Exclusive - 'ದುಬಾರಿ' ಚಿತ್ರದಿಂದ ನಂದಕಿಶೋರ್ ಔಟ್ ಆಗಿಲ್ಲ: ಸ್ಪಷ್ಟಪಡಿಸಿದ ಉದಯ್.ಕೆ.ಮೆಹ್ತಾ!

ಇನ್ನೂ ಶೂಟಿಂಗ್ ಶುರುವಾಗದ 'ದುಬಾರಿ' ಚಿತ್ರದಿಂದ ನಿರ್ದೇಶಕ ನಂದಕಿಶೋರ್ ಹೊರಬಂದಿದ್ದಾರಂತೆ ಎಂಬ ಅಂತೆ-ಕಂತೆ ಇಂದು ಬೆಳಗ್ಗೆಯಷ್ಟೇ ಗಾಂಧಿನಗರದಲ್ಲಿ ಹಬ್ಬಿತ್ತು. ಇದೀಗ ಇದೇ ವದಂತಿಗೆ ನಿರ್ಮಾಪಕ ಉದಯ್.ಕೆ.ಮೆಹ್ತಾ ಸ್ಪಷ್ಟನೆ ನೀಡಿದ್ದಾರೆ.

Exclusive - 'ದುಬಾರಿ' ಚಿತ್ರದಿಂದ ನಂದಕಿಶೋರ್ ಔಟ್ ಆಗಿಲ್ಲ: ಸ್ಪಷ್ಟಪಡಿಸಿದ ಉದಯ್.ಕೆ.ಮೆಹ್ತಾ!
Linkup
'ಪೊಗರು' ಚಿತ್ರದ ಬಳಿಕ ಆಕ್ಷನ್ ಪ್ರಿನ್ಸ್ ಮತ್ತು ನಿರ್ದೇಶಕ ಮತ್ತೆ ಒಂದಾಗಿದ್ದು '' ಚಿತ್ರಕ್ಕಾಗಿ. ನಿರ್ಮಾಣದಲ್ಲಿ 'ದುಬಾರಿ' ಚಿತ್ರ ಸೆಟ್ಟೇರಬೇಕಿತ್ತು. ಕಳೆದ ವರ್ಷವೇ 'ದುಬಾರಿ' ಚಿತ್ರದ ಮುಹೂರ್ತ ನೆರವೇರಿತ್ತು. ಇನ್ನೂ ಶೂಟಿಂಗ್ ಶುರುವಾಗದ 'ದುಬಾರಿ' ಚಿತ್ರದಿಂದ ನಿರ್ದೇಶಕ ನಂದಕಿಶೋರ್ ಹೊರಬಂದಿದ್ದಾರಂತೆ ಎಂಬ ಅಂತೆ-ಕಂತೆ ಇಂದು ಬೆಳಗ್ಗೆಯಷ್ಟೇ ಗಾಂಧಿನಗರದಲ್ಲಿ ಹಬ್ಬಿತ್ತು. ಇದೀಗ ಇದೇ ವದಂತಿಗೆ ನಿರ್ಮಾಪಕ ಉದಯ್.ಕೆ.ಮೆಹ್ತಾ ಸ್ಪಷ್ಟನೆ ನೀಡಿದ್ದಾರೆ. 'ವಿಜಯ ಕರ್ನಾಟಕ ವೆಬ್' ಜೊತೆಗೆ ಮಾತನಾಡಿದ ನಿರ್ಮಾಪಕ ಉದಯ್.ಕೆ.ಮೆಹ್ತಾ, ''ದುಬಾರಿ' ಚಿತ್ರದಿಂದ ನಂದಕಿಶೋರ್ ಹೊರಬಂದಿದ್ದಾರೆ ಎಂಬ ಸುದ್ದಿ ಶುದ್ಧ ಸುಳ್ಳು. 'ದುಬಾರಿ' ಚಿತ್ರದ ಶೇಕಡ 65 ರಷ್ಟು ಚಿತ್ರೀಕರಣವನ್ನು ನಾವು ವಿದೇಶದಲ್ಲಿ ಮಾಡಬೇಕಿತ್ತು. ಆದರೆ ಕೋವಿಡ್‌ನಿಂದಾಗಿ ನಾವು ವಿದೇಶಕ್ಕೆ ಹೋಗಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಸದ್ಯಕ್ಕೆ ಈ ಪ್ರಾಜೆಕ್ಟ್‌ಅನ್ನು ಮುಂದಕ್ಕೆ ಹಾಕಿದ್ದೇವೆ'' ಎಂದರು. ಹಾಗೇ, ''ಪ್ರಸ್ತುತ ಹೊಸ ಪ್ರಾಜೆಕ್ಟ್‌ಗೆ ಕೈ ಹಾಕಿದ್ದೇವೆ. ಈಗ ಧ್ರುವ ಸರ್ಜಾ ಜೊತೆಗೆ ಮತ್ತೊಂದು ಪ್ರಾಜೆಕ್ಟ್ ಮಾಡಲು ಮುಂದಾಗಿದ್ದೇವೆ. ಸ್ಕ್ರಿಪ್ಟಿಂಗ್ ವರ್ಕ್ ನಡೆಯುತ್ತಿದೆ. ಸ್ಕ್ರಿಪ್ಟ್ ಫೈನಲ್ ಆದ ಕೂಡಲೆ ಶೀರ್ಷಿಕೆ, ನಿರ್ದೇಶಕ, ನಾಯಕಿಯ ಆಯ್ಕೆ ಪ್ರಕ್ರಿಯೆ ನಡೆಯುತ್ತದೆ'' ಎಂದು ಉದಯ್.ಕೆ.ಮೆಹ್ತಾ ಮಾಹಿತಿ ನೀಡಿದರು. ''ದುಬಾರಿ' ಚಿತ್ರದ ಬಹುತೇಕ ಭಾಗದ ಚಿತ್ರೀಕರಣ ವಿದೇಶದಲ್ಲಿ ನಡೆಯುವುದರಿಂದ ಕೋವಿಡ್ ಸಂಪೂರ್ಣವಾಗಿ ನಿಯಂತ್ರಣಕ್ಕೆ ಬರುವವರೆಗೂ ಚಿತ್ರದ ಶೂಟಿಂಗ್ ಕಷ್ಟ. ಹೀಗಾಗಿ ಮೊದಲು ಧ್ರುವ ಸರ್ಜಾ ಜೊತೆಗಿನ ಹೊಸ ಪ್ರಾಜೆಕ್ಟ್ ಶುರು ಮಾಡುತ್ತೇವೆ. ಅದು ಮುಗಿದ ಬಳಿಕ 'ದುಬಾರಿ' ಚಿತ್ರಕ್ಕೆ ಚಾಲನೆ ನೀಡುತ್ತೇವೆ. ನಂದಕಿಶೋರ್ ಅವರೇ 'ದುಬಾರಿ' ಚಿತ್ರವನ್ನು ನಿರ್ದೇಶನ ಮಾಡ್ತಾರೆ'' ಎಂದು ಉದಯ್.ಕೆ.ಮೆಹ್ತಾ ತಿಳಿಸಿದರು. ಅಂದ್ಹಾಗೆ, 'ದುಬಾರಿ' ಚಿತ್ರಕ್ಕಾಗಿ ಧ್ರುವ ಸರ್ಜಾ ಜೊತೆಗೆ ನಾಯಕಿಯಾಗಿ ಶ್ರೀಲೀಲಾ ಆಯ್ಕೆ ಆಗಿದ್ದರು. 'ದುಬಾರಿ' ಚಿತ್ರದ ಫಸ್ಟ್ ಲುಕ್ ಪೋಸ್ಟರ್‌ಗೆ ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿತ್ತು. (ಚಿತ್ರಕೃಪೆ: ನಂದಕಿಶೋರ್ ಟ್ವಿಟ್ಟರ್ ಪ್ರೊಫೈಲ್)