ಬಿಟ್‌ ಕಾಯಿನ್‌ ಸೇರಿದಂತೆ ಕ್ರಿಪ್ಟೊ ಕರೆನ್ಸಿಗಳ ಮೌಲ್ಯ ಭಾರಿ ಕುಸಿತ

ಚೀನಾದ ಬ್ಯಾಂಕಿಂಗ್‌ ಅಸೋಸಿಯೇಶನ್‌ನ ಒಂದೇ ಒಂದು ಎಚ್ಚರಿಕೆಯ ನಂತರ ಜನಪ್ರಿಯ ಕ್ರಿಪ್ಟೊ ಕರೆನ್ಸಿಗಳ ಮೌಲ್ಯದಲ್ಲಿ ಗಣನೀಯ ಕುಸಿತ ಉಂಟಾಗಿದೆ. ಬಿಟ್‌ ಕಾಯಿನ್‌ ದರದಲ್ಲಿ ಶೇ.30ರಷ್ಟು ಕುಸಿತ ಉಂಟಾಗಿದೆ.

ಬಿಟ್‌ ಕಾಯಿನ್‌ ಸೇರಿದಂತೆ ಕ್ರಿಪ್ಟೊ ಕರೆನ್ಸಿಗಳ ಮೌಲ್ಯ ಭಾರಿ ಕುಸಿತ
Linkup
ಹೊಸದಿಲ್ಲಿ: ಬಿಟ್‌ ಕಾಯಿನ್‌ ಸೇರಿದಂತೆ ಜನಪ್ರಿಯ ಕ್ರಿಪ್ಟೊ ಕರೆನ್ಸಿಗಳ ಮೌಲ್ಯದಲ್ಲಿ ಗಣನೀಯ ಕುಸಿತ ಉಂಟಾಗಿದೆ. ಬಿಟ್‌ ಕಾಯಿನ್‌ ದರದಲ್ಲಿ ಶೇ.30ರಷ್ಟು ಕುಸಿತ ( 28 ಲಕ್ಷ ರೂ.ಗೆ ಇಳಿಕೆ) ಉಂಟಾಗಿದೆ. ಎಥೆರಿಯಂ ಶೇ.30.35 ದರ ಕಳೆದುಕೊಂಡಿದೆ. ಕಳೆದ 7 ದಿನಗಳಲ್ಲಿ ಇಂಥ ಕ್ರಿಪ್ಟೊ ಕರೆನ್ಸಿಗಳ ಮೌಲ್ಯದಲ್ಲಿ 300 ಕೋಟಿ ಡಾಲರ್‌ಗೂ ಹೆಚ್ಚು ನಷ್ಟವಾಗಿದೆ. ಬಳಕೆ ಬಗ್ಗೆ ಚೀನಾದ ಬ್ಯಾಂಕಿಂಗ್‌ ಅಸೋಸಿಯೇಶನ್‌, ಇಂಥ ಕರೆನ್ಸಿಗಳನ್ನು ಬಳಸುವ ತನ್ನ ಸದಸ್ಯ ಬ್ಯಾಂಕ್‌ಗಳಿಗೆ ಎಚ್ಚರಿಸಿದ ನಂತರ ಕ್ರಿಪ್ಟೊ ಕರೆನ್ಸಿಗಳ ಮೌಲ್ಯ ಭಾರಿ ಕುಸಿತಕ್ಕೀಡಾಗಿದೆ. ಇತ್ತೀಚೆಗೆ ಟೆಸ್ಲಾ ಕಂಪನಿ ಕೂಡ ಕ್ರಿಪ್ಟೊ ಕರೆನ್ಸಿ ಬಳಸದಿರಲು ನಿರ್ಧರಿಸಿತ್ತು.

ಬಿಟ್‌ ಕಾಯಿನ್‌ ಮಾದರಿಯ ಡಿಜಿಟಲ್‌ ಕರೆನ್ಸಿಗಳು ಯಾವುದೇ ಬ್ಯಾಂಕ್‌ ಅಥವಾ ಸರಕಾರಗಳ ನಿಯಂತ್ರಣದ ಲ್ಲಿಇರುವುದಿಲ್ಲ. ಕಂಪ್ಯೂಟರ್‌ನಲ್ಲಿ ಡಿಜಿಟಲ್‌ ವಿಧಾನದಲ್ಲಿ ಬಿಟ್‌ಕಾಯಿನ್‌ನ 'ಮೈನಿಂಗ್‌' ಮಾಡಿ ವಿನಿಮಯ ಮಾಡಿಕೊಳ್ಳಲಾಗುತ್ತದೆ. ಡಾಲರ್‌ ಅಥವಾ ಇತರ ಕರೆನ್ಸಿಗಳಿಗೆ ವಿನಿಮಯ ಮಾಡಿಕೊಳ್ಳುತ್ತಾರೆ. ಕೆಲ ಕಂಪನಿಗಳು ಬಿಟ್‌ ಕಾಯಿನ್‌ಗಳನ್ನು ಸ್ವೀಕರಿಸುತ್ತವೆ. ಡಿಜಿಟಲ್‌ ವ್ಯಾಲೆಟ್‌ನಲ್ಲಿ ಇವುಗಳನ್ನು ಸ್ಟೋರ್‌ ಮಾಡಿಕೊಳ್ಳಬಹುದು.