ಜೂನ್‌ 24ಕ್ಕೆ ವಿಂಡೋಸ್‌ 11 ಒಎಸ್ ಬಿಡುಗಡೆ: 2025ರಿಂದ ವಿಂಡೋಸ್‌ 10 ಸ್ಥಗಿತ!

ಮೈಕ್ರೊಸಾಫ್ಟ್‌ ಶೀಘ್ರದಲ್ಲಿಯೇ 'ನೆಕ್ಸ್ಟ್‌ ಜನರೇಶನ್‌'ನ ವಿಂಡೋಸ್‌ 11 ಸಾಫ್ಟ್‌ವೇರ್‌ ಆಪರೇಟಿಂಗ್‌ ಸಿಸ್ಟಮ್‌ ಅನ್ನು ಬಿಡುಗಡೆಗೊಳಿಸಲಿದೆ. ಹಾಗೂ 2025ರ ಅಕ್ಟೋಬರ್‌ 14ರಿಂದ ವಿಂಡೋಸ್‌ 10ನ್ನು ನಿವೃತ್ತಿಗೊಳಿಸಲಿದೆ.

ಜೂನ್‌ 24ಕ್ಕೆ ವಿಂಡೋಸ್‌ 11 ಒಎಸ್ ಬಿಡುಗಡೆ: 2025ರಿಂದ ವಿಂಡೋಸ್‌ 10 ಸ್ಥಗಿತ!
Linkup
ಹೊಸದಿಲ್ಲಿ: ಮೈಕ್ರೊಸಾಫ್ಟ್‌ ಶೀಘ್ರದಲ್ಲಿಯೇ 'ನೆಕ್ಸ್ಟ್‌ ಜನರೇಶನ್‌'ನ ಸಾಫ್ಟ್‌ವೇರ್‌ ಆಪರೇಟಿಂಗ್‌ ಸಿಸ್ಟಮ್‌ ಅನ್ನು ಬಿಡುಗಡೆಗೊಳಿಸಲಿದೆ. ಹಾಗೂ 2025ರ ಅಕ್ಟೋಬರ್‌ 14ರಿಂದ ವಿಂಡೋಸ್‌ 10ನ್ನು ನಿವೃತ್ತಿಗೊಳಿಸಲಿದ್ದು, ಅದಕ್ಕೆ ತನ್ನ ಬೆಂಬಲವನ್ನು ಸ್ಥಗಿತಗೊಳಿಸಲಿದೆ. ಮೈಕ್ರೊಸಾಫ್ಟ್‌ ಈ ಬಗ್ಗೆ ಪರಿಷ್ಕೃತ ಮಾಹಿತಿಯನ್ನು ಪ್ರಕಟಿಸಿದ್ದು, ವಿವರಗಳನ್ನು ನೀಡಿದೆ. ವಿಂಡೋಸ್‌ 10ಕ್ಕೆ ಮೈಕ್ರೊಸಾಫ್ಟ್‌ ಬೆಂಬಲ ಸ್ಥಗಿತ ಎಂದರೆ, ಯಾವುದೇ ಸಾಫ್ಟ್‌ವೇರ್‌ ಅಪ್‌ಡೇಟ್‌, ತಾಂತ್ರಿಕ ಸಮಸ್ಯೆಗಳಿಗೆ ಪರಿಹಾರ ಇತ್ಯಾದಿಗಳನ್ನು ನಿಗದಿತ ಗಡುವಿನ ನಂತರ ಒದಗಿಸುವುದಿಲ್ಲ. ವಿಂಡೋಸ್‌ 11 ಜೂನ್‌ 24ರಂದು ಬಿಡುಗಡೆಯಾಗಲಿದ್ದು, ಮೈಕ್ರೊಸಾಫ್ಟ್‌ ಸಿಇಒ , ಮುಖ್ಯ ಉತ್ಪನ್ನ ಅಧಿಕಾರಿ ಪಾನ್ಸೊ ಪನಯ್‌ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಭಾರತೀಯ ಕಾಲಮಾನ ಪ್ರಕಾರ ಜೂನ್‌ 24ರಂದು ರಾತ್ರಿ 8.30ಕ್ಕೆ ಕಾರ್ಯಕ್ರಮದ ನೇರಪ್ರಸಾರ ಇರಲಿದೆ. ಜೂನ್‌ 24ರ ಕಾರ್ಯಕ್ರಮದ ಬಳಿಕ ಮೈಕ್ರೊಸಾಫ್ಟ್‌ ತನ್ನ ಆಂತರಿಕ ವಲಯದಲ್ಲಿ ಮೊದಲು ವಿಂಡೋಸ್‌ 1 ವಿತರಿಸಲಿದೆ. ಅಕ್ಟೋಬರ್‌ ನಂತರ ಎಲ್ಲ ಬಳಕೆದಾರಿಗೆ ದೊರೆಯುವ ನಿರೀಕ್ಷೆ ಇದೆ. ಈಗಾಗಲೇ ವಿಂಡೋಸ್‌ 10 ಬಳಸುತ್ತಿರುವವರಿಗೆ ವಿಂಡೋಸ್‌ 11 ಉಚಿತವಾಗಿ ಪರಿಷ್ಕೃತವಾಗಲಿದೆಯೇ ಎಂಬುದನ್ನು ಕಾದು ನೋಡಬೇಕಾಗಿದೆ.