ಬೆಟ್ಟದಿಂದ ಉರುಳಿಬಂದ ಬೃಹತ್ ಬಂಡೆಗಳು: ಕಣ್ಣೆದುರೇ ಮುರಿಯಿತು ಸೇತುವೆ, 9 ಪ್ರವಾಸಿಗರ ದುರ್ಮರಣ

ಹಿಮಾಚಲ ಪ್ರದೇಶದ ಸಾಂಗ್ಲಾ ಕಣಿವೆಯಲ್ಲಿ ಭಾರಿ ಪ್ರಮಾಣದ ಕಲ್ಲು ಕುಸಿತ ಉಂಟಾಗಿ ವಾಹನದ ಮೇಲೆ ಬಂಡೆ ಬಿದ್ದ ಪರಿಣಾಮ ಒಂಬತ್ತು ಪ್ರವಾಸಿಗರು ಮೃತಪಟ್ಟಿದ್ದಾರೆ. ಬಂಡೆ ಅಪ್ಪಳಿಸಿದ ರಭಸಕ್ಕೆ ಸೇತುವೆಯೊಂದು ಪುಡಿಯಾಗಿದೆ.

ಬೆಟ್ಟದಿಂದ ಉರುಳಿಬಂದ ಬೃಹತ್ ಬಂಡೆಗಳು: ಕಣ್ಣೆದುರೇ ಮುರಿಯಿತು ಸೇತುವೆ, 9 ಪ್ರವಾಸಿಗರ ದುರ್ಮರಣ
Linkup
ಶಿಮ್ಲಾ: ಹಿಮಾಚಲ ಪ್ರದೇಶದ ಸಾಂಗ್ಲಾ ಕಣಿವೆಯಲ್ಲಿ ಭಾನುವಾರ ಭಾರಿ ಉಂಟಾಗಿ ಬೃಹತ್ ಗಾತ್ರದ ಬಂಡೆಗಳು ಉರುಳಿದ ಪರಿಣಾಮ ಸೇತುವೆಯೊಂದು ಪುಡಿಯಾಗಿದೆ. ಈ ಭೀಕರ ಘಟನೆಯಲ್ಲಿ ಒಂಬತ್ತು ಮೃತಪಟ್ಟಿದ್ದಾರೆ. ಪರ್ವತದ ತುದಿಯಿಂದ ಕಣಿವೆಯ ಕೆಳಕ್ಕೆ ಉರುಳಿ ಬಂದು ಅಪ್ಪಳಿಸುವ ಭಯಾನಕ ವಿಡಿಯೋ ವೈರಲ್ ಆಗಿದೆ. ಬೃಹತ್ ಕಲ್ಲುಬಂಡೆಯೊಂದು ಬೆಟ್ಟದ ತುದಿಯಿಂದ ವೇಗವಾಗಿ ಉರುಳಿಬಂದಿದ್ದು, ಅದು ಅಪ್ಪಳಿಸಿದ ರಭಸಕ್ಕೆ ಸೇತುವೆಯ ಭಾಗವೊಂದು ಪುಡಿಪುಡಿಯಾಗಿ ನದಿಯೊಳಗೆ ಬಿದ್ದಿದೆ. 11 ಮಂದಿ ಪ್ರವಾಸಿಗರಿದ್ದ ವಾಹನವೊಂದಕ್ಕೆ ಬೃಹತ್ ಬಂಡೆಗಳು ಅಪ್ಪಳಿಸಿವೆ. ಇದರಿಂದ ಒಂಬತ್ತು ಮಂದಿ ಮೃತಪಟ್ಟಿದ್ದಾರೆ. ಗಾಯಗೊಂಡ ಉಳಿದಿಬ್ಬರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ವೈದ್ಯರ ತಂಡವೊಂದು ಸ್ಥಳಕ್ಕೆ ಧಾವಿಸಿದೆ ಎಂದು ಕಿನ್ನೌರ್ ಎಸ್‌ಪಿ ಸಾಜು ರಾಮ್ ರಾಣಾ ತಿಳಿಸಿದ್ದಾರೆ. ಈ ಪ್ರವಾಸಿಗರ ವಾಹನವು ಕಿನ್ನೌರ್ ಜಿಲ್ಲೆಯ ಜನಪ್ರಿಯ ಪ್ರವಾಸಿ ತಾಣ ಚಿತ್ಕುಲ್‌ನತ್ತ ತೆರಳುತ್ತಿತ್ತು. ಮೃತರಲ್ಲಿ ನಾಲ್ವರು ಮಹಿಳೆಯರು ಮತ್ತು ಐದು ಮಂದಿ ಪುರುಷರು ಇದ್ದಾರೆ. ಈ ವಾಹನದ ಸಮೀಪವೇ ಇದ್ದ ಬತ್ಸೇರಿ ಮುರಿದುಬಿದ್ದಿದೆ. ಭಾನುವಾರ ಮಧ್ಯಾಹ್ನ 2.15ರ ಸುಮಾರಿಗೆ ಈ ದುರ್ಘಟನೆ ಸಂಭವಿಸಿದೆ. ಸುಮಾರು 200 ಮೀಟರ್ ಉದ್ದದಷ್ಟು ಭಾಗದ ಹೆದ್ದಾರಿಗೆ ಹಾನಿಯಾಗಿದೆ. ಬೆಟ್ಟದ ಕೆಳಭಾಗದಲ್ಲಿದ್ದ ಕಾರುಗಳಿಗೆ ಬಂಡೆಗಳು ಹೊಡೆದ ಪರಿಣಾಮ ನಜ್ಜುಗುಜ್ಜಾಗಿವೆ. ಅದರ ರಭಸ ಹಾಗೂ ಅಪ್ಪಳಿಸಿದ ವೇಗಕ್ಕೆ ಭಾರಿ ಪ್ರಮಾಣದಲ್ಲಿ ದೂಳು ಕವಿದುಕೊಂಡಿತ್ತು. ಈ ಘಟನೆ ಪ್ರವಾಸಿಗರಲ್ಲಿ ಮತ್ತು ಸ್ಥಳೀಯರಲ್ಲಿ ತೀವ್ರ ಆತಂಕ ಮೂಡಿಸಿದೆ. ಅಪಾಯಕಾರಿ ಕಡಿದಾದ ಬೆಟ್ಟಗಳು ಮತ್ತು ರಸ್ತೆಗಳಿರುವ ಹಿಮಾಚಲ ಪ್ರದೇಶದಲ್ಲಿ ನೈಸರ್ಗಿಕ ದುರಂತಗಳು ಸಾಮಾನ್ಯವಾಗಿವೆ. ಈಗಿನ ಅಪಾಯಕಾರಿ ಸನ್ನಿವೇಶದಲ್ಲಿ ಮುಂದುವರಿಯುವುದು ಸೂಕ್ತವಲ್ಲ ಎಂದು ಅನೇಕರು ಜೀವಭಯದಿಂದ ಪ್ರವಾಸವನ್ನು ಮೊಟಕುಗೊಳಿಸಿ ಹಿಂದಿರುಗುತ್ತಿದ್ದಾರೆ. ಈ ಘಟನೆಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಜೈರಾಮ್ ಠಾಕೂರ್ ಆಘಾತ ವ್ಯಕ್ತಪಡಿಸಿದ್ದಾರೆ. 'ಹಿಮಾಚಲ ಪ್ರದೇಶದ ಕಿನ್ನೌರ್‌ನಲ್ಲಿ ಭೂಕುಸಿತದಿಂದ ಉಂಟಾದ ಅಪಘಾತ ಬಹಳ ಖೇದಕರ. ಇದರಲ್ಲಿ ಜೀವಕಳೆದುಕೊಂಡವರ ಕುಟುಂಬಕ್ಕೆ ನನ್ನ ಹೃದಯಪೂರ್ವಕ ಸಂತಾಪಗಳು. ಅಪಘಾತದಲ್ಲಿ ಗಾಯಗೊಂಡಿರುವವರ ಚಿಕಿತ್ಸೆಗೆ ಎಲ್ಲ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ' ಎಂದು ಪ್ರಧಾನಿ ಟ್ವೀಟ್ ಮಾಡಿದ್ದಾರೆ. ಮುಂದಿನ ಕೆಲವು ದಿನಗಳಲ್ಲಿ ಹಿಮಾಚಲ ಪ್ರದೇಶದಲ್ಲಿ ವಿಪರೀತ ಮಳೆ ಸುರಿಯಲಿದ್ದು, ಭೂಕುಸಿತ ಉಂಟಾಗಬಹುದು ಎಂದು ಹವಾಮಾನ ಇಲಾಖೆ ಅಧಿಕಾರಿಗಳು ಎಚ್ಚರಿಸಿದ್ದರು.