ಬೈಜೂಸ್‌ ತೆಕ್ಕೆಗೆ ಗ್ರೇಟ್‌ ಲರ್ನಿಂಗ್‌, 4,400 ಕೋಟಿ ರೂ.ಗೆ ಖರೀದಿ

ಬೆಂಗಳೂರು ಮೂಲದ ಬೈಜೂಸ್‌, ಸಿಂಗಾಪುರ ಮೂಲದ ಗ್ರೇಟ್‌ ಲರ್ನಿಂಗ್‌ ಸಂಸ್ಥೆಯನ್ನು ಸುಮಾರು 4,400 ಕೋಟಿ ರೂ.ಗೆ ಖರೀದಿಸಿದೆ. ಇದು ಇತ್ತೀಚೆಗೆ ಬೈಜೂಸ್‌ ಖರೀದಿಸುತ್ತಿರುವ 4ನೇ ಪ್ರಮುಖ ಕಂಪನಿಯಾಗಿದೆ.

ಬೈಜೂಸ್‌ ತೆಕ್ಕೆಗೆ ಗ್ರೇಟ್‌ ಲರ್ನಿಂಗ್‌, 4,400 ಕೋಟಿ ರೂ.ಗೆ ಖರೀದಿ
Linkup
ಬೆಂಗಳೂರು: ಆನ್‌ಲೈನ್‌ ವಲಯದ ದಿಗ್ಗಜ, ಬೆಂಗಳೂರು ಮೂಲದ ಬೈಜೂಸ್‌, ಸಿಂಗಾಪುರ ಮೂಲದ ಗ್ರೇಟ್‌ ಲರ್ನಿಂಗ್‌ ಸಂಸ್ಥೆಯನ್ನು 600 ದಶಲಕ್ಷ ಡಾಲರ್‌ (ಸುಮಾರು 4,400 ಕೋಟಿ ರೂ.)ಗಳ ಡೀಲ್‌ನಲ್ಲಿ ಖರೀದಿಸಿದೆ. ಉನ್ನತ ಶಿಕ್ಷಣದಲ್ಲಿ ವೃತ್ತಿಪರ ಸಂಸ್ಥೆಯಾಗಿರುವ ಗ್ರೇಟ್‌ ಲರ್ನಿಂಗ್‌, ವೃತ್ತಿಪರ ಕೋರ್ಸ್‌ಗಳ ವಲಯದಲ್ಲಿ ಪರಿಣತಿ ಹೊಂದಿದೆ. ಬೈಜೂಸ್‌ ಗ್ರೂಪ್‌ನಲ್ಲಿ ಸ್ವತಂತ್ರ ಕಂಪನಿಯಾಗಿ ಗ್ರೇಟ್‌ ಲರ್ನಿಂಗ್‌ ಮುಂದುವರಿಯಲಿದೆ. ಅತ್ಯುನ್ನತ ದರ್ಜೆಯ ಶಿಕ್ಷಣವನ್ನು ಸಂಸ್ಥೆ ನೀಡುತ್ತದೆ. ಬೈಜೂಸ್‌ ಜತೆ ಭಾರತ ಮತ್ತು ವಿದೇಶಗಳಲ್ಲಿ ಮತ್ತಷ್ಟು ವಿಸ್ತರಣೆ ಸಾಧ್ಯವಾಗಲಿದೆ ಎಂದು ಗ್ರೇಟ್‌ ಲರ್ನಿಂಗ್‌ ಸ್ಥಾಪಕ ಮತ್ತು ಸಿಇಒ ಮೋಹನ್‌ ಲಖಂರಾಜು ಹೇಳಿದ್ದಾರೆ. 2013ರಲ್ಲಿ ಸ್ಥಾಪನೆಯಾಗಿದ್ದ ಸಂಸ್ಥೆ 170 ದೇಶಗಳ 15 ಲಕ್ಷಕ್ಕೂ ಹೆಚ್ಚು ಬಳಕೆದಾರರನ್ನು ಹೊಂದಿದೆ. ಭವಿಷ್ಯದ ತಂತ್ರಜ್ಞಾನಗಳ ಕಲಿಕೆಗೆ ಗ್ರೇಟ್‌ ಲರ್ನಿಂಗ್‌ ಮತ್ತು ಬೈಜೂಸ್‌ ಜಂಟಿ ಸಹಭಾಗಿತ್ವ ಸಹಕಾರಿಯಾಗಲಿದೆ ಎಂದು ಸಂಸ್ಥೆಯ ಸ್ಥಾಪಕ ಬೈಜೂ ರವೀಂದ್ರನ್‌ ತಿಳಿಸಿದ್ದಾರೆ. ಒಂದೊಂದಾಗಿ ಕಂಪನಿಗಳನ್ನು ಬೈಜೂಸ್‌ ಖರೀದಿಸುತ್ತಲೇ ಇದ್ದು, ಕಳೆದ ಆಗಸ್ಟ್‌ನಲ್ಲಿ ವೈಟ್‌ಹ್ಯಾಟ್‌ ಜೂನಿಯರ್‌ನ್ನು 2,200 ಕೋಟಿ ರೂ.ಗೆ ಖರೀದಿಸಿತ್ತು. ಅಲ್ಲದೆ ಇತ್ತೀಚೆಗೆ ಸುಮಾರು 7,400 ಕೋಟಿ ರೂ.ಗೆ ಆಕಾಶ್‌ ಎಜುಕೇಷನಲ್‌ ಸರ್ವೀಸಸ್‌ನ್ನು ಖರೀದಿಸಿತ್ತು. ಈ ತಿಂಗಳ ಆರಂಭದಲ್ಲಿ ಟಾಪರ್‌ನ್ನು 1,100 ಕೋಟಿ ರೂ.ಗೆ ಹಾಗೂ 3,700 ಕೋಟಿ ರೂ.ಗೆ ಅಮೆರಿಕ ಮೂಲದ ಎಪಿಕ್‌ನ್ನು ಖರೀದಿಸಿದೆ. ಅಲ್ಲದೆ ಬೆಂಗಳೂರು ಮೂಲದ ಹೂಡ್ಯಾಟ್‌ ಸೇರಿದಂತೆ ಹಲವು ಸಣ್ಣಪುಟ್ಟ ಕಂಪನಿಗಳನ್ನೂ ಖರೀದಿಸುತ್ತಲೇ ಇದೆ. ಈ ಎಲ್ಲಾ ಡೀಲ್‌ಗಳ ನಂತರ ಇದೀಗ ಕಂಪನಿಯ ಮಾರುಕಟ್ಟೆ ಮೌಲ್ಯ 1.2 ಲಕ್ಷ ಕೋಟಿ ರೂ.ಗೆ (16.5 ಬಿ. ಡಾಲರ್‌) ಏರಿಕೆಯಾಗಿದ್ದು ಪೇಟಿಎಂನ್ನೂ ಹಿಂದಿಕ್ಕಿದೆ.