ಡಾ.ವಿಷ್ಣುವರ್ಧನ್ ಜನ್ಮದಿನೋತ್ಸವ: ಅಭಿಮಾನಿಗಳ ಹೃದಯ ಸಿಂಹಾಸನದಲ್ಲಿ 'ಯಜಮಾನ' ಅಜರಾಮರ

ಇಂದು ಡಾ.ವಿಷ್ಣುವರ್ಧನ್ ಅವರ 71ನೇ ಜನ್ಮದಿನ. ಡಾ.ವಿಷ್ಣುವರ್ಧನ್ ಅವರ ಜನ್ಮದಿನವಾದ ಇಂದು ಅಭಿಮಾನಿಗಳು ಅವರ ಸ್ಮರಣೆ ಮಾಡುತ್ತಿದ್ದಾರೆ.

ಡಾ.ವಿಷ್ಣುವರ್ಧನ್ ಜನ್ಮದಿನೋತ್ಸವ: ಅಭಿಮಾನಿಗಳ ಹೃದಯ ಸಿಂಹಾಸನದಲ್ಲಿ 'ಯಜಮಾನ' ಅಜರಾಮರ
Linkup

ಸಾಹಸ ಸಿಂಹ, ಅಭಿನಯ ಭಾರ್ಗವ, ಕೋಟಿಗೊಬ್ಬ, ಕಲಾದೈವ, ಮೈಸೂರು ರತ್ನ ಎಂಬ ಬಿರುದುಗಳಿಂದ ಜನಪ್ರಿಯತೆ ಪಡೆದವರು ಡಾ.ವಿಷ್ಣುವರ್ಧನ್. ‘ದಿ ಫೀನಿಕ್ಸ್ ಆಫ್ ಇಂಡಿಯನ್ ಸಿನಿಮಾ’ ಅಂತಲೇ ಖ್ಯಾತಿ ಪಡೆದಿದ್ದ ಡಾ.ವಿಷ್ಣುವರ್ಧನ್ ಪ್ರೀತಿಯ ಅಭಿಮಾನಿಗಳಿಂದ ‘ಹೃದಯವಂತ’ ಅಂತಲೇ ಕರೆಯಿಸಿಕೊಂಡವರು. ಇಂತಿಪ್ಪ ಡಾ.ವಿಷ್ಣುವರ್ಧನ್ ಅವರ ಜನ್ಮದಿನೋತ್ಸವ ಇಂದು.

ಅಭಿಮಾನಿಗಳ ಪ್ರೀತಿಯ ‘ಯಜಮಾನ’ ಇಂದು ನಮ್ಮೊಂದಿಗೆ ಇದ್ದಿದ್ದರೆ ತಮ್ಮ 71ನೇ ಜನ್ಮದಿನವನ್ನು ಇಂದು ಆಚರಿಸಿಕೊಳ್ಳುತ್ತಿದ್ದರು. ಆದರೆ, ದುರಾದೃಷ್ಟವಶಾತ್ ಡಾ.ವಿಷ್ಣುವರ್ಧನ್ ಇಂದು ನಮ್ಮ ಜೊತೆ ಇಲ್ಲ. ದೈಹಿಕವಾಗಿ ಡಾ.ವಿಷ್ಣುವರ್ಧನ್ ನಮ್ಮೊಂದಿಗೆ ಇಲ್ಲದಿದ್ದರೂ, ಅಭಿಮಾನಿಗಳ ಹೃದಯ ಸಿಂಹಾಸನದಲ್ಲಿ ಡಾ.ವಿಷ್ಣುವರ್ಧನ್ ಅಜರಾಮರ.

ಡಾ.ವಿಷ್ಣುವರ್ಧನ್ ಅವರ ಜನ್ಮದಿನವಾದ ಇಂದು ಅಭಿಮಾನಿಗಳು ಅವರ ಸ್ಮರಣೆ ಮಾಡುತ್ತಿದ್ದಾರೆ. ಡಾ.ವಿಷ್ಣುವರ್ಧನ್ ಅವರ ಹುಟ್ಟುಹಬ್ಬವನ್ನು ಅಭಿಮಾನಿಗಳು ಅರ್ಥಪೂರ್ಣವಾಗಿ ಆಚರಿಸುತ್ತಿದ್ದಾರೆ. ಡಾ.ವಿಷ್ಣುವರ್ಧನ್ ಅವರ ಜನ್ಮದಿನವಾದ ಇಂದು ಕುಟುಂಬಸ್ಥರು ‘ಸಿರಿವಂತ’ನಿಗೆ ಪೂಜೆ ಸಲ್ಲಿಸಿ, ನಮನ ಸಲ್ಲಿಸಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
‘’ಕನ್ನಡ ಚಿತ್ರರಂಗ ಕಂಡ ಮೇರು ಕಲಾವಿದ, ಅಭಿಮಾನಿಗಳ ಪಾಲಿನ ನೆಚ್ಚಿನ ಸಾಹಸಸಿಂಹ ದಿವಂಗತ ಡಾ.ವಿಷ್ಣುವರ್ಧನ್ ಅವರ ಜನ್ಮದಿನದಂದು ಅವರಿಗೆ ಆದರಪೂರ್ವಕ ನಮನಗಳು. ಅವರ ಕಲಾಸೇವೆ, ಹೃದಯವಂತಿಕೆ, ಕನ್ನಡ ನಾಡು ನುಡಿಗಳ ಬಗ್ಗೆ ಅವರಿಗಿದ್ದ ಕಾಳಜಿ, ಅವರ ಸಾಧನೆಗಳು ಪ್ರೇರಣಾದಾಯಕ’’
ದೊಡ್ಡ ಗಣೇಶ್
‘’ಕನ್ನಡಿಗರ ನೆಚ್ಚಿನ ಸಾಹಸ ಸಿಂಹ, ಅಭಿನಯ ಭಾರ್ಗವ ವಿಷ್ಣುವರ್ಧನ್ ಅವರಿಗೆ ಜನ್ಮದಿನದ ಶುಭಾಶಯಗಳು’’

ಕಿಚ್ಚ ಸುದೀಪ್
‘’ಅವರಿಗೆ ಸಾಗರದಷ್ಟು ಅಭಿಮಾನಿಗಳಿದ್ದಾರೆ. ಆ ಸಾಗರದಲ್ಲಿ ನಾನು ಕೇವಲ ಒಂದು ಗುಳ್ಳೆ. ನಿಮ್ಮನ್ನು ಇಂದು ಮಾತ್ರವಲ್ಲ, ಪ್ರತಿ ದಿನ, ಪ್ರತಿ ಸೆಕೆಂಡ್ ನೆನಪಿಸಿಕೊಳ್ಳುತ್ತೇವೆ’’
ಬಿ.ಸಿ.ಪಾಟೀಲ್
ಕನ್ನಡ ಚಿತ್ರರಂಗದ ದಂತಕಥೆ, ಅಭಿನಯ ಭಾರ್ಗವ, ಸಾಹಸ ಸಿಂಹ ಡಾ.ವಿಷ್ಣುವರ್ಧನ್ ಅವರ ಜನ್ಮದಿನದಂದು ಶತಕೋಟಿ ಪ್ರಣಾಮಗಳು. ಕನ್ನಡ ಚಿತ್ರರಂಗಕ್ಕೆ ಅವರು ನೀಡಿದ ಕಲಾಸೇವೆ ಅವಿಸ್ಮರಣೀಯ’’

ರಮೇಶ್ ಅರವಿಂದ್
‘’ಸ್ನೇಹಿದ ಕಡಲಲ್ಲಿ.. ನೆನಪಿನ ದೋಣಿಯಲಿ’’

ರಘುರಾಮ್
‘’ಹರಿಯೋ ನದಿಯು ಒಂದೇ ಕಡೆ ನಿಲ್ಲೋಕಾಗಲ್ಲ. ವಿಷ್ಣು ದಾದಾನ ಹೆಸರನ್ನು ಅಭಿಮಾನಿಗಳ ಹೃದಯದಿಂದ ಅಳಿಸೋಕಾಗಲ್ಲ. ಮಹಾಪುರುಷ ಕರುಣಾಮಯಿಗೆ ಹುಟ್ಟುಹಬ್ಬದ ಶುಭಾಶಯಗಳು’’

ಸೆಪ್ಟೆಂಬರ್ 18, 1950
ಸೆಪ್ಟೆಂಬರ್ 18, 1950.. ಡಾ.ವಿಷ್ಣುವರ್ಧನ್ ಹುಟ್ಟಿದ ದಿನ. ಮೈಸೂರಿನಲ್ಲಿ ಜನಿಸಿದ ಡಾ.ವಿಷ್ಣುವರ್ಧನ್ ಬೆಂಗಳೂರಿನ ನ್ಯಾಷನಲ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮುಗಿಸಿದರು. ‘ವಂಶವೃಕ್ಷ’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ಡಾ.ವಿಷ್ಣುವರ್ಧನ್‌ಗೆ ಸ್ಯಾಂಡಲ್‌ವುಡ್‌ನಲ್ಲಿ ದೊಡ್ಡ ಬ್ರೇಕ್ ನೀಡಿದ್ದು ಚಿತ್ರಬ್ರಹ್ಮ ಪುಟ್ಟಣ್ಣ ಕಣಗಾಲ್ ನಿರ್ದೇಶನದ ‘ನಾಗರಹಾವು’ ಸಿನಿಮಾ. ‘ಭೂತಯ್ಯನ ಮಗ ಅಯ್ಯು’, ‘ಸಾಹಸ ಸಿಂಹ’, ‘ಬಂಧನ’, ‘ಹಬ್ಬ’, ‘ಜೀವನದಿ’, ‘ಯಜಮಾನ’, ‘ಸಿಂಹಾದ್ರಿಯ ಸಿಂಹ’, ‘ಯಜಮಾನ’, ‘ಆಪ್ತಮಿತ್ರ’, ‘ಆಪ್ತರಕ್ಷಕ’ ಮುಂತಾದ ಅನೇಕ ಹಿಟ್ ಚಿತ್ರಗಳನ್ನು ಡಾ.ವಿಷ್ಣುವರ್ಧನ್ ನೀಡಿದರು. 200ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿರುವ ಡಾ.ವಿಷ್ಣುವರ್ಧನ್‌ಗೆ ರಾಜ್ಯ ಪ್ರಶಸ್ತಿ, ಡಾ.ರಾಜ್‌ಕುಮಾರ್ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳು ಲಭಿಸಿವೆ. 2009 ಡಿಸೆಂಬರ್ 30ರಂದು ಡಾ.ವಿಷ್ಣುವರ್ಧನ್ ಇಹಲೋಕ ತ್ಯಜಿಸಿದರು.