$62,991ಕ್ಕೆ ಏರಿದ ಬಿಟ್‌ಕಾಯಿನ್‌ ಮೌಲ್ಯ! ಕಳೆದ 6 ತಿಂಗಳಲ್ಲೇ ಗರಿಷ್ಠ ದರ!

ವಿಶ್ವದಲ್ಲೇ ಹೆಚ್ಚು ಬೇಡಿಕೆ ಹೊಂದಿರುವ ಕ್ರಿಪ್ಟೋಕರೆನ್ಸಿ 'ಬಿಟ್‌ಕಾಯಿನ್‌' ಮೌಲ್ಯ ಏರಿಕೆ ಮುಂದುವರಿದಿದ್ದು, ಕಳೆದ 6 ತಿಂಗಳಲ್ಲೇ ಗರಿಷ್ಠ ಮಟ್ಟಕ್ಕೆ ಹೆಚ್ಚಳವಾಗಿದೆ. ಪ್ರತಿ ಬಿಟ್‌ ಕಾಯಿನ್‌ ಮೌಲ್ಯ ಬರೋಬ್ಬರಿ 62,991 ಡಾಲರ್‌ಗೆ ಏರಿಕೆಯಾಗಿದೆ.

$62,991ಕ್ಕೆ ಏರಿದ ಬಿಟ್‌ಕಾಯಿನ್‌ ಮೌಲ್ಯ! ಕಳೆದ 6 ತಿಂಗಳಲ್ಲೇ ಗರಿಷ್ಠ ದರ!
Linkup
ಹೊಸದಿಲ್ಲಿ: ವಿಶ್ವದಲ್ಲೇ ಹೆಚ್ಚು ಬೇಡಿಕೆ ಹೊಂದಿರುವ 'ಬಿಟ್‌ಕಾಯಿನ್‌' ಮೌಲ್ಯ ಏರಿಕೆ ಮುಂದುವರಿದಿದ್ದು, ಕಳೆದ 6 ತಿಂಗಳಲ್ಲೇ ಗರಿಷ್ಠ ಮಟ್ಟಕ್ಕೆ ಹೆಚ್ಚಳವಾಗಿದೆ. ಅಮೆರಿಕದ ಕ್ರಿಪ್ಟೋ ಎಕ್ಸ್‌ಚೇಂಜ್‌ಗಳಲ್ಲಿ ಮೇಲೆ ಹಾಗೂ ಇತರೆ ಕ್ರಿಪ್ಟೋಕರೆನ್ಸಿಗಳ ಮೇಲೆ ಹೂಡಿಕೆ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ಬಿಟ್‌ಕಾಯಿನ್ ಬೇಡಿಕೆಯೂ ಹೆಚ್ಚಾಗಿದ್ದು, ಅದರ ಮೌಲ್ಯದಲ್ಲೂ ಭಾರೀ ಏರಿಕೆಯಾಗಿದೆ. ಕ್ರಿಪ್ಟೋ ವಲಯದ ನಾಯಕ ಎಂದೇ ಕರೆಸಿಕೊಳ್ಳುವ ಬಿಟ್‌ಕಾಯಿನ್‌ ಮಾರುಕಟ್ಟೆ ಬೆಲೆ ಕಳೆದ 24 ಗಂಟೆಗಳಲ್ಲಿ ಶೇ.1.5ರಷ್ಟು ಹೆಚ್ಚಾಗಿದೆ. ಅಲ್ಲದೆ, ಪ್ರತಿ ಬಿಟ್‌ ಕಾಯಿನ್‌ ಮೌಲ್ಯ ಬರೋಬ್ಬರಿ 62,991 ಡಾಲರ್‌ಗೆ ಏರಿಕೆಯಾಗಿದೆ. ಕಳೆದ ಏಪ್ರಿಲ್‌ನಲ್ಲಿ 64,895 ಡಾಲರ್‌ಗೆ ಏರಿಕೆಯಾಗುವ ಮೂಲಕ ಬಿಟ್‌ಕಾಯಿನ್‌ ಸಾರ್ವಕಾಲಿಕ ದಾಖಲೆ ನಿರ್ಮಿಸಿತ್ತು. ಇದಾದ ಬಳಿಕ ಇದೇ ಮೊದಲ ಬಾರಿಗೆ 62 ಸಾವಿರ ಡಾಲರ್‌ ಗಡಿ ದಾಟಿದೆ. ಬಿಟ್‌ಕಾಯಿನ್ ಎಕ್ಸ್‌ಚೇಂಜ್‌ ಟ್ರೇಡೆಡ್‌ ಫಂಡ್‌ಗಳಲ್ಲಿ (ಇಟಿಎಫ್‌) ಅಕ್ಟೋಬರ್‌ನಲ್ಲಿ ಶೇ.40ರಷ್ಟು ಹೆಚ್ಚಳ ಕಂಡಿದೆ. ಪಿಂಚಣಿ ಹಣ ಸೇರಿದಂತೆ ಇತರೆ ಸಾಂಸ್ಥಿಕ ಹೂಡಿಕೆಗಳು ಕೂಡ ಕ್ರಿಪ್ಟೋ ವಲಯಕ್ಕೆ ಹರಿದು ಬರುತ್ತಿದೆ. ಬಿಟ್‌ಕಾಯಿನ್‌ ಇಟಿಎಫ್‌ ಮುಂದಿನ ಗುರುವಾರ ಷೇರುಮಾರುಕಟ್ಟೆಯಲ್ಲಿ ಲಿಸ್ಟ್‌ ಆಗುವ ನಿರಿಕ್ಷೆ ಇದೆ. ಇದಕ್ಕೆ ಅಮೆರಿಕದ ಸೆಕ್ಯೂರಿಟೀಸ್‌ ಆಂಡ್ ಎಕ್ಸ್‌ಚೇಂಜ್‌ ಕಮಿಷನ್‌ ಯಾವುದೇ ಆಕ್ಷೇಪ ವ್ಯಕ್ತಪಡಿಸಿಲ್ಲ. ಆದರೆ, ಕೆಲ ಮಾರುಕಟ್ಟೆ ವಿಶ್ಲೇಷಕರು ಈ ಕುರಿತು ಎಚ್ಚರಿಕೆ ನೀಡಿದ್ದಾರೆ. ಬಿಟ್‌ಕಾಯಿನ್‌ ಮೇಲೆ ನೇರವಾಗಿ ಹೂಡಿಕೆ ಆಗುತ್ತಿಲ್ಲ ಎಂದು ತಿಳಿಸಿದ್ದಾರೆ. ಆದರೂ, ಬಿಟ್‌ಕಾಯಿನ್‌ ವಹಿವಾಟಿನಲ್ಲಿ ದಾಖಲೆಯ ಹೆಚ್ಚಳ ಕಂಡುಬಂದಿದೆ. ಕಳೆದ ಒಂದು ವರ್ಷದಲ್ಲಿ ವಿಶ್ವಾದ್ಯಂತ ಕ್ರಿಪ್ಟೋಕರೆನ್ಸಿಗಳ ಕಡೆಗೆ ಜನರು ಹೆಚ್ಚು ಆಕರ್ಷಿತರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಕೆನಡಾ ಮತ್ತು ಯುರೋಪ್‌ಗಳಲ್ಲೂ ಕ್ರಿಪ್ಟೋ ಇಟಿಎಫ್‌ಗಳಿಗೆ ಚಾಲನೆ ನೀಡಲಾಗಿದೆ. ವಾನ್‌ಎಕ್‌ ಮತ್ತು ವಾಲ್‌ಕೈರೀ (VanEck and Valkyrie) ಗಳು ಪ್ರಮುಖ ಫಂಡ್‌ ಮ್ಯಾನೇಜರ್‌ಗಳಾಗಿವೆ. ನಾಸ್ಡಾಕ್‌ ಕೂಡ ವಾಲ್‌ಕೈರೀ ಬಿಟ್‌ಕಾಯಿನ್‌ ಇಟಿಎಫ್ ಲಿಸ್ಟಿಂಗ್ ಮಾಡಲು ಕಳೆದ ಶುಕ್ರವಾರ ಅನುಮೋದನೆ ನೀಡದೆ. ಈ ಎಲ್ಲ ಕಾರಣಗಳಿಂದ ಬಿಟ್‌ಕಾಯಿನ್‌ಗೆ ಮತ್ತಷ್ಟು ಹೊಳಪು ಬಂದಿದೆ.