ಭಾರತದಲ್ಲಿ ಆವಿಷ್ಕಾರಕ್ಕೆ ಅವಕಾಶ ಕಲ್ಪಿಸಿಕೊಟ್ಟ ಕೋವಿಡ್‌-19: ಕಿರಣ್‌ ಮಜುಂದಾರ್‌ ಶಾ

ಕೋವಿಡ್‌-19 ತುರ್ತು ಪರಿಸ್ಥಿತಿ ಭಾರತದಲ್ಲಿ ವೈದ್ಯಕೀಯ ಸಂಶೋಧನೆ ಹಾಗೂ ಆವಿಷ್ಕಾರಗಳಿಗೆ ವೇದಿಕೆ ಕಲ್ಪಿಸಿಕೊಟ್ಟಿತು ಎಂದು ಬಯೋಕಾನ್‌ ಮುಖ್ಯಸ್ಥರಾದ ಕಿರಣ್‌ ಮಜುಂದಾರ್‌ ಶಾ ಅಭಿಪ್ರಾಯಪಟ್ಟಿದ್ದಾರೆ

ಭಾರತದಲ್ಲಿ ಆವಿಷ್ಕಾರಕ್ಕೆ ಅವಕಾಶ ಕಲ್ಪಿಸಿಕೊಟ್ಟ ಕೋವಿಡ್‌-19: ಕಿರಣ್‌ ಮಜುಂದಾರ್‌ ಶಾ
Linkup
ವಾಷಿಂಗ್ಟನ್‌: ಕೋವಿಡ್‌-19 ತುರ್ತು ಪರಿಸ್ಥಿತಿ ಭಾರತದಲ್ಲಿ ವೈದ್ಯಕೀಯ ಸಂಶೋಧನೆ ಹಾಗೂ ಆವಿಷ್ಕಾರಗಳಿಗೆ ವೇದಿಕೆ ಕಲ್ಪಿಸಿಕೊಟ್ಟಿತು ಎಂದು ಮುಖ್ಯಸ್ಥರಾದ ಅಭಿಪ್ರಾಯಪಟ್ಟಿದ್ದಾರೆ. ಇಂಡೋ-ಯುಸ್‌ ಬಯೋ ಫಾರ್ಮಾ ಸಮ್ಮೇಳನದ ಮುಖ್ಯ ಭಾಷಣಕಾರರಾಗಿ ಅಮೆರಿಕಕ್ಕೆ ತೆರಳಿರುವ ಅವರು ಮಾಧ್ಯಮಗಳ ಜತೆ ಮಾತನಾಡಿದರು. ಯುಎಸ್‌ಎ ಇಂಡಿಯಾ ಚೇಂಬರ್‌ ಆಫ್‌ ಕಾಮರ್ಸ್‌ ಆಯೋಜಿಸಿರುವ 15ನೇ ಆವೃತ್ತಿಯ ಈ ಸಮ್ಮೇಳನದಲ್ಲಿ ಜೂ. 22ರಂದು ನಡೆಯಲಿದೆ. ಕಿರಣ್‌ ಮಜುಂದಾರ್‌ ಶಾ ಅವರು ಪ್ರಮುಖ ಭಾಷಣಕಾರಾಗಿದ್ದು, ಫೈಜರ್‌ ಸಂಸ್ಥೆ ಸಿಇಒ ಡಾ. ಅಲ್ಬರ್ಟ್‌ ಬೌರ್ಲಾ ಮತ್ತಿತರರು ಪಾಲ್ಗೊಳ್ಳಲಿದ್ದಾರೆ. ''ಭಾರತದಲ್ಲಿ ಆವಿಷ್ಕಾರದ ಹೊಸ ಯುಗ ಆರಂಭವಾಗಿರುವ ಬಗ್ಗೆ ಚರ್ಚೆ ನಡೆಸುವುದೇ ಈ ವರ್ಷದ ಸಮ್ಮೇಳನದ ಪ್ರಮುಖ ಉದ್ದೇಶ. ಕೋವಿಡ್‌-19 ಆ ಒಂದು ಸಂದರ್ಭ ಸೃಷ್ಟಿ ಮಾಡಿದೆ ಎಂಬುದು ನನ್ನ ನಂಬಿಕೆ,'' ಎಂದು ಮಜುಂದಾರ್‌ ಷಾ ಅವರು ಹೇಳಿದರು.