ಮಾರ್ಚ್‌ ತ್ರೈಮಾಸಿಕದಲ್ಲಿ ಎಸ್‌ಬಿಐಗೆ ದಾಖಲೆಯ 6,450 ಕೋಟಿ ರೂ. ಲಾಭ, ಪ್ರತಿ ಷೇರಿಗೆ 4 ರೂ. ಲಾಭಾಂಶ

ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ಜನವರಿ - ಮಾರ್ಚ್ ತ್ರೈಮಾಸಿಕದಲ್ಲಿ ದಾಖಲೆಯ 6,450 ಕೋಟಿ ರೂ. ನಿವ್ವಳ ಲಾಭ ಗಳಿಸಿದ್ದು, ಲಾಭದಲ್ಲಿ ಶೇ. 80ರಷ್ಟು ಏರಿಕೆಯಾಗಿದೆ. ಬ್ಯಾಂಕ್‌ನ ಎನ್‌ಪಿಎ ಶೇ. 4.98ಕ್ಕೆ ಇಳಿಕೆಯಾಗಿದೆ.

ಮಾರ್ಚ್‌ ತ್ರೈಮಾಸಿಕದಲ್ಲಿ ಎಸ್‌ಬಿಐಗೆ ದಾಖಲೆಯ 6,450 ಕೋಟಿ ರೂ. ಲಾಭ, ಪ್ರತಿ ಷೇರಿಗೆ 4 ರೂ. ಲಾಭಾಂಶ
Linkup
ಹೊಸದಿಲ್ಲಿ: ಸಾರ್ವಜನಿಕ ವಲಯದ () ಕಳೆದ ಜನವರಿ - ಮಾರ್ಚ್ ತ್ರೈಮಾಸಿಕದಲ್ಲಿ ದಾಖಲೆಯ 6,450 ಕೋಟಿ ರೂ. ನಿವ್ವಳ ಲಾಭ ಗಳಿಸಿದ್ದು, ಲಾಭದಲ್ಲಿ ಬರೋಬ್ಬರಿ ಶೇ. 80ರಷ್ಟು ಏರಿಕೆಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 3,580 ಕೋಟಿ ರೂ. ನಿವ್ವಳ ಲಾಭ ಗಳಿಸಿತ್ತು. ನಿವ್ವಳ ಆದಾಯ ಮತ್ತು ಇತರ ಆದಾಯಗಳಲ್ಲಿ ಏರಿಕೆಯ ಪರಿಣಾಮ ಬ್ಯಾಂಕ್‌ನ ಲಾಭಾಂಶ ದಾಖಲೆ ಮಟ್ಟಕ್ಕೆ ಹೆಚ್ಚಳವಾಗಿದೆ. ಭೂಷಣ್‌ ಪವರ್‌ ಆ್ಯಂಡ್‌ ಸ್ಟೀಲ್‌ನಿಂದ ಬರಬೇಕಿದ್ದ 4,000 ಕೋಟಿ ರೂ. ಸುಸ್ತಿ ಸಾಲ ಮರು ವಸೂಲಾಗಿರುವುದೂ ಪ್ರಯೋಜನವಾಗಿದೆ. ಬ್ಯಾಂಕ್‌ನ ನಿವ್ವಳ ಬಡ್ಡಿ ಆದಾಯ ಶೇ.19ರಷ್ಟು ಹೆಚ್ಚಳವಾಗಿದ್ದು, 27,067 ಕೋಟಿ ರೂ.ಗೆ ವೃದ್ಧಿಸಿದೆ. ಬ್ಯಾಂಕ್‌ನ ಎನ್‌ಪಿಎ ಶೇ. 4.98ಕ್ಕೆ ಇಳಿಕೆಯಾಗಿದೆ. ಭಾರಿ ಲಾಭ ಗಳಿಕೆಯ ಹಿನ್ನೆಲೆಯಲ್ಲಿ ಪ್ರತಿ ಷೇರಿಗೆ 4 ರೂ.ಗಳ ಡಿವಿಡೆಂಡ್‌ ಅನ್ನೂ ಬ್ಯಾಂಕ್‌ ಘೋಷಿಸಿದೆ. 2017ರ ನಂತರ ಇದೇ ಮೊದಲ ಬಾರಿಗೆ ಷೇರುದಾರರಿಗೆ ಎಸ್‌ಬಿಐ ಡಿವಿಡೆಂಡ್‌ ಘೋಷಿಸಿದೆ. 2017ರಲ್ಲಿ ಪ್ರತಿ ಷೇರಿಗೆ 2.6 ರೂ. ಡಿವಿಡೆಂಡ್‌ ನೀಡಲಾಗಿತ್ತು. ಬಹುತೇಕ ಬ್ಯಾಂಕ್‌ಗಳು ಜನವರಿ - ಮಾರ್ಚ್ ಅವಧಿಯಲ್ಲಿ ಉತ್ತಮ ಫಲಿತಾಂಶ ಸಾಧಿಸಿವೆ. ಕಳೆದ ವರ್ಷ ಇದೇ ಅವಧಿಯಲ್ಲಿ ಕಡಿಮೆ ವ್ಯವಹಾರ ದಾಖ-ಲಿಸಿರುವುದೂ ಇದಕ್ಕೆ ಕಾರಣಗಳಲ್ಲೊಂದು.