‘ಪುಷ್ಪ’ ಬಗ್ಗೆ ವ್ಯಂಗ್ಯ ಮಾಡಿ ಅರಿವು ಮೂಡಿಸಿದ ಸೈಬರಾಬಾದ್ ಟ್ರಾಫಿಕ್ ಪೊಲೀಸ್..!

ಸೈಬರಾಬಾದ್ ಟ್ರಾಫಿಕ್ ಪೊಲೀಸರು ‘ಪುಷ್ಪ’ ಚಿತ್ರದ ವ್ಯಂಗ್ಯವಾದ ಮೀಮ್‌ವೊಂದನ್ನು ಇಟ್ಟುಕೊಂಡು ಅರಿವು ಮೂಡಿಸುವ ಕೆಲಸ ಮಾಡಿದ್ದಾರೆ.

‘ಪುಷ್ಪ’ ಬಗ್ಗೆ ವ್ಯಂಗ್ಯ ಮಾಡಿ ಅರಿವು ಮೂಡಿಸಿದ ಸೈಬರಾಬಾದ್ ಟ್ರಾಫಿಕ್ ಪೊಲೀಸ್..!
Linkup
ಟಾಲಿವುಡ್‌ನ ಸ್ಟೈಲಿಶ್ ಸ್ಟಾರ್ () ಅಭಿನಯದ ‘’ () ಸಿನಿಮಾ ತೆರೆಗೆ ಅಪ್ಪಳಿಸಿದೆ. ಬಿಡುಗಡೆಗೂ ಮುನ್ನ ‘ಪುಷ್ಪ’ ಸಿನಿಮಾ ಬಹು ನಿರೀಕ್ಷೆ ಹುಟ್ಟುಹಾಕಿತ್ತು. ಆದರೆ, ಅಭಿಮಾನಿಗಳು ಹಾಗೂ ಸಿನಿ ಪ್ರಿಯರ ನಿರೀಕ್ಷೆ ಮಟ್ಟ ತಲುಪುವಲ್ಲಿ ‘ಪುಷ್ಪ’ ಸಿನಿಮಾ ಹಿಂದೆ ಬಿದ್ದಿದೆ. ‘ಪುಷ್ಪ’ ಸಿನಿಮಾದ ದ್ವಿತೀಯಾರ್ಧದಲ್ಲಿ ಚಿತ್ರಕಥೆಯನ್ನು ತೀರಾ ಎಳೆದಿರುವುದು ಹಾಗೂ ಅನವಶ್ಯಕ ಸನ್ನಿವೇಶಗಳನ್ನು ತುರುಕಿರುವುದು ಸಿನಿ ಪ್ರಿಯರಿಗೆ ಬೇಸರ ತಂದಿದೆ. ಹೀಗಾಗಿ, ‘ಪುಷ್ಪ’ ಬಗ್ಗೆ ಹೆವಿ ಎಕ್ಸ್‌ಪೆಕ್ಟೇಷನ್ ಇಟ್ಟುಕೊಂಡಿದ್ದವರಿಗೆ ಕೊಂಚ ನಿರಾಸೆಯಾಗಿದೆ. ಅಲ್ಲು ಅರ್ಜುನ್‌ಗೆ ‘ಆರ್ಯ’ ಮತ್ತು ‘ಆರ್ಯ-2’ ಚಿತ್ರಗಳಂತಹ ಸೂಪರ್ ಹಿಟ್‌ಗಳನ್ನು ನೀಡಿದವರು ನಿರ್ದೇಶಕ ಸುಕುಮಾರ್ (Sukumar). ಅಲ್ಲು ಅರ್ಜುನ್ - ಸುಕುಮಾರ್ ಕಾಂಬಿನೇಶನ್‌ನಲ್ಲಿ ‘ಪುಷ್ಪ’ ಹ್ಯಾಟ್ರಿಕ್ ಹಿಟ್ ಆಗಲಿದೆ ಅಂತಲೇ ಸಿನಿ ಪ್ರಿಯರು ಭಾವಿಸಿದ್ದರು. ಆದರೆ, ಆತುರಾತುರವಾಗಿ ರಿಲೀಸ್ ಮಾಡಿದ್ದಕ್ಕೋ ಏನೋ.. ‘ಪುಷ್ಪ’ ಸಿನಿಮಾ ನಿರೀಕ್ಷಿಸಿದ ಮಟ್ಟ ತಲುಪಿಲ್ಲ. ‘ಪುಷ್ಪ’ ಸಿನಿಮಾ ಬಿಡುಗಡೆಯಾದ ಮೊದಲ ದಿನವೇ ಚಿತ್ರದ ಬಗ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಕೆಲವರು ‘ಪುಷ್ಪ’ ಸಿನಿಮಾದಲ್ಲಿ ಫೈಯರ್ ಇಲ್ಲ ಅಂತೆಲ್ಲಾ ಕಾಮೆಂಟ್ ಮಾಡುತ್ತಿದ್ದಾರೆ. ಹೀಗಿರುವಾಗಲೇ, ಸೈಬರಾಬಾದ್ ಟ್ರಾಫಿಕ್ ಪೊಲೀಸರು (Cyberabad Traffic ) ‘ಪುಷ್ಪ’ ಚಿತ್ರದ ವ್ಯಂಗ್ಯವಾದ ಮೀಮ್‌ವೊಂದನ್ನು ಇಟ್ಟುಕೊಂಡು ಅರಿವು ಮೂಡಿಸುವ ಕೆಲಸ ಮಾಡಿದ್ದಾರೆ. ‘ಪುಷ್ಪ’ ಸಿನಿಮಾದ ಮೀಮ್ ಬೈಕ್ ಮೇಲೆ ಪುಷ್ಪರಾಜ್ ಕೂತುಕೊಂಡು ಕೈಬೀಸುತ್ತಿರುವ ‘ಪುಷ್ಪ’ ಸಿನಿಮಾ ಪೋಸ್ಟರ್‌ವೊಂದು ಈ ಹಿಂದೆ ಬಿಡುಗಡೆಯಾಗಿತ್ತು. ಇದೇ ಪೋಸ್ಟರ್‌ಅನ್ನು ಇಟ್ಟುಕೊಂಡು ‘‘ಪುಷ್ಪ’ ನಿನ್ನ ಬಳಿ ಹೆಲ್ಮೆಟ್ ಇಲ್ವಾ? ಬೈಕ್‌ಗೆ ಮಿರರ್ ಇಲ್ವಾ?’’ ಎಂದು ಕೇಳುವಂತೆ ಮೀಮ್ ತಯಾರಿಸಲಾಗಿದೆ. ಇದೇ ಮೀಮ್‌ಅನ್ನು ಸೈಬರಾಬಾದ್ ಟ್ರಾಫಿಕ್ ತನ್ನ ಟ್ವಿಟ್ಟರ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ‘’ಹೆಲ್ಮೆಟ್ ಧರಿಸಿ, ರೇರ್ ವ್ಯೂ ಮಿರರ್‌ಗಳನ್ನು ಬಳಸಿ, ಸುರಕ್ಷಿತವಾಗಿರಿ’’ ಎಂದು ಸೈಬರಾಬಾದ್ ಟ್ರಾಫಿಕ್ ಪೊಲೀಸ್ ಟ್ವೀಟ್ ಮಾಡಿದ್ದಾರೆ. ಸೈಬರಾಬಾದ್ ಟ್ರಾಫಿಕ್ ಪೊಲೀಸ್ ಮಾಡಿರುವ ಈ ಟ್ವೀಟ್ ಸಿಕ್ಕಾಪಟ್ಟೆ ವೈರಲ್ ಆಗಿದೆ. ‘ಪುಷ್ಪ’ ಕಥಾಹಂದರವೇನು? ಶೇಷಾಚಲಂ ಕಾಡಿನಲ್ಲಿ ನಡೆಯುವ ರಕ್ತಚಂದನ ಕಳ್ಳಸಾಗಣೆ ಕುರಿತಾದ ಕಥಾಹಂದರವನ್ನು ‘ಪುಷ್ಪ’ ಸಿನಿಮಾ ಹೊಂದಿದೆ. ಈ ಸಿನಿಮಾದಲ್ಲಿ ಪುಷ್ಪರಾಜ್ ಆಗಿ ಅಲ್ಲು ಅರ್ಜುನ್ ಅಭಿನಯಿಸಿದ್ದಾರೆ. ‘ಪುಷ್ಪ- ದಿ ರೈಸ್’ (Pushpa - The Rise) ಸಿನಿಮಾದಲ್ಲಿ ಪುಷ್ಪರಾಜ್‌ನ ಬೆಳವಣಿಗೆಯನ್ನು ತೋರಿಸಲಾಗಿದೆ. ಎರಡನೇ ಭಾಗದಲ್ಲಿ ಪುಷ್ಪರಾಜ್‌ನ ಆಳ್ವಿಕೆಯ ದರ್ಬಾರ್ ತೋರಸಲಾಗುತ್ತದೆ. ‘ಪುಷ್ಪ’ ‘ಪುಷ್ಪ’ ಸಿನಿಮಾದಲ್ಲಿ ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ, ಫಹಾದ್ ಫಾಸಿಲ್, ಧನಂಜಯ, ಪ್ರಕಾಶ್ ರಾಜ್ ಮುಂತಾದವರ ದೊಡ್ಡ ತಾರಾಬಳಗವೇ ಇದೆ. ಮೊದಲ ಭಾಗ ‘ಪುಷ್ಪ- ದಿ ರೈಸ್’ ತೆರೆಕಂಡಿದೆ. ಎರಡನೇ ಭಾಗ ‘ಪುಷ್ಪ - ದಿ ರೂಲ್’ (Pushpa - The Rule) ಬರಲಿದೆ.