ಅಡುಗೆ ಎಣ್ಣೆ ಬೆಲೆ ಇಳಿಸಲು ಕೇಂದ್ರದ ಕ್ರಮ: ವ್ಯಾಪಾರಿಗಳಿಗೆ ಸಂಗ್ರಹ ಮಿತಿ ಹೇರಿದ ಸರ್ಕಾರ

ಅಡುಗೆ ಎಣ್ಣೆ ಬೆಲೆಯ ಸತತ ಹೆಚ್ಚಳದಿಂದ ತತ್ತರಿಸಿದ್ದ ಗ್ರಾಹಕರಿಗೆ ಕೇಂದ್ರ ಸರ್ಕಾರ ಗುಡ್​ನ್ಯೂಸ್​ ನೀಡಿದೆ. ಕೇಂದ್ರ ಸರ್ಕಾರವು ಅಡುಗೆ ಎಣ್ಣೆ ಮತ್ತು ಎಣ್ಣೆಬೀಜದ ವ್ಯಾಪಾರಿಗಳಿಗೆ ಸ್ಟಾಕ್ ಮಿತಿಯನ್ನು ವಿಧಿಸಿದೆ. ಬೆಲೆ ಇಳಿಕೆಯಾಗುವ ಸಾಧ್ಯತೆ ಇದೆ.

ಅಡುಗೆ ಎಣ್ಣೆ ಬೆಲೆ ಇಳಿಸಲು ಕೇಂದ್ರದ ಕ್ರಮ: ವ್ಯಾಪಾರಿಗಳಿಗೆ ಸಂಗ್ರಹ ಮಿತಿ ಹೇರಿದ ಸರ್ಕಾರ
Linkup
ಹೊಸದಿಲ್ಲಿ: ಕಳೆದ ಒಂದು ವರ್ಷದಲ್ಲಿ ಬೆಲೆಯಲ್ಲಿ ಆಗಿರುವ ಸತತ ಏರಿಕೆಯಿಂದ ಗ್ರಾಹಕರು ತತ್ತರಿಸಿ ಹೋಗಿದ್ದರು. ಇದೀಗ ಜನಸಾಮಾನ್ಯರಿಗೆ ಕೇಂದ್ರ ಸರ್ಕಾರ ಗುಡ್ನ್ಯೂಸ್ ನೀಡಿದೆ. ಕೇಂದ್ರ ಸರ್ಕಾರವು ಅಡುಗೆ ಎಣ್ಣೆ ಮತ್ತು ಎಣ್ಣೆಬೀಜದ ವ್ಯಾಪಾರಿಗಳಿಗೆ ಸ್ಟಾಕ್ ಮಿತಿಯನ್ನು ವಿಧಿಸಿದೆ. ಅಂದರೆ, ಇಂತಿಷ್ಟು ಪ್ರಮಾಣದವರೆಗೆ ಮಾತ್ರವೇ ಅಡುಗೆ ಎಣ್ಣೆ ಮತ್ತು ಎಣ್ಣೆಬೀಜಗಳನ್ನು ಸಂಗ್ರಹಿಸಬೇಕು ಎಂದು ತಾಕೀತು ಮಾಡಿದೆ. ಆಮದುದಾರರು ಮತ್ತು ರಫ್ತುದಾರರನ್ನು ಹೊರತುಪಡಿಸಿ 2022ರ ಮಾರ್ಚ್ 31 ರವರೆಗೆ ಸಂಗ್ರಹ ಮಿತಿಯನ್ನು ಹೇರಲಾಗಿದೆ. ಈಗಾಗಲೇ, ಎನ್‌ಸಿಡಿಎಕ್ಸ್ ಪ್ಲಾಟ್‌ಫಾರ್ಮ್‌ನಲ್ಲಿ ಸಾಸಿವೆ ಎಣ್ಣೆ ವ್ಯಾಪಾರವನ್ನು ಅಕ್ಟೋಬರ್ 8 ರಿಂದ ಸ್ಥಗಿತಗೊಳಿಸಲಾಗಿದೆ. ಸರ್ಕಾರದ ಅಂಕಿಅಂಶಗಳ ಪ್ರಕಾರ, ಜಾಗತಿಕ ಮತ್ತು ಸ್ಥಳೀಯ ಪೂರೈಕೆ ಪರಿಸ್ಥಿತಿಯಿಂದಾಗಿ ಕಳೆದ ಒಂದು ವರ್ಷದಲ್ಲಿ ದೇಶೀಯ ಚಿಲ್ಲರೆ ಮಾರುಕಟ್ಟೆಗಳಲ್ಲಿ ಖಾದ್ಯ ತೈಲ ಬೆಲೆಗಳು ಶೇ. 46.15 ರಷ್ಟು ಏರಿಕೆಯಾಗಿದೆ. ಕೇಂದ್ರ ಸರಕಾರದ ಈ ಕ್ರಮದಿಂದ ಅಡುಗೆ ಎಣ್ಣೆಯ ಕಾಳಸಂತೆಗೆ ಬ್ರೇಕ್‌ ಬಿದ್ದಂತಾಗಿದೆ. ದೇಶೀಯ ಮಾರುಕಟ್ಟೆಯಲ್ಲಿ ಅಡುಗೆ ಎಣ್ಣೆಗಳ ಬೆಲೆ ಕಡಿಮೆಯಾಗಲಿದೆ. ಆ ಮೂಲಕ ದೇಶಾದ್ಯಂತ ಹೆಚ್ಚಿನ ಗ್ರಾಹಕರಿಗೆ ಅನುಕೂಲವಾಗಲಿದೆ ಎಂದು ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವಾಲಯ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ದೇಶಾದ್ಯಂತ ಅಡುಗೆ ಎಣ್ಣೆ ಬೆಲೆ ಇಳಿಕೆಯಾಗಲಿದೆ ಎಲ್ಲ ರಾಜ್ಯಗಳು, ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನೀಡಲಾದ ಆದೇಶದ ಪ್ರಕಾರ, ನಿರ್ದಿಷ್ಟ ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶಗಳ ಲಭ್ಯವಿರುವ ಸ್ಟಾಕ್ ಮತ್ತು ಬಳಕೆ ಮಾದರಿಯನ್ನು ಗಣನೆಗೆ ತೆಗೆದುಕೊಂಡಿದೆ. ನಂತರ ಖಾದ್ಯ ತೈಲಗಳು ಮತ್ತು ಎಣ್ಣೆಬೀಜಗಳ ಮೇಲೆ ಹೇರಬೇಕಾದ ಸ್ಟಾಕ್ ಮಿತಿಯನ್ನು ನಿರ್ಧರಿಸುತ್ತದೆ. ಆದಾಗ್ಯೂ, ಕೆಲವು ಆಮದುದಾರರು ಮತ್ತು ರಫ್ತುದಾರರಿಗೆ ಸ್ಟಾಕ್ ಮಿತಿಯಿಂದ ವಿನಾಯಿತಿ ನೀಡಲಾಗಿದೆ. ಇನ್ಮುಂದೆ ಆನ್ಲೈನ್ನಲ್ಲಿ ಸಂಪೂರ್ಣ ಮಾಹಿತಿ ಒಂದು ವೇಳೆ, ಸಂಬಂಧಿತ ಘಟಕಗಳು ಹೊಂದಿರುವ ಸ್ಟಾಕ್‌ಗಳು ನಿಗದಿತ ಮಿತಿಗಳಿಗಿಂತ ಹೆಚ್ಚಿದ್ದರೆ, ನಂತರ ಅವರು ಅದನ್ನು ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆಯ ಪೋರ್ಟಲ್‌ನಲ್ಲಿ (https://evegoils.nic.in/EOSP/login) ಘೋಷಿಸಬೇಕು. ಅಡುಗೆ ಎಣ್ಣೆಗಳು ಮತ್ತು ಎಣ್ಣೆಬೀಜಗಳ ಸ್ಟಾಕ್ ವಿವರಗಳನ್ನು ಕೇಂದ್ರ ಸರ್ಕಾರದ ಪೋರ್ಟಲ್‌ನಲ್ಲಿ ನಿಯಮಿತವಾಗಿ ಘೋಷಿಸಲಾಗುತ್ತದೆ ಮತ್ತು ನವೀಕರಿಸಲಾಗುತ್ತದೆ. ಸೆಪ್ಟೆಂಬರ್ 8 ರಿಂದಲೇ ಜಾರಿ ನಿಗದಿತ ಆಹಾರ ಪದಾರ್ಥಗಳ (ತಿದ್ದುಪಡಿ) ಆದೇಶ, 2021 ರ ಪರವಾನಗಿ ಅಗತ್ಯತೆಗಳು, ಸ್ಟಾಕ್ ಮಿತಿಗಳು ಮತ್ತು ಚಲನೆಯ ನಿರ್ಬಂಧಗಳನ್ನು ತೆಗೆಯಲು ಸೆಪ್ಟೆಂಬರ್ 8 ರಿಂದ ತಕ್ಷಣದಿಂದ ಜಾರಿಗೆ ಬರುವಂತೆ ಹೊರಡಿಸಲಾಗಿದೆ. ಸಚಿವಾಲಯದ ಪ್ರಕಾರ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಖಾದ್ಯ ತೈಲಗಳ ಹೆಚ್ಚಿನ ಬೆಲೆಗಳು ದೇಶೀಯ ಖಾದ್ಯ ತೈಲ ಬೆಲೆಯ ಮೇಲೆ ಗಣನೀಯ ಪರಿಣಾಮ ಬೀರುತ್ತವೆ. ಆದರೂ, ಖಾದ್ಯ ತೈಲಗಳಂತಹ ಅಗತ್ಯ ವಸ್ತುಗಳ ಬೆಲೆ ನಿಯಂತ್ರಿಸಲು ಸರ್ಕಾರವು ಬಹುಮುಖಿ ತಂತ್ರ ರೂಪಿಸಿದೆ. ಆಮದು ಸುಂಕ ರಚನೆಯ ತರ್ಕಬದ್ಧಗೊಳಿಸುವಿಕೆ, ವಿವಿಧ ಪಾಲುದಾರರು ಹೊಂದಿರುವ ಸ್ಟಾಕ್‌ಗಳ ಸ್ವಯಂ-ಬಹಿರಂಗಪಡಿಸುವಿಕೆಗಾಗಿ ವೆಬ್-ಪೋರ್ಟಲ್ ಆರಂಭಿಸುವಂತಹ ಕ್ರಮಗಳನ್ನು ಈಗಾಗಲೇ ತೆಗೆದುಕೊಳ್ಳಲಾಗಿದೆ ಎಂದು ಅದು ಹೇಳಿದೆ. ಗ್ರಾಹಕ ವ್ಯವಹಾರಗಳ ಸಚಿವಾಲಯದ ಮಾಹಿತಿಯ ಪ್ರಕಾರ ಅಡುಗೆ ಎಣ್ಣೆ ಬೆಲೆಗಳು
  • ಸೋಯಾ ಎಣ್ಣೆಯ ಸರಾಸರಿ ಚಿಲ್ಲರೆ ಬೆಲೆ ಪ್ರತಿ ಕೆಜಿಗೆ 154.95 ರೂ. ಈ ವರ್ಷದಲ್ಲಿ ಪ್ರತಿ ಕೆಜಿಗೆ ಶೇ. 46.15ರಷ್ಟು ಬೆಲೆ ಹೆಚ್ಚಳ ಕಂಡಿದೆ.
  • ಸಾಸಿವೆ ಎಣ್ಣೆ ಬೆಲೆ ಪ್ರತಿ ಕೆಜಿಗೆ 129.19 ರೂ. ರಿಂದ 184.43 ರೂಗೆ ಏರಿಕೆಯಾಗಿದೆ. ಅಂದರೆ ಪ್ರತಿ ಕೆಜಿಗೆ ಸರಾಸರಿ ಶೇ. 43 ರಷ್ಟು ಏರಿಕೆಯಾಗಿ.
  • ವನಸ್ಪತಿಯು ಕೆಜಿಗೆ 95.5 ರೂ. ರಿಂದ 136.74 ಕ್ಕೆ ಏರಿಕೆಯಾಗಿದೆ.
  • ಸೂರ್ಯಕಾಂತಿ ಎಣ್ಣೆಯ ಸರಾಸರಿ ಚಿಲ್ಲರೆ ಬೆಲೆ ಪ್ರತಿ ಕೆಜಿಗೆ ಶೇ.38.48 ರಷ್ಟು ಏರಿಕೆಯಾಗಿದ್ದು, 170.09 ರೂಗೆ. ಏರಿದೆಯಾಗಿದೆ. ಈ ಅವಧಿಯಲ್ಲಿ ಪ್ರತಿ ಕೆಜಿಗೆ 95.68 ರೂ.ನಷ್ಟು ಏರಿಕೆ ಕಂಡಿದೆ