ಬೆಂಗಳೂರಿನ ಕ್ಯಾಬ್‌ ಚಾಲಕನ ಜೊತೆ ಉಗಾಂಡ ಪ್ರಜೆಗಳ ಕಿರಿಕ್‌ : ಅಂಗಾಂಗ ತೋರಿಸಿ ವಿಕೃತಿ!

ಹೆಚ್ಚುವರಿ ಸೀಟಿನ ವಿಚಾರವಾಗಿ ಗಲಾಟೆ ನಡೆದು ಕ್ಯಾಬ್‌ ಚಾಲಕನ ಮೇಲೆ ಉಗಾಂಡ ಪ್ರಜೆಗಳು ಹಲ್ಲೆ ಯತ್ನ ನಡೆಸಿದ್ದಲ್ಲದೆ, ಅಂಗಾಂಗಗಳನ್ನು ತೋರಿಸಿ ವಿಕೃತಿ ಮೆರೆದಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಈ ಸಂಬಂಧ ಸುಬ್ರಮಣ್ಯನಗರ ಠಾಣೆಯಲ್ಲಿ ಕ್ಯಾಬ್‌ ಚಾಲಕ ದೂರು ನೀಡಿದ್ದಾನೆ. ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಬೆಂಗಳೂರಿನ ಕ್ಯಾಬ್‌ ಚಾಲಕನ ಜೊತೆ ಉಗಾಂಡ ಪ್ರಜೆಗಳ ಕಿರಿಕ್‌ : ಅಂಗಾಂಗ ತೋರಿಸಿ ವಿಕೃತಿ!
Linkup
ಬೆಂಗಳೂರು: ಕ್ಯಾಬ್‌ ಬುಕ್ಕಿಂಗ್‌ ಹಾಗೂ ಹೆಚ್ಚುವರಿ ಸೀಟಿನ ವಿಚಾರವಾಗಿ ಗಲಾಟೆ ನಡೆದು ಕ್ಯಾಬ್‌ ಚಾಲಕನ ಮೇಲೆ ಹಲ್ಲೆ ಯತ್ನ ನಡೆಸಿದ್ದಲ್ಲದೆ, ಅಂಗಾಂಗಗಳನ್ನು ತೋರಿಸಿ ವಿಕೃತಿ ಮೆರೆದಿರುವ ಘಟನೆ ರಾಜಾಜಿನಗರದ ಹೋಟೆಲ್‌ ಆವರಣದಲ್ಲಿ ನಡೆದಿದೆ. ಶನಿವಾರ ರಾತ್ರಿ ನಡೆದಿರುವ ಗಲಾಟೆ ಸಂಬಂಧ ಸುಬ್ರಮಣ್ಯನಗರ ಠಾಣೆಯಲ್ಲಿ ಉಗಾಂಡ ಪ್ರಜೆಗಳನ್ನು ಕರೆಸಿ ಮುಚ್ಚಳಿಕೆ ಬರೆಸಿ ಕಳುಹಿಸಿದ್ದಾರೆ ಎನ್ನಲಾಗಿದೆ. ಘಟನೆಯ ಹಿನ್ನೆಲೆ:ರಾಜಾಜಿನಗರದ ಖಾಸಗಿ ಹೋಟೆಲ್‌ ಆವರಣದಲ್ಲಿ ಶನಿವಾರ (ಸೆ.18) ರಾತ್ರಿ 10 ಗಂಟೆ ಸುಮಾರಿಗೆ ಘಟನೆ ನಡೆದಿದೆ. ಕಾಲೇಜು ಕಾರ್ಯಕ್ರಮ ನಿಮಿತ್ತ ಉಗಾಂಡ ಪ್ರಜೆಗಳು ಹೋಟೆಲ್‌ಗೆ ಬಂದಿದ್ದರು. ಕಾರ್ಯಕ್ರಮ ಮುಗಿಸಿ ಹೊರಡುವಾಗ ಓಲಾ ಕ್ಯಾಬ್‌ ಬುಕ್‌ ಮಾಡಿದ್ದಾರೆ. ಸ್ಥಳಕ್ಕೆ ಬಂದ ಒಟಿಪಿ ಪಡೆದುಕೊಂಡು ನಾಲ್ವರನ್ನು ಕೂರಿಸಿಕೊಂಡಿದ್ದಾನೆ. ಹೊರಡುವಷ್ಟರಲ್ಲಿ ಮತ್ತೊಬ್ಬ ಬಂದು ಕ್ಯಾಬ್‌ ಹತ್ತಲು ಮುಂದಾದಾಗ ಚಾಲಕ ನಿರಾಕರಿಸಿದ್ದಾನೆ. ಐವರನ್ನು ಕರೆದುಕೊಂಡು ಹೋಗಲು ಆಗೋದಿಲ್ಲಎಂದಿದ್ದಾನೆ. ನಾಲ್ಕು ಜನರಾದರೆ ಮಾತ್ರ ಬನ್ನಿ ಎಂದಿದ್ದಾನೆ. ಬಳಿಕ ಎಲ್ಲರೂ ಕ್ಯಾಬ್‌ನಿಂದ ಕೆಳಗೆ ಇಳಿದಿದ್ದಾರೆ. ಈ ವೇಳೆ 100 ರೂಪಾಯಿ ಟ್ರಿಪ್‌ ಕ್ಯಾನ್ಸಲೇಷನ್‌ ಚಾರ್ಜ್‌ ಕೇಳಿದ್ದಾನೆ. ಇಷ್ಟಕ್ಕೆ ಹೋಟೆಲ್‌ ಆವರಣದಲ್ಲಿ ಗಲಾಟೆ ಶುರುವಾಗಿದ್ದು, ಚಾಲಕನ ಮೇಲೆ ಹಲ್ಲೆಗೆ ಯತ್ನಿಸಿದ್ದಲ್ಲದೆ ತಮ್ಮ ಖಾಸಗಿ ಅಂಗಾಂಗಗಳನ್ನು ತೋರಿಸಿ ವಿಕೃತಿ ಮೆರೆದಿದ್ದರು. ಸ್ಥಳದಲ್ಲಿದ್ದ ಇತರೆ ಚಾಲಕರು ಮಧ್ಯಪ್ರವೇಶಿಸಿದಾಗ ಪರಸ್ಪರ ಎಳೆದಾಟ, ನೂಕಾಟ ನಡೆಯಿತು ಎಂದು ಪೊಲೀಸ್‌ ಮೂಲಗಳು ತಿಳಿಸಿವೆ. ಸ್ಥಳಕ್ಕೆ ಹೋದ ಪೊಲೀಸರು, ಉಗಾಂಡ ಪ್ರಜೆಯೊಬ್ಬನನ್ನು ವಶಕ್ಕೆ ಪಡೆದು ಠಾಣೆಗೆ ಕರೆತಂದಿದ್ದರು. ಬಳಿಕ ಉಳಿದವರನ್ನೂ ಠಾಣೆಗೆ ಕರೆಸಿ ಮುಚ್ಚಳಿಕೆ ಬರೆಸಿಕೊಂಡು ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ ಎಂದು ಪೊಲೀಸರು ತಿಳಿಸಿದರು. ಇನ್ನು ಈ ರೀತಿ ವರ್ತಿಸದಂತೆ ಎಚ್ಚರಿಕೆ ನೀಡಿದ್ದಾರೆ. ಬೆಂಗಳೂರಿನಲ್ಲಿ ವಿದೇಶಿಯರಿಂದ ಹಲವಾರ ಸಮಸ್ಯೆಗಳು ಉದ್ಭವಿಸುತ್ತಿದೆ. ಡ್ರಗ್ಸ್‌ ತಯಾರಿ, ಡ್ರಗ್ಸ್‌ ಮಾರಾಟ ಮಾಡುವಂತಹ ಕುಕೃತ್ಯದಲ್ಲಿ ವಿದೇಶಿಗರು ಪಾಲ್ಗೊಳ್ಳುತ್ತಿದ್ದಾರೆ. ಮುಖ್ಯವಾಗಿ ನೈಜೀರಿಯಾ ಪ್ರಜೆಗಳೇ ಡ್ರಗ್ಸ್‌ ಪ್ರಕರಣದ ಕಿಂಗ್‌ಪಿನ್‌ಗಳಾಗಿದ್ದಾರೆ. ಬೆಂಗಳೂರಿನಲ್ಲಿ ಅನೇಕರಲ್ಲಿ ವೀಸಾದ ಅವಧಿ ಮುಗಿದಿದ್ದರೂ ಇಲ್ಲೇ ವಾಸ್ತವ್ಯ ಹೂಡುತ್ತಿದ್ದಾರೆ. ಹೀಗಾಗಿ ಪೊಲೀಸರು ಇಂತಹವರ ವಿರುದ್ಧ ಕ್ರಮಗೊಳ್ಳುವಂತೆ ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ. ಅಕ್ರಮಗಳಿಗೆ ಬ್ರೇಕ್‌ ಹಾಕಲು ಪೊಲೀಸರು ಎಚ್ಚೆತ್ತುಕೊಳ್ಳುವ ಅಗತ್ಯವಿದೆ ಎನ್ನುತ್ತಿದ್ದಾರೆ.