ಬ್ಯಾಂಕಿಂಗ್‌ ಷೇರುಗಳ ಅಬ್ಬರ, 976 ಅಂಕ ಮೇಲೇರಿದ ಸೆನ್ಸೆಕ್ಸ್

ಬ್ಯಾಂಕಿಂಗ್‌ ಮತ್ತು ಹಣಕಾಸು ಸಂಸ್ಥೆಗಳ ಷೇರುಗಳು ಭಾರಿ ಗಳಿಕೆ ದಾಖಲಿಸಿದ ಹಿನ್ನೆಲೆಯಲ್ಲಿ ಸೆನ್ಸೆಕ್ಸ್‌ ಹಾಗೂ ನಿಫ್ಟಿ ಶುಕ್ರವಾರ ಕ್ರಮವಾಗಿ ಶೇ. 1.97 ಹಾಗೂ ಶೇ. 1.81ರಷ್ಟು ಗಳಿಕೆ ದಾಖಲಿಸಿದವು.

ಬ್ಯಾಂಕಿಂಗ್‌ ಷೇರುಗಳ ಅಬ್ಬರ, 976 ಅಂಕ ಮೇಲೇರಿದ ಸೆನ್ಸೆಕ್ಸ್
Linkup
ಹೊಸದಿಲ್ಲಿ: ಬ್ಯಾಂಕಿಂಗ್‌ ಮತ್ತು ಹಣಕಾಸು ಸಂಸ್ಥೆಗಳ ಷೇರುಗಳು ಭಾರಿ ಗಳಿಕೆ ದಾಖಲಿಸಿದ ಹಿನ್ನೆಲೆಯಲ್ಲಿ ಬಾಂಬೆ ಷೇರು ವಿನಿಮಯ ಮಾರುಕಟ್ಟೆ () ಸೂಚ್ಯಂಕ ಶುಕ್ರವಾರ ಬರೋಬ್ಬರಿ 976 ಅಂಕ ಏರಿಕೆ ಕಂಡಿದ್ದು 50,540 ಅಂಕಗಳಿಗೆ ದಿನದ ವಹಿವಾಟು ಕೊನೆಗೊಳಿಸಿತು. ಇದೇ ವೇಳೆ ಸೂಚ್ಯಂಕ 269 ಅಂಕ ಅಥವಾ ಶೇ. 1.81ರಷ್ಟು ಏರಿಕೆ ಕಂಡಿದ್ದು, ವಹಿವಾಟು ಕೊನೆಗೊಂಡಾಗ 15,175 ಅಂಕಗಳಿಗೆ ತಲುಪಿತ್ತು. ಬಿಎಸ್‌ಇನಲ್ಲಿ ಸ್ಟೇಟ್‌ ಬ್ಯಾಂಕ್‌ ಇಂಡಿಯಾ, ಎಚ್‌ಡಿಎಫ್‌ಸಿ ಬ್ಯಾಂಕ್‌, ಐಸಿಐಸಿಐ ಬ್ಯಾಂಕ್‌, ಆಕ್ಸಿಸ್‌ ಬ್ಯಾಂಕ್‌, ಇಂಡಸ್‌ಇಂಡ್‌ ಬ್ಯಾಂಕ್‌ ಷೇರುಗಳು ಗರಿಷ್ಠ ಶೇ. 4.98ರವರೆಗೆ ಗಳಿಕೆ ದಾಖಲಿಸಿದವು. ನಿಫ್ಟಿಯಲ್ಲಿಯೂ ಬ್ಯಾಂಕಿಂಗ್‌ ಷೇರುಗಳು ಶೇ. 3.82ರಷ್ಟು ಮೌಲ್ಯ ವೃದ್ಧಿಸಿಕೊಂಡವು. ನಾಲ್ಕನೇ ತ್ರೈಮಾಸಿಕದಲ್ಲಿ ಎಸ್‌ಬಿಐ ಲಾಭ ಗಳಿಕೆ ಶೇ.80ರಷ್ಟು ಹೆಚ್ಚಾಗಿದ್ದರಿಂದ ಸರಕಾರಿ ಸ್ವಾಮ್ಯದ ಬ್ಯಾಂಕ್‌ನ ಷೇರುಗಳು ಶೇ. 5ರಷ್ಟು ಮೇಲೇರಿದವು. ಇದರ ಜತೆಗೆ ಹೊಸ ಕೊರೊನಾ ಪ್ರಕರಣಗಳ ಸಂಖ್ಯೆ ಸತತ 5ನೇ ದಿನ 3 ಲಕ್ಷಕ್ಕಿಂತ ಕಡಿಮೆ ಇದ್ದಿದ್ದರಿಂದ, ಒಟ್ಟಾರೆ ಹೂಡಿಕೆದಾರರ ಮನಸ್ಥಿತಿಯೂ ಧನಾತ್ಮಕವಾಗಿತ್ತು.