ಬಿಜೆಪಿ ಸಂಸದ ನಿಶಿಕಾಂತ್‌ರನ್ನು 'ಬಿಹಾರಿ ಗೂಂಡಾ' ಎಂದರಾ ಟಿಎಂಸಿ ಸಂಸದೆ..?!

ಹಿಂದಿ ಭಾಷಿಕರ ಮೇಲೆ ಬಂಗಾಳ ಮೂಲದ ಸಂಸದೆ ಆಕ್ರೋಶ ವ್ಯಕ್ತಪಡಿಸಿರುವ ಪರಿ ಇದು ಎಂದು ಇದೀಗ ವಿಶ್ಲೇಷಣೆಗಳು ಕೇಳಿ ಬರುತ್ತಿವೆ. ಬಿಹಾರಿ ಗೂಂಡಾ ಎಂದು ಕರೆದಿರುವುದು ಆ ರಾಜ್ಯದ ಅಸ್ಮಿತೆಯನ್ನೇ ಕೆಣಕಿದಂತಾಗಿದೆ.

ಬಿಜೆಪಿ ಸಂಸದ ನಿಶಿಕಾಂತ್‌ರನ್ನು 'ಬಿಹಾರಿ ಗೂಂಡಾ' ಎಂದರಾ ಟಿಎಂಸಿ ಸಂಸದೆ..?!
Linkup
: ತೃಣಮೂಲ ಕಾಂಗ್ರೆಸ್‌ ಸಂಸದೆಯೊಬ್ಬರು ತಮ್ಮನ್ನು '' ಎಂಬುದಾಗಿ ಕರೆದಿರುವುದಾಗಿ ಸಂಸದ ನಿಶಿಕಾಂತ್‌ ದುಬೆ ಆರೋಪಿಸಿದ್ದಾರೆ. ಗುರುವಾರ ಲೋಕಸಭೆಯಲ್ಲಿ ಇದನ್ನು ಹೇಳಿಕೊಂಡ ಅವರು, 'ಬುಧವಾರ ನಡೆದ ಸಂಸದೀಯ ಸಮಿತಿ ಸಭೆಯಲ್ಲಿ ಟಿಎಂಸಿಯ ಮಹಿಳಾ ಸಂಸದೆಯೊಬ್ಬರು ನನ್ನನ್ನು ಬಿಹಾರಿ ಗೂಂಡಾ ಎಂದು ಕರೆದಿದ್ದಾರೆ. ಇದನ್ನು ಸದನದ ಸದಸ್ಯರ ಗಮನಕ್ಕೆ ತರುತ್ತಿದ್ದೇನೆ. ಕಳೆದ 13 ವರ್ಷಗಳಿಂದ ಸಂಸದನಾಗಿರುವ ನಾನು ಗೂಂಡಾ ರೀತಿ ವರ್ತಿಸಿದ್ದೇನೆಯೆ? ನಮ್ಮ ಪಕ್ಷ ಮತ್ತು ಸರಕಾರ ದೇಶವನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯುತ್ತಿವೆ. ಅದೊಂದೇ ಸಿಟ್ಟಿಗಾಗಿ ಪ್ರತಿಪಕ್ಷಗಳ ಸಂಸದರು ಈ ರೀತಿ ದುರ್ವರ್ತನೆ ತೋರುವುದು ಸರಿಯೇ' ಎಂದು ಪ್ರಶ್ನಿಸಿದರು. ಸದನದಲ್ಲಿ ಅವರು ಸಂಸದೆಯ ಹೆಸರು ಹೇಳಲಿಲ್ಲ. ಆದರೆ ಟ್ವೀಟ್‌ ಮಾಡಿರುವ ದುಬೆ, 'ಟಿಎಂಸಿಯ ಅವರ ಈ ವರ್ತನೆ ಬಿಹಾರದ ಕುರಿತು ಸಂಸದೆ ಹಾಗೂ ಅವರ ಪಕ್ಷದ ನಾಯಕಿ ಮಮತಾ ಬ್ಯಾನರ್ಜಿ ಅವರಿಗೆ ಯಾವ ಮನೋಭಾವ ಇದೆ ಎನ್ನುವುದನ್ನು ತೋರಿಸುತ್ತದೆ' ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆದ್ರೆ ಈ ಆರೋಪವನ್ನು ಮೊಯಿತ್ರಾ ನಿರಾಕರಿಸಿದ್ದಾರೆ. ಐಟಿ ಕುರಿತಾದ ಸಂಸದೀಯ ಸ್ಥಾಯಿ ಸಮಿತಿ ಸಭೆಯೇ ನಡೆಯಲಿಲ್ಲ. ಈ ವೇಳೆ ಸಚಿವರೂ ಇದ್ದರು ಎಂದು ಅವರು ಸ್ಪಷ್ಟೀಕರಣ ನೀಡಿದ್ದಾರೆ. ಹಿಂದಿ ಭಾಷಿಕರ ಮೇಲೆ ಬಂಗಾಳ ಮೂಲದ ಸಂಸದೆ ಆಕ್ರೋಶ ವ್ಯಕ್ತಪಡಿಸಿರುವ ಪರಿ ಇದು ಎಂದು ಇದೀಗ ವಿಶ್ಲೇಷಣೆಗಳು ಕೇಳಿ ಬರುತ್ತಿವೆ. ಬಿಹಾರಿ ಗೂಂಡಾ ಎಂದು ಕರೆದಿರುವುದು ಆ ರಾಜ್ಯದ ಅಸ್ಮಿತೆಯನ್ನೇ ಕೆಣಕಿದಂತಾಗಿದೆ.