅವರ ಇತ್ತೀಚಿಗಿನ ಇಸ್ರೇಲ್ ಭೇಟಿಯನ್ನು ಅತ್ಯಂತ ಫಲಪ್ರದ ಎಂದು ಬಣ್ಣಿಸಿರುವ ನಾವೊರ್ ಗಿಲೋನ್, ಉಭಯ ದೇಶಗಳ ನಡುವಿನ ರಾಜತಾಂತ್ರಿಕ ಸಂಬಂಧ ಮತ್ತಷ್ಟು ಗಟ್ಟಿಗೊಳ್ಳಲು ಈ ಭೇಟಿ ಸಹಾಯಕಾರಿಯಾಗಿದೆ ಎಂದು ಬಣ್ಣಿಸಿದ್ದಾರೆ.