ಕಾನೂನು ವಿದ್ಯಾರ್ಥಿ, ಐಟಿ ಉದ್ಯೋಗಿ.. ಡ್ರಗ್ಸ್‌ ದಂಧೆ, ಡಾರ್ಕ್‌ ವೆಬ್ ಸುಳಿಯಲ್ಲಿ ಬೆಂಗಳೂರು ಬಾಯ್ಸ್..!

ಡಾರ್ಕ್ ವೆಬ್‌ ಸೇರಿದಂತೆ ಇನ್ನಿತರ ವೆಬ್‌​ಸೈಟ್‌​​ಗಳ ಮೂಲಕ ಡ್ರಗ್ಸ್ ಸಾಗಿಸುವ ದಂಧೆಕೋರರನ್ನು ಸಂಪರ್ಕಿಸಿ ವ್ಯವಹಾರ ಕುದುರಿಸುತ್ತಿದ್ದ ಯುವಕರು ವಿದೇಶದಿಂದ ಎಂಡಿಎಂಎ, ಎಕ್ಸ್‌ಟಸಿ ಮಾತ್ರೆಗಳನ್ನು ಕಡಿಮೆ ಬೆಲೆಗೆ ತರಿಸಿಕೊಳ್ಳುತ್ತಿದ್ದರು.

ಕಾನೂನು ವಿದ್ಯಾರ್ಥಿ, ಐಟಿ ಉದ್ಯೋಗಿ.. ಡ್ರಗ್ಸ್‌ ದಂಧೆ, ಡಾರ್ಕ್‌ ವೆಬ್ ಸುಳಿಯಲ್ಲಿ ಬೆಂಗಳೂರು ಬಾಯ್ಸ್..!
Linkup
: ಡಾರ್ಕ್ ವೆಬ್‌ನಲ್ಲಿ ಖರೀದಿಸಿ, ಗ್ರಾಹಕರಿಗೆ ಕೊರಿಯರ್‌ ಮೂಲಕ ಸರಬರಾಜು ಮಾಡುತ್ತಿದ್ದ ಸೇರಿ ಐವರನ್ನು ಸಿಸಿಬಿ ಮಾದಕ ದ್ರವ್ಯ ನಿಗ್ರಹ ದಳದ ಅಧಿಕಾರಿಗಳು ಬಂಧಿಸಿದ್ದಾರೆ. ಬ್ಯಾಡರಹಳ್ಳಿ ಪೊಲೀಸ್‌ ಠಾಣೆ ವ್ಯಾಪ್ತಿಯ ಪ್ರಸಿದ್ಧಿ ಪಿಜಿಯಲ್ಲಿ ವಾಸ ಮಾಡುತ್ತಿದ್ದ ಐವರು ಆರೋಪಿಗಳು ಡ್ರಗ್ಸ್ ದಂಧೆಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಎಸಿಬಿ ಗೌತಮ್‌ ನೇತೃತ್ವದ ತಂಡ ದಾಳಿ ನಡೆಸಿ ಬಂಧಿಸಿದೆ. ಬಂಧಿತರಿಂದ 30 ಲಕ್ಷ ರೂ. ಮೌಲ್ಯದ 300 ಎಂಡಿಎಂಎ ಮಾತ್ರೆಗಳು, ಎಕ್ಸ್ಟಸಿ, 150 ಎಲ್‌ಎಸ್‌ಡಿ ಸ್ಟಿಪ್‌ಗಳು, 250 ಹ್ಯಾಶಿಶ್‌ ಆಯಿಲ್‌, 1 ಕೆ.ಜಿ ಗಾಂಜಾ, ಕೃತ್ಯಕ್ಕೆ ಬಳಸುತ್ತಿದ್ದ 5 ಪೋನ್‌ ಹಾಗೂ ಒಂದು ಬೈಕ್‌ ಜಪ್ತಿ ಮಾಡಲಾಗಿದೆ. ದಂಧೆಯಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿರುವ ಮೂವರು ಆರೋಪಿಗಳ ಪತ್ತೆಗೆ ಶೋಧ ನಡೆಸಲಾಗುತ್ತಿದೆ. ಈ ಮೂವರು ಆರೋಪಿಗಳು ಹಿಮಾಚಲ ಪ್ರದೇಶಕ್ಕೆ ಹೋಗಿ ಡ್ರಗ್ಸ್ ಖರೀದಿಸುತ್ತಿದ್ದರು ಎನ್ನಲಾಗಿದೆ. ಡಾರ್ಕ್ ವೆಬ್‌ ಸೇರಿದಂತೆ ಇನ್ನಿತರ ವೆಬ್‌ಸೈಟ್‌ಗಳ ಮೂಲಕ ಡ್ರಗ್ಸ್ ಸಾಗಿಸುವ ದಂಧೆಕೋರರನ್ನು ಸಂಪರ್ಕಿಸಿ ವ್ಯವಹಾರ ಕುದುರಿಸಿ, ವಿದೇಶದಿಂದ ಎಂಡಿಎಂಎ, ಎಕ್ಸ್‌ಟಸಿ ಮಾತ್ರೆಗಳನ್ನು ಕಡಿಮೆ ಬೆಲೆಗೆ ತರಿಸಿಕೊಳ್ಳುತ್ತಿದ್ದರು. ಬಿಟ್‌ ಕಾಯಿನ್‌ ಮೂಲಕ ಹಣಕಾಸು ವರ್ಗಾವಣೆ ನಡೆಸುತ್ತಿದ್ದರು. ಬಳಿಕ ಅಮೆಜಾನ್‌ ಟೇಪ್‌ ಹಾಕಿ ಗ್ರಾಹಕರಿಗೆ ಕೊರಿಯರ್‌ ಮೂಲಕ ಸರಬರಾಜು ಮಾಡುತ್ತಿದ್ದರು ಎಂದು ಸಿಸಿಬಿ ಜಂಟಿ ಆಯುಕ್ತ ಸಂದೀಪ್‌ ಪಾಟೀಲ್‌ ತಿಳಿಸಿದ್ದಾರೆ. ಬಂಧಿತ ಆರೋಪಿಗಳ ಪೈಕಿ ಇಬ್ಬರು ಬೆಂಗಳೂರಿನಲ್ಲಿ ಐಟಿ ಉದ್ಯೋಗಿಗಳಾಗಿದ್ದು, ಇವರು ಹೆಚ್ಚು ಗಿರಾಕಿಗಳನ್ನು ಹೊಂದುವ ಉದ್ದೇಶದಿಂದ ತಮ್ಮ ಜತೆ ಕೆಲಸ ಮಾಡುವ ಸಹೋದ್ಯೋಗಿಗಳಿಗೆ, 'ಮಾದಕ ವಸ್ತುಗಳನ್ನು ಸೇವನೆ ಮಾಡಿದರೆ ಹೆಚ್ಚು ಕೆಲಸ ಮಾಡಬಹುದು' ಎಂದು ಅವರಿಗೆ ಮನವೊಲಿಸಿ ಅವರನ್ನು ಮಾದಕ ವಸ್ತುಗಳ ದಾಸರನ್ನಾಗಿ ಮಾಡುವ ಉದ್ದೇಶ ಹೊಂದಿರುವುದು ವಿಚಾರಣೆಯಲ್ಲಿ ತಿಳಿದುಬಂದಿದೆ. ಮತ್ತೊಬ್ಬ ಆರೋಪಿ ಬೆಂಗಳೂರಿನ ಪ್ರತಿಷ್ಟಿತ ಕಾಲೇಜಿನಲ್ಲಿ ಎಲ್‌‍ಎಲ್‌‍ಬಿ ಓದುತ್ತಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.