![](https://vijaykarnataka.com/photo/88419505/photo-88419505.jpg)
ಬೆಂಗಳೂರು: ಕೋವಿಡ್ ರೂಪಾಂತರಿ ಸೋಂಕು ಸಮುದಾಯದಲ್ಲಿ ಹರಡಿದೆಯಾ ಎನ್ನುವುದನ್ನು ತಿಳಿದುಕೊಳ್ಳಲು ಜೀನೋಮ್ ಸೀಕ್ವೆನ್ಸಿಂಗ್ ಕಳುಹಿಸುವ ಮಾದರಿ ಹೆಚ್ಚಳಕ್ಕೆ ಕೋವಿಡ್ ತಾಂತ್ರಿಕ ಲಸಹಾ ಸಮಿತಿ ತಜ್ಞರು ಸಲಹೆ ನೀಡಿದೆ.
ರಾಜ್ಯದಲ್ಲಿಈವರೆಗೆ 19 ಜನರಲ್ಲಿ
ಪತ್ತೆಯಾಗಿದೆ. ಆದರೆ, 19 ಕೇಸ್‌ಗಳಲ್ಲಿ 9 ಮಂದಿಗೆ ವಿದೇಶ ಪ್ರಯಾಣ ಹಿನ್ನೆಲೆಯೇ ಇಲ್ಲ. ಹೀಗಾಗಿ, ಓಮಿಕ್ರಾನ್ ಸಮುದಾಯಕ್ಕೆ ಹರಡಿರುವ ಅನುಮಾನವಿದೆ. ಈ ಹಿನ್ನೆಲೆಯಲ್ಲಿ ಜೀನೋಮ್ ಸೀಕ್ವೆನ್ಸಿಂಗ್ ಸ್ಯಾಂಪಲ್ ಹೆಚ್ಚಳಕ್ಕೆ ತಜ್ಞರು ಸಲಹೆ ನೀಡಿದ್ದಾರೆ.
ಸೋಂಕು ದಿಢೀರ್ ಹೆಚ್ಚಿರುವ ಕೆಲ ಪ್ರದೇಶಗಳು, ಜಿಲ್ಲಾಆಸ್ಪತ್ರೆಗಳು ಹಾಗೂ ಕ್ಲಸ್ಟರ್‌ಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕೋವಿಡ್ ಪಾಸಿಟಿವ್ ಮಾದರಿಯನ್ನು ಜೀನೋಮ್ ಸೀಕ್ವೆನ್ಸಿಂಗ್ಸ್ ಗೆ ಕಳುಹಿಸುವ ಸಲಹೆ ನೀಡಲಾಗಿದೆ. ಇದರ ಜೊತೆಗೆ ರಾಜ್ಯದಲ್ಲಿ ಐಎನ್‌ಎಸ್‌ಎಸಿಒಜಿ ಮತ್ತಷ್ಟು ಸೀಕ್ವೆನ್ಸಿಂಗ್ ಲ್ಯಾಬ್‌ಗಳಿಗೆ ಅನುಮತಿ ನೀಡಿದೆ.
ಓಮಿಕ್ರಾನ್ ಹರಡದಂತೆ ಎಚ್ಚರ ವಹಿಸಲು ಮೋಟಮ್ಮ ಆಗ್ರಹ
ಮೂಡಿಗೆರೆ: ಕೋವಿಡ್ ಮಹಾಮಾರಿಯಿಂದ ಈಗಾ ಗಲೆ ಜನರು 2 ವರ್ಷ ಸಂಕಷ್ಟ ಎದುರಿಸಿ ನಿಟ್ಟುಸಿರು ಬಿಡುತ್ತಿದ್ದಾರೆ. ಈಗ ಕೋವಿಡ್ ರೂಪಾಂತರ ಓಮಿ ಕ್ರಾನ್ ವೈರಸ್ ಹರಡಲಾರಂಭಿಸಿದೆ. ಈ ಬಗ್ಗೆ ಸರಕಾರ ಹಾಗೂ ಜಿಲ್ಲಾಡಳಿತ ನಿರ್ಲಕ್ಷತ್ರ್ಯ ವಹಿಸಬಾರದೆಂದು ಮಾಜಿ ಸಚಿವೆ ಮೋಟಮ್ಮ ಹೇಳಿದರು.
ಅವರು ಮಂಗಳವಾರ ಪಟ್ಟಣದ ಕಾಂಗ್ರೆಸ್ ಭವನದಲ್ಲಿನಡೆದ ಸಭೆ ಯಲ್ಲಿಮಾತನಾಡಿ, ಸರಕಾರ ಓಮಿ ಕ್ರಾನ್ ತಡೆಗಟ್ಟಲು ಎಲ್ಲಧಾರ್ಮಿಕ ಕಾರ್ಯ ಕ್ರಮ, ಸಭೆ ಸಮಾರಂಭ, ಮದುವೆಗಳಿಗೆ ಕನಿಷ್ಠ 500 ಮಂದಿ ಮಾತ್ರ ಪ್ರವೇಶಕ್ಕೆ ಅವಕಾಶ ಕಲ್ಪಿಸಲು ತೀರ್ಮಾನ ಕೈಗೊಂಡಿದೆ. ಆದರೆ, ಈ ನಿಯಮವನ್ನು ಜಿಲ್ಲಾಡಳಿತ ಪಾಲನೆ ಮಾಡುತ್ತಿಲ್ಲ. ದತ್ತ ಜಯಂತಿ ಯಂತಹ ಧಾರ್ಮಿಕ ಕಾರ್ಯಕ್ರಮ ನಡೆಸುವುದು ತಪ್ಪಲ್ಲ. ಅದಕ್ಕೆ ನಮ್ಮ ವಿರೋಧವೂ ಇಲ್ಲ. ಆದರೆ, ಹೊಸ ರೂಪಾಂತರ ವೈರಸ್ ಹರಡುತ್ತಿರುವ ಸಂದರ್ಭ ದತ್ತ ಜಯಂತಿಯನ್ನು ಸರಳ ವಾಗಿ ಆಚರಿಸಲು ಜಿಲ್ಲಾಡಳಿತ ಸ್ಥಳೀಯರಿಗೆ ಮಾತ್ರ ಅವಕಾಶ ಮಾಡಿಕೊಡಬೇಕಿತ್ತು ಎಂದರು.
ಕಾಂಗ್ರೆಸ್ ಹಿರಿಯ ಮುಖಂಡ ಬಿ.ಎಸ್.ಜಯರಾಂಗೌಡ ಮಾತನಾಡಿ, 3 ವರ್ಷದ ಹಿಂದೆ ತಾಲೂಕಿನಲ್ಲಿಉಂಟಾದ ಅತಿವೃಷ್ಟಿಯಿಂದ ಮನೆ ಕಳೆದುಕೊಂಡ ಅನೇಕ ನಿರಾಶ್ರಿತರಿಗೆ ಇಂದಿಗೂ ಪರಿಹಾರ ಸಿಕ್ಕಿಲ್ಲ. ಈ ಬಾರಿ ಮಳೆಗಾಲ ಮುಗಿದರೂ ಮಳೆ ನಿಂತಿಲ್ಲ. 1 ಎಕರೆಗೆ ಕನಿಷ್ಠ 50 ಸಾವಿರ ರೂ. ಪರಿಹಾರ ನೀಡಲು ಸರಕಾರ ಮುಂದಾಗಬೇಕೆಂದು ಆಗ್ರಹಿಸಿದರು.