ಬೆಂಗಳೂರು: ಮದುವೆಯಾಗುವುದಾಗಿ ನಂಬಿಸಿ, ತೋಟದ ಮನೆಯಲ್ಲಿ ವಿವಸ್ತ್ರಗೊಳಿಸಿ ಹಲ್ಲೆ ನಡೆಸಿದ ಬಿಎಂಟಿಸಿ ಚಾಲಕ!

ತೋಟದ ಮನೆಯ ಕೊಠಡಿಯೊಂದರಲ್ಲಿ ನನ್ನನ್ನು ಕೂಡಿ ಹಾಕಿ ವಿವಸ್ತ್ರಗೊಳಿಸಿ ಹಲ್ಲೆ ನಡೆಸಿದ್ದಾನೆ. ಹಣ ಕೇಳಿದರೆ ಮಾರಕಾಸ್ತ್ರದಿಂದ ಕತ್ತರಿಸುವುದಾಗಿ ಬೆದರಿಕೆ ಹಾಕಿದ್ದ. 2 ದಿನಗಳ ಕಾಲ ತೋಟದ ಮನೆಯಲ್ಲೇ ಇರಿಸಿಕೊಂಡು ಹಿಂಸೆ ಕೊಟ್ಟಿದ್ದಾನೆ ಎಂದು ಮಹಿಳೆ ದೂರಿನಲ್ಲಿ ಆರೋಪಿಸಿದ್ದಾಳೆ. ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಬೆಂಗಳೂರು: ಮದುವೆಯಾಗುವುದಾಗಿ ನಂಬಿಸಿ, ತೋಟದ ಮನೆಯಲ್ಲಿ ವಿವಸ್ತ್ರಗೊಳಿಸಿ ಹಲ್ಲೆ ನಡೆಸಿದ ಬಿಎಂಟಿಸಿ ಚಾಲಕ!
Linkup
ಬೆಂಗಳೂರು: ಮಹಿಳೆಯನ್ನು ವಿವಾಹವಾಗುವುದಾಗಿ ನಂಬಿಸಿ 2.70 ಲಕ್ಷ ರೂ. ಪಡೆದು ವಂಚಿಸಿರುವುದಲ್ಲದೆ, ತೋಟದ ಮನೆಯಲ್ಲಿ 2 ದಿನಗಳ ಕಾಲ ಕೂಡಿಹಾಕಿ ವಿವಸ್ತ್ರಗೊಳಿಸಿ ಹಲ್ಲೆನಡೆಸಿದ ಬಿಎಂಟಿಸಿ ಬಸ್‌ ಚಾಲಕನನ್ನು ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಸವೇಶ್ವರನಗರ ನಿವಾಸಿ 40 ವರ್ಷದ ಕೊಟ್ಟ ದೂರಿನ ಆಧಾರದ ಮೇರೆಗೆ ವಿಶ್ವನಾಥ್‌(42)ನನ್ನು ಬಂಧಿಸಲಾಗಿದೆ. ದೂರುದಾರ ಮಹಿಳೆ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಬಿಎಂಟಿಸಿ ಬಸ್‌ವೊಂದರಲ್ಲಿ ಪ್ರತಿದಿನ ಪ್ರಯಾಣಿಸುತ್ತಿದ್ದರು. 2019ರಲ್ಲಿ ಚಾಲಕ ವಿಶ್ವನಾಥ್‌ ಪರಿಚಯವಾಗಿ ಮಹಿಳೆಯ ಮೊಬೈಲ್‌ ನಂಬರ್‌ ಪಡೆದುಕೊಂಡಿದ್ದ. ಇಬ್ಬರ ನಡುವೆ ಸಲುಗೆ ಬೆಳೆದ ಬಳಿಕ ತಿಪಟೂರಿನಲ್ಲಿರುವ ಮನೆಗೆ ಮಹಿಳೆಯನ್ನು ಆಗಾಗ್ಗೆ ಕರೆದುಕೊಂಡು ಹೋಗುತ್ತಿದ್ದ. ಜತೆಗೆ ವಿವಾಹವಾಗುವುದಾಗಿ ದೂರುದಾರ ಮಹಿಳೆಯನ್ನು ನಂಬಿಸಿದ್ದ ವಿಶ್ವನಾಥ್‌, ಆಕೆಯಿಂದ ಹಂತ-ಹಂತವಾಗಿ 2.70 ಲಕ್ಷ ರೂ. ಪಡೆದಿದ್ದ. ಹಣ ವಾಪಸ್‌ ಕೊಡುವಂತೆ ಮಹಿಳೆ ಒತ್ತಾಯಿಸಿದಾಗಲೆಲ್ಲಒಂದಿಲ್ಲೊಂದು ಸಬೂಬು ಹೇಳಿ ತಪ್ಪಿಸಿಕೊಳ್ಳುತ್ತಿದ್ದ. ವಿವಾಹವಾಗು ಎಂದು ಹೇಳಿದರೂ, ನುಣುಚಿಕೊಳ್ಳುತ್ತಿದ್ದ. ಹಣ ಪಡೆದು 2 ವರ್ಷ ಕಳೆದರೂ ಹಿಂತಿರುಗಿಸದೇ ಸತಾಯಿಸುತ್ತಿದ್ದ. ''ಮಾ.23ರಂದು ವಿಶ್ವನಾಥ್‌ ಕರೆ ಮಾಡಿ ಊರಿನಲ್ಲಿ ಹಣ ನೀಡುವುದಾಗಿ ಹೇಳಿದ್ದ. ಹೀಗಾಗಿ, ಆತ ಹಣ ನೀಡುತ್ತಾನೆಂದು ಅವನೊಟ್ಟಿಗೆ ತಿಪಟೂರಿನ ಹಾಲುಕುರ್ಕೆ ಬಳಿಯಿರುವ ತೋಟದ ಮನೆಗೆ ಹೋಗಿದ್ದೆ. ತೋಟದ ಮನೆಯ ಕೊಠಡಿಯೊಂದರಲ್ಲಿ ನನ್ನನ್ನು ಕೂಡಿ ಹಾಕಿ ವಿವಸ್ತ್ರಗೊಳಿಸಿ ಹಲ್ಲೆ ನಡೆಸಿದ್ದಾನೆ. ಹಣ ಕೇಳಿದರೆ ಮಾರಕಾಸ್ತ್ರದಿಂದ ಕತ್ತರಿಸುವುದಾಗಿ ಬೆದರಿಕೆ ಹಾಕಿದ್ದ. 2 ದಿನಗಳ ಕಾಲ ತೋಟದ ಮನೆಯಲ್ಲೇ ಇರಿಸಿಕೊಂಡು ಹಿಂಸೆ ಕೊಟ್ಟಿದ್ದಾನೆ'' ಎಂದು ದೂರಿನಲ್ಲಿಮಹಿಳೆ ಆರೋಪಿಸಿದ್ದಾಳೆ.