ಭಾರತದ ವಿದೇಶಿ ವಿನಿಮಯ ಸಂಗ್ರಹದಲ್ಲಿ ಭಾರಿ ಏರಿಕೆ, 50 ಲಕ್ಷ ಕೋಟಿ ರೂ.ನತ್ತ ಫೊರೆಕ್ಸ್‌ ರಿಸರ್ವ್‌

ಕಳೆದೊಂದು ವಾರದಲ್ಲಿ ಭಾರತದ ವಿದೇಶಿ ವಿನಿಮಯ ಸಂಗ್ರಹದಲ್ಲಿ 8.895 ಬಿಲಿಯನ್‌ ಡಾಲರ್‌ ಹೆಚ್ಚಳವಾಗಿದ್ದು, ಸೆಪ್ಟೆಂಬರ್‌ 3ರ ಅಂತ್ಯಕ್ಕೆ ದಾಖಲೆಯ 642.453 ಬಿಲಿಯನ್‌ ಡಾಲರ್‌ಗೆ ತಲುಪಿದೆ ಎಂದು ಆರ್‌ಬಿಐನ ಅಂಕಿ ಅಂಶಗಳು ಹೇಳಿವೆ.

ಭಾರತದ ವಿದೇಶಿ ವಿನಿಮಯ ಸಂಗ್ರಹದಲ್ಲಿ ಭಾರಿ ಏರಿಕೆ, 50 ಲಕ್ಷ ಕೋಟಿ ರೂ.ನತ್ತ ಫೊರೆಕ್ಸ್‌ ರಿಸರ್ವ್‌
Linkup
ಮುಂಬಯಿ: ದೇಶದ ವಿದೇಶಿ ವಿನಿಮಯ ಮೀಸಲು ನಿಧಿಯಲ್ಲಿ ಭಾರಿ ಏರಿಕೆ ದಾಖಲಾಗಿದ್ದು, 50 ಲಕ್ಷ ಕೋಟಿ ರೂ.ನತ್ತ ಮುಖ ಮಾಡಿದೆ. ಕಳೆದೊಂದು ವಾರದಲ್ಲಿ ಭಾರತದ (ಫೊರೆಕ್ಸ್‌ ರಿಸರ್ವ್‌) 65.39 ಸಾವಿರ ಕೋಟಿ ರೂ. (8.895 ಬಿಲಿಯನ್‌ ಡಾಲರ್‌) ಹೆಚ್ಚಳವಾಗಿದ್ದು, ಸೆಪ್ಟೆಂಬರ್‌ 3ರ ಅಂತ್ಯಕ್ಕೆ ದಾಖಲೆಯ 642.453 ಬಿಲಿಯನ್‌ (ಸುಮಾರು 47.23 ಲಕ್ಷ ಕೋಟಿ ರೂ.)ಗೆ ತಲುಪಿದೆ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ನ ಅಂಕಿ ಅಂಶಗಳು ಹೇಳಿವೆ. ಈ ಹಿಂದೆ ಆಗಸ್ಟ್‌ 27ಕ್ಕೆ ಅಂತ್ಯವಾದ ವಾರದಲ್ಲಿ ಭಾರತದ ವಿದೇಶಿ ವಿನಿಮಯ ಸಂಗ್ರಹದಲ್ಲಿ 16.663 ಬಿಲಿಯನ್‌ ಡಾಲರ್‌ ಹೆಚ್ಚಳವಾಗಿ 633.55 ಬಿಲಿಯನ್‌ ಡಾಲರ್‌ಗೆ ಏರಿಕೆಯಾಗಿತ್ತು. ಸ್ಪೆಷಲ್‌ ಡ್ರಾಯಿಂಗ್ ರೈಟ್‌ (ಎಸ್‌ಡಿಆರ್‌) ನಲ್ಲಿ ಹೆಚ್ಚಳದಿಂದಾಗಿ ಹೀಗೆ ಒಂದೇ ಸಮನೆ ಫೊರೆಕ್ಸ್‌ ರಿಸರ್ವ್‌ ಹೆಚ್ಚಳವಾಗಿತ್ತು. ಅಂತಾರಾಷ್ಟ್ರೀಯ ಹಣಕಾಸು ನಿಧಿ () ಭಾರತಕ್ಕೆ 12.57 ಬಿಲಿಯನ್‌ ಡಾಲರ್‌ ಎಸ್‌ಡಿಆರ್‌ ಹಂಚಿಕೆ ಮಾಡಿತ್ತು. ಆದರೆ ಸೆಪ್ಟೆಂಬರ್‌ನಲ್ಲಿ ಬೇರೆಯದೇ ಕಾರಣದಿಂದ ವಿದೇಶಿ ವಿನಿಮಯ ಸಂಗ್ರಹ ಹೆಚ್ಚಳವಾಗಿದೆ. ವಿದೇಶಿ ಕರೆನ್ಸಿ ಸ್ವತ್ತು (ಎಫ್‌ಸಿಎ)ಗಳ ಹೆಚ್ಚಳದಿಂದಾಗಿ ಒಟ್ಟಾರೆ ಫೊರೆಕ್ಸ್‌ ರಿಸರ್ವ್‌ ಹೆಚ್ಚಳವಾಗಿದೆ. ಎಫ್‌ಸಿಎನಲ್ಲಿ 8.213 ಬಿಲಿಯನ್‌ ಡಾಲರ್‌ ಹೆಚ್ಚಳವಾಗಿದ್ದು, 579.813 ಬಿಲಿಯನ್‌ ಡಾಲರ್‌ಗೆ ಮುಟ್ಟಿದೆ ಎಂದು ಅಂಕಿ ಅಂಶಗಳು ಹೇಳಿವೆ. ಇದರಲ್ಲಿ ಡಾಲರ್‌ ಅಲ್ಲರೆ, ಯೂರೋ, ಪೌಂಡ್‌ ಮತ್ತು ಯೆನ್‌ ಕರೆನ್ಸಿಗಳು ಸೇರಿವೆ. ಇನ್ನೊಂದೆಡೆ ಗೋಲ್ಡ್‌ ರಿಸರ್ವ್‌ನಲ್ಲಿ 642 ಮಿಲಿಯನ್‌ ಡಾಲರ್‌ ಹೆಚ್ಚಳವಾಗಿದ್ದು 38.083 ಬಿಲಿಯನ್‌ ಡಾಲರ್‌ಗೆ ಏರಿಕೆಯಾಗಿದೆ. ಇನ್ನು ಐಎಂಎಫ್‌ನಲ್ಲಿರುವ ಎಸ್‌ಡಿಆರ್‌ಗಳ ಮೊತ್ತದಲ್ಲಿ 29 ಮಿಲಿಯನ್‌ ಡಾಲರ್‌ ಏರಿಕೆಯಾಗಿದ್ದು 19.437 ಬಿಲಿಯನ್‌ ಡಾಲರ್‌ ತಲುಪಿದೆ. ಇನ್ನು ಐಎಂಎಫ್‌ನಲ್ಲಿರುವ ದೇಶದ ಮೀಸಲು ನಿಧಿಯ ಮೊತ್ತದಲ್ಲಿ 11 ಮಿಲಿಯನ್‌ ಡಾಲರ್‌ ಏರಿಕೆಯಾಗಿದ್ದು 5.121 ಬಿಲಿಯನ್‌ ಡಾಲರ್‌ ಮುಟ್ಟಿದೆ.