ಬಿಜೆಪಿಯ ಟೂಲ್‌ಕಿಟ್‌ ಆರೋಪ ತಿರುಚಿದ ದಾಖಲೆ ಎಂದ ಬೆನ್ನಲ್ಲೇ ಟ್ವಿಟ್ಟರ್‌ ಕಚೇರಿಗೆ ದಿಲ್ಲಿ ಪೊಲೀಸ್ ದಾಳಿ!

ಆರೋಪ-ಪ್ರತ್ಯಾರೋಪದ ಮಧ್ಯೆ ದಿಲ್ಲಿ ಪೊಲೀಸ್‌ ವಿಶೇಷ ಘಟಕದ ತಂಡವು ಈ ಪ್ರಕರಣ ಸಂಬಂಧ ದಿಲ್ಲಿ, ಹರಿಯಾಣದ ಗುರುಗ್ರಾಮದಲ್ಲಿರುವ ಟ್ವಿಟರ್‌ ಕಚೇರಿಗಳ ಮೇಲೆ ಸೋಮವಾರ ದಾಳಿ ನಡೆಸಿದೆ. ಸಂಬಿತ್‌ ಪಾತ್ರಾ ಮಾಡಿದ್ದ ಟೂಲ್‌ಕಿಟ್‌ ಆರೋಪವನ್ನು ನಿರಾಕರಿಸಿದ್ದ ಟ್ವಿಟರ್‌ ಇದೊಂದು ತಿರುಚಿದ ದಾಖಲೆ ಎಂದು ಹೇಳಿತ್ತು. ಇದಕ್ಕೆ ಮಾಹಿತಿ ತಂತ್ರಜ್ಞಾನ ಇಲಾಖೆಯೂ ಆಕ್ಷೇಪ ವ್ಯಕ್ತಪಡಿಸಿತ್ತು.

ಬಿಜೆಪಿಯ ಟೂಲ್‌ಕಿಟ್‌ ಆರೋಪ ತಿರುಚಿದ ದಾಖಲೆ ಎಂದ ಬೆನ್ನಲ್ಲೇ ಟ್ವಿಟ್ಟರ್‌ ಕಚೇರಿಗೆ ದಿಲ್ಲಿ ಪೊಲೀಸ್ ದಾಳಿ!
Linkup
ಹೊಸದಿಲ್ಲಿ: ಕೊರೊನಾ ಬಿಕ್ಕಟ್ಟಿನ ವೇಳೆ ದೇಶ ಹಾಗೂ ಪ್ರಧಾನಿ ಮೋದಿ ಅವರ ವರ್ಚಸ್ಸಿಗೆ ಧಕ್ಕೆ ತರಲು ಕಾಂಗ್ರೆಸ್‌ ಕೋವಿಡ್‌ ಟೂಲ್‌ಕಿಟ್‌ ಸಂಚು ನಡೆಸಿದೆ ಎಂದು ಬಿಜೆಪಿ ವಕ್ತಾರ ಸಂಬಿತ್‌ ಪಾತ್ರ ಮಾಡಿದ್ದ ಆರೋಪ ಕುರಿತು ಬಿಜೆಪಿ ಮತ್ತು ಕಾಂಗ್ರೆಸ್‌ ನಡುವೆ ಜಟಾಪಟಿ ಮುಂದುವರಿದಿದೆ. ಆರೋಪ-ಪ್ರತ್ಯಾರೋಪದ ಮಧ್ಯೆ ದಿಲ್ಲಿ ಪೊಲೀಸ್‌ ವಿಶೇಷ ಘಟಕದ ತಂಡವು ಈ ಪ್ರಕರಣ ಸಂಬಂಧ ದಿಲ್ಲಿ, ಹರಿಯಾಣದ ಗುರುಗ್ರಾಮದಲ್ಲಿರುವ ಟ್ವಿಟರ್‌ ಕಚೇರಿಗಳ ಮೇಲೆ ಸೋಮವಾರ ದಾಳಿ ನಡೆಸಿದೆ. ಸಂಬಿತ್‌ ಪಾತ್ರಾ ಮಾಡಿದ್ದ ಟೂಲ್‌ಕಿಟ್‌ ಆರೋಪವನ್ನು ನಿರಾಕರಿಸಿದ್ದ ಟ್ವಿಟರ್‌ ಇದೊಂದು ತಿರುಚಿದ ದಾಖಲೆ ಎಂದು ಹೇಳಿತ್ತು. ಇದಕ್ಕೆ ಮಾಹಿತಿ ತಂತ್ರಜ್ಞಾನ ಇಲಾಖೆಯೂ ಆಕ್ಷೇಪ ವ್ಯಕ್ತಪಡಿಸಿತ್ತು. ದಿಲ್ಲಿ ಪೊಲೀಸರು, ಈ ಕುರಿತು ಸ್ಪಷ್ಟ ಕಾರಣ ನೀಡುವಂತೆ ಟ್ವಿಟರ್‌ಗೆ ನೋಟಿಸ್‌ ನೀಡಿದ್ದರು. ನೋಟಿಸ್‌ಗೆ ಪ್ರತಿಕ್ರಿಯೆ ಬಾರದ ಹಿನ್ನೆಲೆಯಲ್ಲಿ ಪೊಲೀಸರು ದಿಲ್ಲಿ ಹಾಗೂ ಗಾಜಿಯಾಬಾದ್‌ನಲ್ಲಿರುವ ಟ್ವಿಟರ್‌ ಕಚೇರಿಗಳ ಮೇಲೆ ದಾಳಿ ನಡೆಸಿದ್ದಾರೆ. ಟೂಲ್‌ಕಿಟ್‌ ಸತ್ಯಾಸತ್ಯತೆ ಕುರಿತು ತನಿಖೆ ಮುಂದುವರಿಯಲಿದೆ ಎಂದಿದ್ದಾರೆ.