ಇನ್ಮುಂದೆ ರೈತರಿಗೂ ಗೌರವ ಡಾಕ್ಟರೇಟ್ ನೀಡಲು ಬೆಂಗಳೂರು ಕೃಷಿ ವಿವಿ ನಿರ್ಧಾರ

ಕೃಷಿ ಕ್ಷೇತ್ರದಲ್ಲಿ ಹೊಸ ಹೊಸ ಆವಿಷ್ಕಾರ ಮಾಡಿದ , ಆದಾಯ ಮಾರ್ಗದಲ್ಲಿ ಹೊಸತನ ಕಂಡಿರುವ ಮಾದರಿ ರೈತರನ್ನು ಗುರುತಿಸಿ ಕೃಷಿ ಕ್ಷೇತ್ರಕ್ಕೆ ನೀಡಿದ ಕೊಡುಗೆಗೆ ಅನುಗುಣವಾಗಿ ಅವರಿಗೆ ಗೌರವ ಡಾಕ್ಟರೇಟ್‌ ನೀಡಲು ನಿರ್ಧರಿಸಿದ್ದೆವು. ಆದರೆ ಕೋವಿಡ್‌ ಮಹಾಮಾರಿಯಿಂದಾಗಿ ಈ ವರ್ಷ ಆಯ್ಕೆ ಮಾಡುವುದು ಸಾಧ್ಯವಾಗಲಿಲ್ಲ. ಮುಂದಿನ ವರ್ಷ ನಡೆಯುವ 56ನೇ ಘಟಿಕೋತ್ಸವದಲ್ಲಿ ರೈತರಿಗೆ ಗೌರವ ಡಾಕ್ಟರೇಟ್‌ ನೀಡಲಾಗುವುದು ಎಂದು ವಿಶ್ವ ವಿದ್ಯಾಲಯ ಕುಲಪತಿ ಡಾ. ಎಸ್‌. ರಾಜೇಂದ್ರ ಪ್ರಸಾದ್‌ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.

ಇನ್ಮುಂದೆ ರೈತರಿಗೂ ಗೌರವ ಡಾಕ್ಟರೇಟ್ ನೀಡಲು ಬೆಂಗಳೂರು ಕೃಷಿ ವಿವಿ ನಿರ್ಧಾರ
Linkup
ಬೆಂಗಳೂರು: ಗಣ್ಯ ಸಾಧಕರಿಗೆ ಮಾತ್ರ ಸಿಗುತ್ತಿದ್ದ ಗೌರವ ಡಾಕ್ಟರೇಟ್‌ ಪದವಿ ಇನ್ನು ಮುಂದೆ ರೈತರಿಗೂ ಸಿಗಲಿದೆ. ಕೃಷಿ ವಿಶ್ವ ವಿದ್ಯಾಲಯ ಮುಂದಿನ ವರ್ಷದ ಘಟಿಕೋತ್ಸವದಲ್ಲಿ ರೈತರಿಗೆ ಗೌರವ ಡಾಕ್ಟರೇಟ್‌ ನೀಡಲು ನಿರ್ಧರಿಸಿದೆ. ಇದೇ ಮೊದಲ ಬಾರಿಗೆ ಕೃಷಿ ವಿಶ್ವ ವಿದ್ಯಾಲಯ ರೈತರನ್ನು ಗೌರವಿಸುವ ಕಾರ್ಯಕ್ಕೆ ಮುಂದಾಗಿದೆ. ಈ ವರ್ಷ ಸೆ. 21 ರಂದು ನಡೆಯುವ 55 ನೇ ಘಟಿಕೋತ್ಸವದಲ್ಲಿಯೇ ಗೌರವ ಡಾಕ್ಟರೇಟ್‌ ಪದವಿಗಾಗಿ ರೈತರನ್ನು ಆಯ್ಕೆ ಮಾಡಲು ನಿರ್ಧರಿಸಲಾಗಿತ್ತು. ಕೃಷಿ ಕ್ಷೇತ್ರದಲ್ಲಿ ಹೊಸ ಹೊಸ ಆವಿಷ್ಕಾರ ಮಾಡಿದ , ಆದಾಯ ಮಾರ್ಗದಲ್ಲಿ ಹೊಸತನ ಕಂಡಿರುವ ಮಾದರಿ ರೈತರನ್ನು ಗುರುತಿಸಿ ಕೃಷಿ ಕ್ಷೇತ್ರಕ್ಕೆ ನೀಡಿದ ಕೊಡುಗೆಗೆ ಅನುಗುಣವಾಗಿ ಅವರಿಗೆ ಗೌರವ ಡಾಕ್ಟರೇಟ್‌ ನೀಡಲು ನಿರ್ಧರಿಸಿದ್ದೆವು. ಆದರೆ ಕೋವಿಡ್‌ ಮಹಾಮಾರಿಯಿಂದಾಗಿ ಈ ವರ್ಷ ಆಯ್ಕೆ ಮಾಡುವುದು ಸಾಧ್ಯವಾಗಲಿಲ್ಲ. ಮುಂದಿನ ವರ್ಷ ನಡೆಯುವ 56ನೇ ಘಟಿಕೋತ್ಸವದಲ್ಲಿ ರೈತರಿಗೆ ಗೌರವ ಡಾಕ್ಟರೇಟ್‌ ನೀಡಲಾಗುವುದು ಎಂದು ವಿಶ್ವ ವಿದ್ಯಾಲಯ ಕುಲಪತಿ ಡಾ. ಎಸ್‌. ರಾಜೇಂದ್ರ ಪ್ರಸಾದ್‌ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು. ಸೆ. 21 ರಂದು 55 ನೇ ಘಟಿಕೋತ್ಸವ ನಡೆಯಲಿದ್ದು, 2019- 20 ರಲ್ಲಿ ತೇರ್ಗಡೆಯಾದ 1012 ಸ್ನಾತಕ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗುವುದು. ಈ ಪೈಕಿ 659 ವಿದ್ಯಾರ್ಥಿಗಳು ಸ್ನಾತಕ ಪದವಿ, 279 ವಿದ್ಯಾರ್ಥಿಗಳು ಸ್ನಾತಕೋತ್ತರ ಪದವಿ ಹಾಗೂ 74 ವಿದ್ಯಾರ್ಥಿಗಳು ಡಾಕ್ಟೋರಲ್‌ ಪದವಿಗಳನ್ನು ಪಡೆಯಲಿದ್ದಾರೆ ಎಂದರು. 55 ನೇ ಘಟಿಕೋತ್ಸವವು ಸೆ. 21 ರಂದು ಬೆಳಗ್ಗೆ 11 ಗಂಟೆಗೆ ಜಿ ಕೆ ವಿ ಕೆ ಯ ಡಾ. ಬಾಬು ರಾಜೇಂದ್ರ ಪ್ರಸಾದ್‌ ಅಂತಾರಾಷ್ಟ್ರೀಯ ಸಮಾವೇಶ ಭವನದಲ್ಲಿ ನಡೆಯಲಿದೆ. ರಾಜ್ಯಪಾಲರಾದ ಥಾವರ್‌ ಚಂದ್‌ ಗೆಹ್ಲೋಟ್‌ ಪದವಿ ಪ್ರದಾನ ಮಾಡುವರು. ಮುಂದಿನ ವರ್ಷದಿಂದ ಕೃಷಿ ಕ್ಷೇತ್ರದಲ್ಲಿ ಹೊಸ ಹೊಸ ಆವಿಷ್ಕಾರ ಮಾಡಿದ , ಆದಾಯ ಮಾರ್ಗದಲ್ಲಿ ಹೊಸತನ ಕಂಡಿರುವ ಮಾದರಿ ರೈತರನ್ನು ಗುರುತಿಸಿ ಕೃಷಿ ಕ್ಷೇತ್ರಕ್ಕೆ ನೀಡಿದ ಕೊಡುಗೆಗೆ ಅನುಗುಣವಾಗಿ ಅವರಿಗೆ ಗೌರವ ಡಾಕ್ಟರೇಟ್‌ ನೀಡಲು ನಿರ್ಧರಿಸಲಾಗಿದೆ. ಸುದ್ದಿ ಗೋಷ್ಠಿಯಲ್ಲಿ ವಿವಿ ಕುಲಸಚಿವ ಡಾ. ಬಸವೇಗೌಡ, ಕೃಷಿ ವಿವಿಯ ಡಾ. ಕೆ. ಶಿವರಾಂ, ವಿಸ್ತರಣಾ ನಿರ್ದೇಶಕ ಎನ್‌. ದೇವಕುಮಾರ್‌ ಮತ್ತಿತರರು ಉಪಸ್ಥಿತರಿದ್ದರು.