ಬೆಂಗಳೂರಿನಲ್ಲಿ ಕೊರೊನಾ ವ್ಯಾಕ್ಸಿನ್ ವೇಗ..! ಸದ್ಯದಲ್ಲೇ ಮುಂಬೈ ನಗರವನ್ನು ಹಿಂದಿಕ್ಕಲಿದೆ ಸಿಲಿಕಾನ್ ಸಿಟಿ..!

ಅಪಾರ್ಟ್‌ಮೆಂಟ್‌ ನಿವಾಸಿಗಳಿಗೆ, ಕಚೇರಿಯ ಸಿಬ್ಬಂದಿಗೆ ಹಾಗೂ ಕೈಗಾರಿಕೆಯಲ್ಲಿ ಕೆಲಸ ಮಾಡುವವರಿಗೆ ಈಗಾಗಲೇ ಬಹುತೇಕರಿಗೆ ಲಸಿಕೆ ನೀಡಲಾಗಿದೆ. ಅಲ್ಲದೆ, ಕಟ್ಟಡ ಕಾರ್ಮಿಕರಿಗೆ ಅವರಿದ್ದ ಸ್ಥಳಗಳಿಗೇ ಹೋಗಿ ಲಸಿಕೆ ನೀಡಲಾಗುತ್ತಿದೆ.

ಬೆಂಗಳೂರಿನಲ್ಲಿ ಕೊರೊನಾ ವ್ಯಾಕ್ಸಿನ್ ವೇಗ..! ಸದ್ಯದಲ್ಲೇ ಮುಂಬೈ ನಗರವನ್ನು ಹಿಂದಿಕ್ಕಲಿದೆ ಸಿಲಿಕಾನ್ ಸಿಟಿ..!
Linkup
: ಜಿಲ್ಲೆಯ ಬಿಬಿಎಂಪಿ ವ್ಯಾಪ್ತಿಯಲ್ಲಿ 45 ವರ್ಷ ಮೇಲ್ಪಟ್ಟ ಶೇ. 68 ಹಾಗೂ 18-44 ವರ್ಷ ವಯೋಮಾನದ ಶೇ.39ರಷ್ಟು ಜನರಿಗೆ ನೀಡಲಾಗಿದೆ ಎಂದು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ತಿಳಿಸಿದೆ. ಬಿಬಿಎಂಪಿ ಇದುವರೆಗೆ 35 ಲಕ್ಷ ಜನರಿಗೆ 48 ಲಕ್ಷ ಕೋವಿಡ್‌ ಲಸಿಕೆ ನೀಡಿದೆ. ನಗರ ವ್ಯಾಪ್ತಿಯಲ್ಲಿ 18 ವರ್ಷ ಮೇಲ್ಪಟ್ಟ 90,60,327 ಜನರಿದ್ದು, ಇದರಲ್ಲಿ 34,70,962 ಜನರಿಗೆ ಮೊದಲ ಲಸಿಕೆ ನೀಡಲಾಗಿದೆ. ನಗರದಲ್ಲಿ 45 ವರ್ಷ ಮೇಲ್ಪಟ್ಟ 25 ಲಕ್ಷ ಜನರಿದ್ದು, ಇದರಲ್ಲಿ 18 ಲಕ್ಷ ಜನರು ಮೊದಲ ಲಸಿಕೆ ಹಾಗೂ 5 ಲಕ್ಷ ಜನರು ಎರಡೂ ಡೋಸ್‌ ಪಡೆದಿದ್ದಾರೆ. ಈ ಮೂಲಕ ಕೆಲವೇ ದಿನಗಳಲ್ಲಿ ಬಿಬಿಎಂಪಿ ಲಸಿಕೆ ನೀಡಿಕೆಯಲ್ಲಿ ಮುಂಬಯಿ ಮಹಾನಗರವನ್ನು ಹಿಂದಿಕ್ಕಲಿದೆ ಎನ್ನುತ್ತಾರೆ ಬಿಬಿಎಂಪಿ ಅಧಿಕಾರಿಯೊಬ್ಬರು. 'ಆರಂಭದಲ್ಲಿ ಲಸಿಕೆಯ ಕೊರತೆ ಹೊರತಾಗಿಯೂ ಹೆಚ್ಚಿನ ಜನರಿಗೆ ಲಸಿಕೆ ನೀಡುವಲ್ಲಿ ಯಶಸ್ವಿಯಾಗಿದ್ದೇವೆ. ಮೂರನೇ ಅಲೆ ನಿಯಂತ್ರಿಸುವ ನಿಟ್ಟಿನಲ್ಲಿ ಆದಷ್ಟು ಶೀಘ್ರದಲ್ಲಿ ಶೇ. 60 ರಿಂದ 70 ಜನರಿಗೆ ಲಸಿಕೆ ನೀಡುವ ಗುರಿ ಇಟ್ಟುಕೊಳ್ಳಲಾಗಿದೆ' ಎನ್ನುತ್ತಾರೆ ಬಿಬಿಎಂಪಿ ಆಯುಕ್ತ ಗೌರವ್‌ ಗುಪ್ತ. 30ಕ್ಕೂ ಹೆಚ್ಚು ಆದ್ಯತಾ ಗುಂಪುಗಳನ್ನು ಮಾಡಿ ಲಸಿಕೆ ನೀಡಲಾಗುತ್ತಿದೆ. ಅಪಾರ್ಟ್‌ಮೆಂಟ್‌ ನಿವಾಸಿಗಳಿಗೆ, ಕಚೇರಿಯ ಸಿಬ್ಬಂದಿಗೆ ಹಾಗೂ ಕೈಗಾರಿಕೆಯಲ್ಲಿ ಕೆಲಸ ಮಾಡುವವರಿಗೆ ಈಗಾಗಲೇ ಬಹುತೇಕರಿಗೆ ಲಸಿಕೆ ನೀಡಲಾಗಿದೆ. ಅಲ್ಲದೆ, ಕಟ್ಟಡ ಕಾರ್ಮಿಕರಿಗೆ ಅವರಿದ್ದ ಸ್ಥಳಗಳಿಗೇ ಹೋಗಿ ಲಸಿಕೆ ನೀಡಲಾಗುತ್ತಿದೆ. ನಗರದಲ್ಲಿ ಅಪಾರ್ಟ್‌ಮೆಂಟ್‌ಗಳಲ್ಲಿ ಸುಮಾರು 11 ಲಕ್ಷ ಜನರು ವಾಸಿಸುತ್ತಿದ್ದಾರೆ. ಬಹುತೇಕ ಎಲ್ಲರಿಗೂ ಲಸಿಕೆ ನೀಡಲಾಗಿದೆ. ಈ ಎಲ್ಲಾ ಅಂಶಗಳು ಕೋವಿಡ್‌ ಲಸಿಕಾ ಅಭಿಯಾನದ ವೇಗವನ್ನು ಹೆಚ್ಚಿಸಿವೆ ಎನ್ನುತ್ತಾರೆ ಬಿಬಿಎಂಪಿ ಅಧಿಕಾರಿಗಳು.