ಸಾಲ ವಸೂಲಾತಿಯಲ್ಲಿ ಬ್ಯಾಂಕ್‌ಗಳ ಮುನ್ನಡೆ! ಇದು ಸಾಧ್ಯವಾಗಿದ್ದು ಹೇಗೆ?
ಸಾಲ ವಸೂಲಾತಿಯಲ್ಲಿ ಬ್ಯಾಂಕ್‌ಗಳ ಮುನ್ನಡೆ! ಇದು ಸಾಧ್ಯವಾಗಿದ್ದು ಹೇಗೆ?
ಕಳೆದ ಕೆಲ ವರ್ಷಗಳಿಂದೀಚೆಗೆ ಕೇಂದ್ರ ಸರಕಾರ ಕೈಗೊಂಡಿರುವ ಸುಧಾರಣೆಯ ಕ್ರಮಗಳಿಂದ ಕೊನೆಗೂ ಬ್ಯಾಂಕ್‌ಗಳು ವಸೂಲಾಗದಿರುವ ಸಾಲಗಳನ್ನು ಮರು ವಸೂಲು ಮಾಡಿಕೊಳ್ಳುವ ನಿಟ್ಟಿನಲ್ಲಿ ಮುನ್ನಡೆ ಸಾಧಿಸಿವೆ.
ಹೊಸದಿಲ್ಲಿ: ಕಳೆದ ಕೆಲ ವರ್ಷಗಳಿಂದೀಚೆಗೆ ಕೇಂದ್ರ ಸರಕಾರ ಕೈಗೊಂಡಿರುವ ಸುಧಾರಣೆಯ ಕ್ರಮಗಳಿಂದ ಕೊನೆಗೂ ಬ್ಯಾಂಕ್‌ಗಳು ವಸೂಲಾಗದಿರುವ ಸಾಲಗಳನ್ನು ಮರು ವಸೂಲು ಮಾಡಿಕೊಳ್ಳುವ ನಿಟ್ಟಿನಲ್ಲಿ ಮುನ್ನಡೆ ಸಾಧಿಸಿವೆ. ಬ್ಯಾಂಕ್‌ಗಳು ಲಕ್ಷಾಂತರ ಕೋಟಿ ರೂ. ಸುಸ್ತಿ ಸಾಲವನ್ನು () ಮರು ವಸೂಲು ಮಾಡಿಕೊಳ್ಳಲು ಯಶಸ್ವಿಯಾಗಿವೆ. ಇದು ಹೇಗೆ ಸಾಧ್ಯವಾಯಿತು? ಇಲ್ಲಿದೆ ವಿವರ.
ಐಬಿಸಿ ಕಾಯಿದೆಯ ಅಸ್ತ್ರ
ಕಳೆದ 2016ರಲ್ಲಿ ಕೇಂದ್ರ ಸರಕಾರ ಜಾರಿಗೊಳಿಸಿದ ಕಂಪನಿಗಳ ದಿವಾಳಿ ಕಾಯಿದೆ (ಇನ್‌ಸಾಲ್ವೆನ್ಸಿ ಆ್ಯಂಡ್ ಬ್ಯಾಂಕ್‌ರಪ್ಟಸಿ ಕೋಡ್) ಮತ್ತು ಇತರ ಆಡಳಿತಾತ್ಮಕ ಸುಧಾರಣೆಗಳಿಂದ ಬ್ಯಾಂಕ್‌ಗಳಿಗೆ ಸುಸ್ತಿ ಸಾಲಗಳ ಮರು ವಸೂಲಾತಿಗೆ ಹಾದಿ ಸುಗಮವಾಗಿದೆ. ಸುಮಾರು 1 ಲಕ್ಷ ಕೋಟಿ ರೂ.ಗಳ ಸುಸ್ತಿ ಸಾಲವನ್ನು ತಾಂತ್ರಿಕವಾಗಿ ರೈಟ್ ಆಫ್ ಎಂದು ವರ್ಗೀಕರಿಸಲಾಗಿದ್ದು, ಅವುಗಳ ಮರು ವಸೂಲಾತಿಯೂ ನಡೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದೊಡ್ಡ ಕಂಪನಿಗಳ ಎನ್‌ಪಿಎಗೆ ಅಂಕುಶ
ದೊಡ್ಡ ಕಂಪನಿಗಳ ವಸೂಲಾಗದ ಸಾಲ (ಎನ್‌ಪಿಎ) ನಿರೀಕ್ಷೆಯಷ್ಟು ಹೆಚ್ಚಳವಾಗದಿರುವುದು ಕಳೆದ ಕೆಲ ವರ್ಷಗಳಲ್ಲಿಉಂಟಾಗಿರುವ ಸಕಾರಾತ್ಮಕ ಬೆಳವಣಿಗೆ. ಹೀಗಾಗಿ ಹೊಸ ಸಾಲ ವಿತರಣೆಗೆ ಬ್ಯಾಂಕ್‌ಗಳಿಗೆ ನಿಧಿಯ ಕೊರತೆ ಕಡಿಮೆಯಾಗುತ್ತಿದೆ. ಸುಸ್ತಿ ಸಾಲಗಳ ನಿರ್ವಹಣೆಗೆ ಪ್ರತ್ಯೇಕವಾಗಿ ಇಡಬೇಕಾದ ಹಣದ ಮೊತ್ತ ಕಡಿಮೆಯಾಗುತ್ತಿದ್ದು, ಲಾಭಾಂಶದ ಸುಧಾರಣೆಗೆ ಕಾರಣವಾಗಿದೆ ಎನ್ನುತ್ತಾರೆ ಅಧಿಕಾರಿಗಳು. ಕಿಂಗ್‌ಫಿಶರ್, ಭೂಷಣ್ ಸ್ಟೀಲ್, ಎಸ್ಸಾರ್ ಸ್ಟೀಲ್ ಮುಂತಾದ ಕಂಪನಿಗಳು ಹೊಂದಿದ್ದ ಸುಸ್ತಿ ಸಾಲ ಮರು ವಸೂಲಾಗಿದೆ.
ಸಾಲ ಮರು ವಸೂಲಾತಿಯ ಹಾದಿ
2018ರ ಮಾರ್ಚ್ರಿಂದೀಚೆಗೆ ವಸೂಲಾಗಿರುವ ಮೊತ್ತ: 3.1 ಲಕ್ಷ ಕೋಟಿ ರೂ.
ರೈಟ್ ಆಫ್ ಖಾತೆಗಳಿಂದ ಮರು ವಸೂಲಾತಿಯಾಗಿರುವ ಹಣ: 99,996 ಕೋಟಿ ರೂ. (ಉದಾಹರಣೆಗೆ ಭೂಷಣ್ ಸ್ಟೀಲ್, ಎಸ್ಸಾರ್ ಸ್ಟೀಲ್)
2018-19ರಲ್ಲಿ ನಿಗದಿಪಡಿಸಿದ್ದ ಗುರಿ: 1.2 ಲಕ್ಷ ಕೋಟಿ ರೂ.
ಎನ್‌ಪಿಎ 8.34 ಲಕ್ಷ ಕೋಟಿ ರೂ.ಗೆ ಇಳಿಕೆ
2021ರ ಮಾರ್ಚ್ ಅಂತ್ಯದ ವೇಳೆಗೆ ಬ್ಯಾಂಕ್‌ಗಳಲ್ಲಿನ ಒಟ್ಟು ವಸೂಲಾಗದ ಸಾಲದ ಮೊತ್ತ 8.34 ಲಕ್ಷ ಕೋಟಿ ರೂ.ಗೆ ತಗ್ಗಿದೆ ಎಂದು ಹಣಕಾಸು ಖಾತೆ ಸಹಾಯಕ ಸಚಿವ ಭಾಗ್ವತ್ ಕೆ ಕರಾಡ್ ಲೋಕಸಭೆಗೆ ಇತ್ತೀಚೆಗೆ ತಿಳಿಸಿದ್ದಾರೆ.
ವಸೂಲಾಗದ ಸುಸ್ತಿ ಸಾಲ2018 ಮಾರ್ಚ್ನಲ್ಲಿ: 10.36 ಲಕ್ಷ ಕೋಟಿ ರೂ.2021 ಮಾರ್ಚ್ನಲ್ಲಿ: 8.34 ಲಕ್ಷ ಕೋಟಿ ರೂ.