ನಟ ದರ್ಶನ್ ಪರ ಬ್ಯಾಟ್ ಬೀಸಿದ ಕನ್ನಡದ ಇಬ್ಬರು ಹೆಸರಾಂತ ಕಲಾವಿದರು

ನಟ 'ಚಾಲೆಂಜಿಂಗ್ ಸ್ಟಾರ್' ದರ್ಶನ್ ಪರವಾಗಿ ಸ್ಯಾಂಡಲ್‌ವುಡ್ ನಟ ಧನ್ವೀರ್, ಶಿವರಾಜ್ ಕೆಆರ್‌ ಪೇಟೆ ಮಾತನಾಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ಕುರಿತು ಅವರು ಪೋಸ್ಟ್ ಮಾಡಿದ್ದಾರೆ.

ನಟ ದರ್ಶನ್ ಪರ ಬ್ಯಾಟ್ ಬೀಸಿದ ಕನ್ನಡದ ಇಬ್ಬರು ಹೆಸರಾಂತ ಕಲಾವಿದರು
Linkup
ನಿರ್ದೇಶಕ ಅವರು ನಟ 'ಚಾಲೆಂಜಿಂಗ್ ಸ್ಟಾರ್' ಮೇಲೆ ಸಾಕಷ್ಟು ಆರೋಪಗಳನ್ನು ಮಾಡಿದ್ದರು. ಮೈಸೂರಿನ ತೋಟದಮನೆಯಲ್ಲಿ ಸುದ್ದಿಗೋಷ್ಠಿ ನಡೆಸಿದ್ದ ದರ್ಶನ್ ಅವರು ನನ್ನ ಬಗ್ಗೆ ಒಬ್ಬ ಕಲಾವಿದ ಕೂಡ ಮಾತನಾಡಿಲಿಲ್ಲ ಎಂದು ಹೇಳಿದ್ದರು. ಈಗ ನಟ ಧನ್ವೀರ್, ಶಿವರಾಜ್ ಕೆಆರ್‌ ಪೇಟೆ ಅವರು ದರ್ಶನ್ ಪರವಾಗಿ ಸೋಶಿಯಲ್ ಮೀಡಿಯಾ ಪೋಸ್ಟ್ ಮಾಡಿದ್ದಾರೆ. ನಟ ಧನ್ವೀರ್ ಹೇಳಿದ್ದೇನು? ನನ್ನ ಪ್ರೀತಿ, ನಂಬಿಕೆ, ಸ್ಫೂರ್ತಿಗೆ ಇನ್ನೊಂದು ಹೆಸರು 'ಡಿ ಬಾಸ್'. ನಾನು ಚಿತ್ರೋದ್ಯಮಕ್ಕೆ ಬರುವ ಮೊದಲಿನಿಂದಲೂ ಡಿ ಬಾಸ್ ಅಭಿಮಾನಿ. ಅಭಿಮಾನ ಎನ್ನುವುದು ಚಿತ್ರ ನೋಡಿದಾಗ ಮಾತ್ರ ಬರುವುದಲ್ಲ. ಚಿತ್ರರಂಗಕ್ಕೆ ಬರುವ ಮೊದಲು ಅವರು ಪಟ್ಟಿರುವ ಕಷ್ಟ. ಚಿತ್ರರಂಗದಲ್ಲಿ ನಡೆದು ಬಂದ ಹಾದಿಯಿಂದ ಬರುವಂತದ್ದು. ಜೊತೆಗೆ ಯಾರಿಗೂ ಗೊತ್ತಾಗದಂತೆ ಮಾಡುವ ನಿಸ್ವಾರ್ಥ ಸಹಾಯ. ಇಂತಹ ನೂರಾರು ಗುಣಗಳಿಂದ ನನ್ನಂತ ಅಭಿಮಾನಿಗಳಿಗೆ ಸ್ಫೂರ್ತಿಯಾಗಿ ನಿಂತಿರುವ ಬೃಹತ್ ಶಿಖರ ಡಿ ಬಾಸ್. ಈ ಶಿಖರದ ಗುಣ ಎಷ್ಟೇ ಕಲ್ಲು ಎಸೆದರು ಅದನ್ನೆಲ್ಲ ಲೆಕ್ಕಿಸದೇ ಎಸೆದವರ ಮುಂದೆ ಎತ್ತರವಾಗಿ ಬೆಳೆದು ನಿಲ್ಲೋ ಗುಣ. ಡಿ ಬಾಸ್ ಎಂದರೆ ಸಾಕು ಪ್ರೀತಿಯಿಂದ ಹರಿದು ಬರುವುದು ಅಭಿಮಾನಿಗಳ ಹೊಳೆ. ಎಷ್ಟೇ ಕುತಂತ್ರ ಮಾಡಿದರೂ ಇವರನ್ನು ಕುಗ್ಗಿಸೋ ಆಯುಧ ಎಲ್ಲೂ ಸಿಗೋದಿಲ್ಲ. ಜಗತ್ತೇ ತಿರುಗಿಬಿದ್ದರೂ ನಾನು ಮತ್ತು ನನ್ನಂತಹ ಕೋಟ್ಯಂತರ ಅಭಿಮಾನಿಗಳು ಸದಾ ಡಿ ಬಾಸ್ ಜೊತೆ. ಜೈ ಡಿ ಬಾಸ್ ನಟ ಶಿವರಾಜ್ ಕೆಆರ್‌ ಪೇಟೆ ಹೇಳಿದ್ದೇನು? ಹುಟ್ಟು ಹಠಮಾರಿಯೊಬ್ಬ ಕವಿಯಾಗಲು ಪಣತೊಟ್ಟು ನಿತ್ಯ ಪದಭೇದಿಯಲ್ಲಿ ಬಳಲಿ ಹಲ್ಲು ಕಡಿಯುತ್ತಿದ್ದಾಗ ವಸಂತದ ಮಾವಿನ ಮರ ಕೋಗಿಲೆ ಕಂಠದಲ್ಲಿ ಹಾಡಿ ತನಗೇ ಗೊತ್ತಿಲ್ಲದೇ ಕವಿಯಾಯಿತು ಪಿ.ಲಂಕೇಶ್ (ನೀಲು ಕಾವ್ಯ) ಲಂಕೇಶ್ ಅವರ ಈ ಪದ್ಯ ಹೇಳುವಂತೆ, ಪತ್ರಕರ್ತನಾಗಲೂ ಹೆಣಕಾಡುತ್ತಿರುವ ವ್ಯಕ್ತಿಯೊಬ್ಬರು ನಟರನ್ನ ಅವಿದ್ಯಾವಂತರು ಎಂದು ಘೋಷಿಸಿದ್ದಾರೆ. ವಿದ್ಯೆ ಎಂಬುದು ಅಕಾಡೆಮಿಗಳು ನೀಡುವ ಸರ್ಟಿಫಿಕೇಟ್‌ಗಳಲ್ಲೇ ಇರುತ್ತವೆ ಎಂದು ನಂಬಿಕೊಂಡವರ ಹಣೆಬರಹವೇ ಇಷ್ಟು. ಇದಕ್ಕೆ ಉತ್ತರ ಲಂಕೇಶ್‌ರ ಪದ್ಯದಲ್ಲಿಯೇ ಇದೆ. ಅಂದಹಾಗೇ ನೇರ ನುಡಿ, ನೇರ ನಡೆ ರೂಢಿಸಿಕೊಂಡ ವ್ಯಕ್ತಿಯೊಬ್ಬರು ಈ ನಾಟಕೀಯ ಜಗತ್ತಿನಲ್ಲಿ, ತನ್ನ ರೀತಿಯಲ್ಲಿಯೇ ಬದುಕಬೇಕು ಎಂದು ಹೊರಟಾಗ ವಿವಾದಗಳು ಸುತ್ತಿಕೊಳ್ಳುವುದು ಸರ್ವೇ ಸಾಮಾನ್ಯ. ಆದರೂ ಇಂತಹವುಗಳನ್ನೆಲ್ಲ ಎದುರಿಸಿ ನಿಲ್ಲೋ ಶಕ್ತಿ ದರ್ಶನ್ ಸರ್‌ಗಿದೆ. ಅವರ ಅಸಂಖ್ಯಾ ಅಭಿಮಾನಿಗಳ ಹಾರೈಕೆಯು ಅವರೊಂದಿಗಿದೆ. ಕೊನೆಯದಾಗಿ ಪಿ.ಲಂಕೇಶ್ ಅವರ ಮತ್ತೊಂದು ಪದ್ಯವೊಂದು ಈ ಸಂದರ್ಭಕ್ಕೂ ಸರ್ವಕಾಲಕ್ಕೂ ಸಲ್ಲುವಂತೆ ಇದೆ. ದಯವಿಟ್ಟು ಓದಿಕೊಳ್ಳಿ. ಎಲ್ಲರನ್ನೂ ಮೆಚ್ಚಿಸುವಂತೆ ಬದುಕುವ ಕಲೆಯನ್ನು ನೀನು ರೂಢಿಸಿಕೊಂಡ ದಿನವೇ ನಿನ್ನ ಕೊನೆಯ ದಿನವಾಗುವುದು ಪಿ.ಲಂಕೇಶ್ ಯಾರನ್ನೋ ಮೆಚ್ಚಿಸಲು ಬದುಕುವುದಕ್ಕಿಂತ ನಮ್ಮಿಚ್ಛೆ ಇದ್ದಂತೆ ಬದುಕುವುದೇ ನಿಜವಾದ ಬದುಕು. ಅದಕ್ಕೆ ಮೊಟ್ಟ ಮೊದಲ ಉದಾಹರಣೆ ಎಂದರೆ ದರ್ಶನ್ ಸರ್