ಫ್ಲಿಪ್‌ಕಾರ್ಟ್‌ನಿಂದ ಮೂರು ತಿಂಗಳಲ್ಲಿ 23,000 ಸಿಬ್ಬಂದಿಗಳ ನೇಮಕ

ಇ-ಕಾಮರ್ಸ್‌ ದಿಗ್ಗಜ ಸಂಸ್ಥೆ ಫ್ಲಿಪ್‌ಕಾರ್ಟ್‌ ಕಳೆದ ಮೂರು ತಿಂಗಳ ಅವಧಿಯಲ್ಲಿ ತನ್ನ ಸಪ್ಲೈ ಚೈನ್‌ ಹಾಗೂ ಡೆಲಿವರಿ ವಿಭಾಗಕ್ಕೆ 23,000 ಮಂದಿಯನ್ನು ಹೊಸದಾಗಿ ನೇಮಕ ಮಾಡಿಕೊಂಡಿದೆ.

ಫ್ಲಿಪ್‌ಕಾರ್ಟ್‌ನಿಂದ ಮೂರು ತಿಂಗಳಲ್ಲಿ 23,000 ಸಿಬ್ಬಂದಿಗಳ ನೇಮಕ
Linkup
ಬೆಂಗಳೂರು: ಭಾರತದ ಇ - ಕಾಮರ್ಸ್‌ ದಿಗ್ಗಜ ಕಳೆದ ಮೂರು ತಿಂಗಳಲ್ಲಿ ಅಂದರೆ ಮಾರ್ಚ್‌ನಿಂದ ಮೇ ಅವಧಿಯಲ್ಲಿ 23,000 ಮಂದಿಯನ್ನು ಹೊಸದಾಗಿ ಸಂಸ್ಥೆಗೆ ನೇಮಕ ಮಾಡಿಕೊಂಡಿದೆ. ತನ್ನ ಸಪ್ಲೈ ಚೈನ್‌ ಹಾಗೂ ಡೆಲಿವರಿ ವಿಭಾಗಕ್ಕೆ ನೇಮಕಾತಿಯನ್ನು ಮಾಡಿಕೊಂಡಿದೆ. ದೇಶಾದ್ಯಂತ ನೇಮಕಗಳು ನಡೆದಿವೆ ಎಂದು ಸ್ವತಃ ಕಂಪನಿ ತಿಳಿಸಿದೆ. "ದೇಶಾದ್ಯಂತ ಇ - ಕಾಮರ್ಸ್‌ ಸೇವೆಗೆ ಬೇಡಿಕೆ ವೃದ್ಧಿಸುತ್ತಿದೆ. ಕೋವಿಡ್‌ - 19 ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಜನತೆ ಮನೆಯಲ್ಲಿಯೇ ಉಳಿಯಲು ಬಯಸುತ್ತಾರೆ. ಇದರ ಪರಿಣಾಮ ಸಾವಿರಾರು ಉದ್ಯೋಗಾವಕಾಶಗಳೂ ಸೃಷ್ಟಿಯಾಗಿವೆ" ಎಂದು ಫ್ಲಿಪ್‌ಕಾರ್ಟ್‌ ಸಪ್ಲೈ ಚೈನ್‌ ವಿಭಾಗದ ಉಪಾಧ್ಯಕ್ಷ ಹೇಮಂತ್‌ ಬದ್ರಿ ತಿಳಿಸಿದ್ದಾರೆ. ಫ್ಲಿಪ್‌ಕಾರ್ಟ್‌ ತನ್ನ ಸಪ್ಲೈ ಚೈನ್‌ಗೆ ಸಂಬಂಧಿಸಿ ಕ್ಲಾಸ್‌ ರೂಮ್‌ ಮತ್ತು ಡಿಜಿಟಲ್‌ ತರಬೇತಿಯನ್ನೂ ನೀಡುತ್ತದೆ. ವಾಟ್ಸ್‌ ಆ್ಯಪ್‌, ಝೂಮ್‌, ಹ್ಯಾಂಗ್‌ ಔಟ್‌ ಇತ್ಯಾದಿ ಮೊಬೈಲ್‌ ಆ್ಯಪ್‌ಗಳ ಮೂಲಕ ತರಬೇತಿ ಒದಗಿಸುತ್ತದೆ.