ನಟ 'ಡಾರ್ಲಿಂಗ್' ಕೃಷ್ಣ ಜನ್ಮದಿನಕ್ಕೆ ಅಭಿಮಾನಿಗಳಿಗೆ ಸಿಗಲಿದೆ ಸೂಪರ್ ಗಿಫ್ಟ್‌!

'ಲವ್ ಮಾಕ್‌ಟೇಲ್‌' ಯಶಸ್ಸಿನ ನಂತರ 'ಡಾರ್ಲಿಂಗ್' ಕೃಷ್ಣ, ನಿಜಕ್ಕೂ ಸ್ಯಾಂಡಲ್‌ವುಡ್‌ ನಿರ್ಮಾಪಕರ ಪಾಲಿನ ಡಾರ್ಲಿಂಗ್ ಆಗಿದ್ದಾರೆ. ಸದ್ಯ ಅವರ ಕೈಯಲ್ಲಿ ಸಾಲು ಸಾಲು ಸಿನಿಮಾಗಳಿವೆ. ಇದೇ ಜೂನ್ 12ರಂದು ಅವರ ಹುಟ್ಟುಹಬ್ಬ. ಆ ಸಲುವಾಗಿ ಫ್ಯಾನ್ಸ್‌ಗೆ ಅವರೊಂದು ಗಿಫ್ಟ್ ನೀಡುತ್ತಿದ್ದಾರೆ.

ನಟ 'ಡಾರ್ಲಿಂಗ್' ಕೃಷ್ಣ ಜನ್ಮದಿನಕ್ಕೆ ಅಭಿಮಾನಿಗಳಿಗೆ ಸಿಗಲಿದೆ ಸೂಪರ್ ಗಿಫ್ಟ್‌!
Linkup
ನಟ 'ಡಾರ್ಲಿಂಗ್' ಕೃಷ್ಣ ಅವರಿಗೆ ಜೂನ್ 12ರಂದು ಜನ್ಮದಿನ. ಆ ಹಿನ್ನೆಲೆಯಲ್ಲಿ ಅವರ ಅಭಿಮಾನಿಗಳಿಗೆ ಒಂದು ವಿಶೇಷ ಗಿಫ್ಟ್ ಸಿದ್ಧಗೊಂಡಿದೆ. ಅದೇನೆಂದರೆ, ಅವರು ಸಿನಿಮಾ ""ಯ ಮೊದಲ ಟೀಸರ್ ರಿಲೀಸ್ ಆಗಲಿದೆ. ಕೃಷ್ಣ ಅವರ ಹುಟ್ಟುಹಬ್ಬಕ್ಕೆಂದೇ ಬಹಳ ವಿಶೇಷವಾಗಿ ಈ ಟೀಸರ್ ಅನ್ನು ಸಿದ್ಧಪಡಿಸಿದ್ದಾರಂತೆ ನಿರ್ದೇಶಕ ದೀಪಕ್ ಅರಸ್‌. 'ಕೆಲ ವಿಡಿಯೋ ತುಣುಕುಗಳನ್ನು ಬಳಸಿಕೊಂಡು ವಿಭಿನ್ನವಾಗಿ ಟೀಸರ್ ನಿರ್ಮಾಣ ಮಾಡಿದ್ದೇವೆ. ಜೂನ್ 12ರಂದು ಟೀಸರ್ ಬಿಡುಗಡೆಯಾಗಲಿದೆ. ಜೂನ್ 11 ರಂದು ಸಂಜೆ 5 ಗಂಟೆಗೆ ಇನ್‌ಸ್ಟಾಗ್ರಾಂ ಲೈವ್ ಮೂಲಕ ಚಿತ್ರತಂಡದ ಸದಸ್ಯರು ಟೀಸರ್ ಹಾಗೂ ಸಿನಿಮಾದ ಬಗ್ಗೆ ಅಭಿಮಾನಿಗಳಿಗೆ ಮಾಹಿತಿ ನೀಡಲಿದ್ದಾರೆ ಈಗಾಗಲೇ ಬಹತೇಕ ಭಾಗದ ಚಿತ್ರೀಕರಣ ಮುಕ್ತಾಯವಾಗಿದೆ' ಎಂದು ಮಾಹಿತಿ ನೀಡುತ್ತಾರೆ ಚಿತ್ರದ ನಿರ್ದೇಶಕ ದೀಪಕ್ ಅರಸ್. 'ಬೆಂಗಳೂರು ಹಾಗೂ ಗೋವಾದಲ್ಲಿ ಚಿತ್ರೀಕರಣ ನಡೆದಿದೆ. ಲಾಕ್‌ಡೌನ್ ಮುಗಿದ ಮೇಲೆ, ಚಿತ್ರೀಕರಣಕ್ಕೆ ಅನುಮತಿ ದೊರಕಿದ ಕೂಡಲೇ ಚಿತ್ರೀಕರಣ ಆರಂಭವಾಗಲಿದೆ. ಅವರಿಗೆ ನಾಯಕಿಯರಾಗಿ , ಅದ್ವಿತಿ ಶೆಟ್ಟಿ ಹಾಗೂ ಶಿಲ್ಪಾ ಶೆಟ್ಟಿ ಅಭಿನಯಿಸುತ್ತಿದ್ದಾರೆ. ರಂಗಾಯಣ ರಘು, ಲವ್ ಮಾಕ್ಟೇಲ್ ಅಭಿ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ' ಎಂದು ಮಾಹಿತಿ ನೀಡುತ್ತಾರೆ ಅವರು. ಬಾಲಮಣಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ಗಿರೀಶ್. ಆರ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.‌ ಚಿತ್ರದಲ್ಲಿ ಒಟ್ಟು ಆರು ಹಾಡುಗಳಿದ್ದು, ಸಂಗೀತ ನಿರ್ದೇಶನವನ್ನು ಕಬೀರ್ ರಫಿ ಮಾಡುತ್ತಿದ್ದಾರೆ. ಛಾಯಾಗ್ರಹಣವನ್ನು ಸಂತೋಷ್ ರೈ ಪಾತಾಜೆ ಮಾಡುತ್ತಿದ್ದಾರೆ. ಕೆ.ಎಂ.ಪ್ರಕಾಶ್ ಸಂಕಲನ, ಅರ್ಜುನ್ ಸಾಹಸ ನಿರ್ದೇಶನ ಹಾಗೂ ‌ಧನಂಜಯ್ ಅವರ ನೃತ್ಯ ನಿರ್ದೇಶನವಿರುವ 'ಶುಗರ್ ಫ್ಯಾಕ್ಟರಿ'ಗೆ 'ಭರ್ಜರಿ' ಚೇತನ್ ಕುಮಾರ್ ಹಾಗೂ ಯೋಗಾನಂದ್ ಮುದ್ದಾನ್ ಸಂಭಾಷಣೆ ಬರೆಯುತ್ತಿದ್ದಾರೆ. ಇನ್ನು 'ಶುಗರ್ ಫ್ಯಾಕ್ಟರಿ' ಹೊರತುಪಡಿಸಿ, 'ಶೀಘ್ರ ಮೇವ ಕಲ್ಯಾಣ ಪ್ರಾಪ್ತಿ ರಸ್ತು' ಅನ್ನೋ ಸಿನಿಮಾದ ಶೂಟಿಂಗ್ ಅನ್ನು ಕೃಷ್ಣ ಈಗಾಗಲೇ ಮುಗಿಸಿದ್ದಾರೆ ಕೃಷ್ಣ. ಮೈನಾ ಖ್ಯಾತಿ ನಾಗ್‌ಶೇಖರ್ ನಿರ್ದೇಶನದಲ್ಲಿ 'Srikrishna@Gmail.Com' ಸಿನಿಮಾ ಮಾಡಿದ್ದಾರೆ. ತಮ್ಮದೇ ನಿರ್ದೇಶನದಲ್ಲಿ 'ಲವ್ ಮಾಕ್‌ಟೇಲ್ 2' ಚಿತ್ರವನ್ನು ಕೃಷ್ಣ ಆರಂಭಿಸಿದ್ದಾರೆ.