ನಟ ಸಾಯಿ ಧರಮ್ ತೇಜ್ ಅವರ ಕಾಲರ್ ಬೋನ್ ಫ್ರ್ಯಾಕ್ಚರ್ ಆಗಿದೆ ಎಂದ ವೈದ್ಯರು

ಟಾಲಿವುಡ್ ನಟ ಸಾಯಿ ಧರಮ್ ತೇಜ್ ಅವರ ಆರೋಗ್ಯ ಸ್ಥಿತಿ ಬಗ್ಗೆ ಅಪೋಲೋ ಆಸ್ಪತ್ರೆಗೆ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದೆ. ಅಪಘಾತದಲ್ಲಿ ಸಾಯಿ ಧರಮ್ ತೇಜ್ ಅವರ ತಲೆ ಭಾಗಕ್ಕೆ ಮೇಜರ್ ಆಗಿ ಪೆಟ್ಟು ಬಿದ್ದಿಲ್ಲ ಎಂದು ಹೆಲ್ತ್ ಬುಲೆಟಿನ್‌ನಲ್ಲಿ ವೈದ್ಯರು ಸ್ಪಷ್ಟಪಡಿಸಿದ್ದಾರೆ. ಹಾಗೇ, ನಟ ಸಾಯಿ ಧರಮ್ ತೇಜ್ ಅವರ ಕಾಲರ್ ಬೋನ್ ಫ್ರ್ಯಾಕ್ಚರ್ ಆಗಿದೆ ಅಂತಲೂ ವೈದ್ಯರು ಹೆಲ್ತ್ ಬುಲೆಟಿನ್‌ನಲ್ಲಿ ತಿಳಿಸಿದ್ದಾರೆ.

ನಟ ಸಾಯಿ ಧರಮ್ ತೇಜ್ ಅವರ ಕಾಲರ್ ಬೋನ್ ಫ್ರ್ಯಾಕ್ಚರ್ ಆಗಿದೆ ಎಂದ ವೈದ್ಯರು
Linkup
ನಟ ಪ್ರಯಾಣ ಮಾಡುತ್ತಿದ್ದ ಬೈಕ್ ಅಪಘಾತಕ್ಕೀಡಾಗಿದೆ. ಶುಕ್ರವಾರ ಸಂಜೆ ಹೈದರಾಬಾದ್‌ನಲ್ಲಿನ ದುರ್ಗಮ ಚೆರುವು ಕೇಬಲ್ ಬ್ರಿಡ್ಜ್ ಬಳಿ ನಟ ಸಾಯಿ ಧರಮ್ ತೇಜ್ ಅವರ ಬೈಕ್ ಆಕ್ಸಿಡೆಂಟ್ ಆಗಿದೆ. ಸಂಭವಿಸಿದ ಬಳಿಕ ಸಾಯಿ ಧರಮ್ ತೇಜ್ ಅವರನ್ನು ಹತ್ತಿರದ ಆಸ್ಪತ್ರೆಗೆ ಸೇರಿಸಲಾಗಿತ್ತು. ಬಳಿಕ ಅವರನ್ನು ಹೆಚ್ಚಿನ ಚಿಕಿತ್ಸೆಗೆ ಅಪೋಲೋ ಆಸ್ಪತ್ರೆಗೆ ಶಿಫ್ಟ್ ಮಾಡಲಾಯ್ತು. ಸದ್ಯ ಅಪೋಲೋ ಆಸ್ಪತ್ರೆಯ ಐಸಿಯುನಲ್ಲಿ ಸಾಯಿ ಧರಮ್ ತೇಜ್ ಚಿಕಿತ್ಸೆ ಪಡೆಯುತ್ತಿದ್ದಾರೆ. ನಟ ಸಾಯಿ ಧರಮ್ ತೇಜ್ ಕಾಲರ್ ಬೋನ್ ಫ್ರ್ಯಾಕ್ಚರ್ ಟಾಲಿವುಡ್ ನಟ ಸಾಯಿ ಧರಮ್ ತೇಜ್ ಅವರ ಆರೋಗ್ಯ ಸ್ಥಿತಿ ಬಗ್ಗೆ ಅಪೋಲೋ ಆಸ್ಪತ್ರೆಗೆ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದೆ. ಅಪಘಾತದಲ್ಲಿ ಸಾಯಿ ಧರಮ್ ತೇಜ್ ಅವರ ತಲೆ ಭಾಗಕ್ಕೆ ಮೇಜರ್ ಆಗಿ ಪೆಟ್ಟು ಬಿದ್ದಿಲ್ಲ ಎಂದು ಹೆಲ್ತ್ ಬುಲೆಟಿನ್‌ನಲ್ಲಿ ವೈದ್ಯರು ಸ್ಪಷ್ಟಪಡಿಸಿದ್ದಾರೆ. ಹಾಗೇ, ನಟ ಸಾಯಿ ಧರಮ್ ತೇಜ್ ಅವರ ಕಾಲರ್ ಬೋನ್ ಫ್ರ್ಯಾಕ್ಚರ್ ಆಗಿದೆ ಅಂತಲೂ ವೈದ್ಯರು ಹೆಲ್ತ್ ಬುಲೆಟಿನ್‌ನಲ್ಲಿ ತಿಳಿಸಿದ್ದಾರೆ. ಹೆಲ್ತ್ ಬುಲೆಟಿನ್‌ನಲ್ಲಿ ವೈದ್ಯರು ಹೇಳಿರುವುದೇನು? ‘’ರಸ್ತೆ ಅಪಘಾತದ ಬಳಿಕ ಸಾಯಿ ಧರಮ್ ತೇಜ್ ಅವರನ್ನು ಜ್ಯೂಬ್ಲಿ ಹಿಲ್ಸ್‌ನ ಅಪೋಲೋ ಆಸ್ಪತ್ರೆಗೆ ಕರೆತರಲಾಯಿತು. ಅಪಘಾತದ ಬಳಿಕ ಹತ್ತಿರದ ಆಸ್ಪತ್ರೆಯಲ್ಲಿ ಉಸಿರಾಟದ ವ್ಯವಸ್ಥೆಯನ್ನು ಮಾಡಿದ ಬಳಿಕ ಅವರನ್ನು ಅಪೋಲೋ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಸದ್ಯ ಸಾಯಿ ಧರಮ್ ತೇಜಾ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ. ಮೆದುಳು, ಸ್ಪೈನ್ ಸೇರಿದಂತೆ ಇತರೆ ಅಂಗಾಂಗಗಳಿಗೆ ಗಂಭೀರ ಪಟ್ಟಾಗಿಲ್ಲ. ಅವರಿಗೆ ಸಾಫ್ಟ್ ಟಿಶ್ಯೂ ಇಂಜ್ಯುರಿ ಮತ್ತು ಕಾಲರ್ ಬೋನ್ ಫ್ರ್ಯಾಕ್ಚರ್ ಆಗಿದೆ. ಅವರಿಗೆ ತುರ್ತು ಶಸ್ತ್ರಚಿಕಿತ್ಸೆಯ ಅಗತ್ಯವಿಲ್ಲ’’ ಎಂದು ಹೆಲ್ತ್ ಬುಲೆಟಿನ್‌ನಲ್ಲಿ ವೈದ್ಯರು ತಿಳಿಸಿದ್ದಾರೆ. ಅಲ್ಲು ಅರವಿಂದ್ ಹೇಳಿದ್ದೇನು? ‘’ಶುಕ್ರವಾರ ಸಂಜೆ ಸಾಯಿ ಧರಮ್ ತೇಜ್ ಅವರ ಬೈಕ್ ಅಪಘಾತಕ್ಕೀಡಾಯಿತು. ಸದ್ಯ ಸಾಯಿ ಧರಮ್ ತೇಜ್ ಐಸಿಯುನಲ್ಲಿದ್ದಾರೆ. ಸಣ್ಣ ಪುಟ್ಟ ಏಟಾಗಿದೆ ಅಷ್ಟೇ. ತಲೆ ಭಾಗಕ್ಕೆ ಗಂಭೀರವಾದ ಪೆಟ್ಟು ಬಿದ್ದಿಲ್ಲ’’ ಎಂದು ಮಾಧ್ಯಮಗಳಿಗೆ ಸಾಯಿ ಧರಮ್ ತೇಜ್ ಅವರ ಸಂಬಂಧಿ ಅಲ್ಲು ಅರವಿಂದ್ ತಿಳಿಸಿದ್ದಾರೆ. ಆಸ್ಪತ್ರೆಗೆ ದೌಡಾಯಿಸಿದ ಕುಟುಂಬಸ್ಥರು ಸಾಯಿ ಧರಮ್ ತೇಜ್ ಅವರ ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆಯೇ, ಕುಟುಂಬಸ್ಥರಾದ ನಟ ಪವನ್ ಕಲ್ಯಾಣ್, ನಿರ್ಮಾಪಕ ಅಲ್ಲು ಅರವಿಂದ್, ವೈಷ್ಣವ್ ತೇಜ್, ಚಿರಂಜೀವಿ ಪತ್ನಿ ಸುರೇಖಾ ಮುಂತಾದವರು ಆಸ್ಪತ್ರೆಗೆ ಭೇಟಿ ನೀಡಿದರು. ಅಪಘಾತ ಸಂಭವಿಸಿದ್ದು ಹೇಗೆ? ಶುಕ್ರವಾರ ಸಂಜೆ ಜ್ಯೂಬ್ಲಿ ಹಿಲ್ಸ್‌ನಿಂದ ಗಚಿಬೌಲಿ ಕಡೆಗೆ ಸಾಯಿ ಧರಮ್ ತೇಜ್ ಹೊರಟ್ಟಿದ್ದರು. ತಮ್ಮ ಸ್ಪೋರ್ಟ್ಸ್ ಬೈಕ್‌ನಲ್ಲಿ ಸಾಯಿ ಧರಮ್ ತೇಜ್ ಪ್ರಯಾಣ ಮಾಡುತ್ತಿದ್ದರು. ದುರ್ಗಮ ಚೆರುವು ಕೇಬಲ್ ಬ್ರಿಡ್ಜ್ ಬಳಿ ಬಂದಾಗ ಅಪಘಾತ ಸಂಭವಿಸಿದೆ. ಅತಿಯಾದ ವೇಗದಿಂದ ಸ್ಪೋರ್ಟ್ಸ್ ಬೈಕ್‌ನ ನಿಯಂತ್ರಣ ತಪ್ಪಿ ರಸ್ತೆಯಲ್ಲಿ ಗಾಡಿ ಸ್ಕಿಡ್ ಆಗಿ ಅಪಘಾತ ಸಂಭವಿಸಿದೆ.