ಚೀನಾ ಗಡಿಗೆ ಸುಮಾರು 2 ಲಕ್ಷ ಸೈನಿಕರ ನಿಯೋಜಿಸಿದ ಭಾರತೀಯ ಸೇನೆ!

ವಿಶ್ವದ ಎರಡನೇ ಅತಿದೊಡ್ಡ ಆರ್ಥಿಕತೆ ಹೊಂದಿರುವ ಭಾರತ ಚೀನಾ ವಿರುದ್ಧ ರಕ್ಷಣಾತ್ಮಕ ನೀತಿ ಹೊಂದಿದೆ. ಕನಿಷ್ಠ 50,000 ಹೆಚ್ಚುವರಿ ಸೈನಿಕರನ್ನು ಚೀನಾ ಗಡಿಗೆ ನಿಯೋಜಿಸಿದೆ. ಕಳೆದ ವರ್ಷಕ್ಕಿಂತ ಶೇ.40 ರಷ್ಟು ಹೆಚ್ಚು ಸೈನಿಕರ ನಿಯೋಜನೆಯಾಗಿದೆ.

ಚೀನಾ ಗಡಿಗೆ ಸುಮಾರು 2 ಲಕ್ಷ ಸೈನಿಕರ ನಿಯೋಜಿಸಿದ ಭಾರತೀಯ ಸೇನೆ!
Linkup
ಹೊಸದಿಲ್ಲಿ: ವಿಶ್ವದ ಎರಡನೇ ಅತಿದೊಡ್ಡ ಆರ್ಥಿಕತೆ ಹೊಂದಿರುವ ಭಾರತ ಚೀನಾ ವಿರುದ್ಧ ರಕ್ಷಣಾತ್ಮಕ ನೀತಿ ಹೊಂದಿದೆ. ಕನಿಷ್ಠ 50,000 ಹೆಚ್ಚುವರಿ ಸೈನಿಕರನ್ನು ಚೀನಾ ಗಡಿಗೆ ನಿಯೋಜಿಸಿದೆ. 1962 ರಿಂದಲೂ ಉಭಯ ದೇಶಗಳ ನಡುವೆ ಹಿಮಾಲಯ ಭಾಗದಲ್ಲಿ ಹೋರಾಟ ನಡೆದೇ ಇದೆ. ಬ್ರಿಟಿಷರು ಭಾರತ ತೊರೆದಾಗಿನಿಂದಲೂ ಭಾರತದ ಕಾರ್ಯತಂತ್ರದ ಗಮನ ಮುಖ್ಯವಾಗಿ ಪಾಕಿಸ್ತಾನವಾಗಿದೆ. ಎರಡೂ ರಾಷ್ಟ್ರಗಳ ನಡುವೆ ಕಾಶ್ಮೀರದ ವಿವಾದಿತ ಪ್ರದೇಶದ ಮೇಲೆ ಸಂಘರ್ಷ ನಡೆಯುತ್ತಲೇ ಇದೆ. ಆದರೆ, ಕಳೆದೊಂದು ದಶಕದಲ್ಲಿ ಭಾರತ- ಚೀನಾ ನಡೆದ ಭೀಕರ ಹೋರಾಟ ನಡೆದಿವೆ. ಇದರಿಂದ ಪ್ರಧಾನಿ ನರೇಂದ್ರ ಮೋದಿ ಅವರು ಚೀನಾ ಮೇಲೆ ಹೆಚ್ಚು ಗಮನಹರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕಳೆದ ಕೆಲ ತಿಂಗಳಿಂದ ಭಾರತ ಸೇನೆಯು ತನ್ನ ಸೇನಾ ತುಕಡಿಗಳು ಹಾಗೂ ಯುದ್ಧ ವಿಮಾನಗಳನ್ನು ಹೆಚ್ಚುವರಿಯಾಗಿ ಚೀನಾ ಗಡಿಗೆ ರವಾನಿಸಿದೆ. ಚೀನಾ ಜತೆಗೆ ಗಡಿ ಹಂಚಿಕೊಂಡಿರುವ ಪ್ರಮುಖ ಮೂರು ಪ್ರದೇಶಗಳಿಗೆ ಸೇನೆಯನ್ನು ಸೇರಿಸುತ್ತಿದೆ. ಈಗಾಗಲೇ ಸುಮಾರು 2 ಲಕ್ಷ ಸೈನಿಕರನ್ನು ಚೀನಾ ಗಡಿಗೆ ರವಾನಿಸಲಾಗಿದೆ. ಅಂದರೆ ಕಳೆದ ವರ್ಷಕ್ಕಿಂತ ಶೇ.40 ರಷ್ಟು ಹೆಚ್ಚು ಸೈನಿಕರನ್ನು ನಿಯೋಜಿಸಲಾಗಿದೆ. ಈ ಹಿಂದೆ ಕೂಡ ಭಾರತದ ಮಿಲಿಟರಿ ಉಪಸ್ಥಿತಿಯು ಚೀನಾದ ನಡೆಗಳನ್ನು ತಡೆಯುವ ಗುರಿ ಹೊಂದಿತ್ತು. "ಆಕ್ರಮಣಕಾರಿ ರಕ್ಷಣೆ" ಎಂದು ಕರೆಯಲ್ಪಡುವ ಕಾರ್ಯತಂತ್ರದಲ್ಲಿ ಅಗತ್ಯವಿದ್ದರೆ ಚೀನಾದಲ್ಲಿ ಭೂಪ್ರದೇಶವನ್ನು ಆಕ್ರಮಿಸಲು ಮತ್ತು ವಶಪಡಿಸಿಕೊಳ್ಳಲು ಭಾರತೀಯ ಕಮಾಂಡರ್‌ಗಳಿಗೆ ಅನುಮತಿಸಿತ್ತು. ಇದೀಗ ಬಿಎಇ ಸಿಸ್ಟಮ್ಸ್ ಅಭಿವೃದ್ಧಿಪಡಿಸಿರುವ ಎಂ 777 ಹೋವಿಟ್ಜರ್‌ ಫಿರಂಗಿಗಳನ್ನು ಒದಗಿಸಲಾಗಿದೆ. ಅಲ್ಲದೆ, ಕಣಿವೆಯಿಂದ ಕಣಿವೆಯವರೆಗೆ ಸೈನಿಕರಿಗೆ ವಿಮಾನ ಹಾರಾಟಕ್ಕೆ ಹೆಚ್ಚಿನ ಹೆಲಿಕಾಪ್ಟರ್‌ಗಳನ್ನು ನೀಡಲಾಗಿದೆ.