ಪ್ರವಾಸಿಗರ ಬೇಕಾಬಿಟ್ಟಿ ವರ್ತನೆ ಹಿನ್ನೆಲೆ, ನಂದಿಬೆಟ್ಟ ಪ್ರವೇಶಕ್ಕೆ ಹೊಸ ರೂಲ್ಸ್‌

ಪ್ರವಾಸಿಗರು ನಂದಿಬೆಟ್ಟದಲ್ಲಿ ಮಾಸ್ಕ್‌ ಹಾಕದೆ ಕೊರೊನಾ ನಿಯಮ ಉಲ್ಲಂಘಿಸಿ ಬೇಕಾಬಿಟ್ಟಿ ವರ್ತಿಸಿದ್ದರ ಪರಿಣಾಮ, ನಂದಿಬೆಟ್ಟ ಪ್ರವೇಶಕ್ಕೆ ಈಗ ಹೊಸ ನಿಯಮ ಜಾರಿಯಾಗಿದೆ. ಬೆಟ್ಟದ ತಳಭಾಗದ ಪ್ರವೇಶದ್ವಾರದಲ್ಲೇ ಟಿಕೆಟ್‌ ಖರೀದಿಸಿ ಬೆಟ್ಟಕ್ಕೆ ಹೋಗಲು ವ್ಯವಸ್ಥೆ ಮಾಡಲಾಗಿದೆ.

ಪ್ರವಾಸಿಗರ ಬೇಕಾಬಿಟ್ಟಿ ವರ್ತನೆ ಹಿನ್ನೆಲೆ, ನಂದಿಬೆಟ್ಟ ಪ್ರವೇಶಕ್ಕೆ ಹೊಸ ರೂಲ್ಸ್‌
Linkup
ಚಿಕ್ಕಬಳ್ಳಾಪುರ: ನಂದಿಬೆಟ್ಟದಲ್ಲಿ ಮಾಸ್ಕ್‌ ಹಾಕದೆ ಕೊರೊನಾ ನಿಯಮ ಉಲ್ಲಂಘಿಸಿ ಬೇಕಾಬಿಟ್ಟಿ ವರ್ತಿಸಿದ್ದರ ಪರಿಣಾಮ ನಂದಿಬೆಟ್ಟ ಪ್ರವೇಶಕ್ಕೆ ಈಗ ಹೊಸ ರೂಲ್ಸ್‌ ಜಾರಿಯಾಗಿವೆ. ಬೆಟ್ಟದ ತಳಭಾಗದ ಪ್ರವೇಶದ್ವಾರದಲ್ಲೇ ಟಿಕೆಟ್‌ ಖರೀದಿಸಿ ಬೆಟ್ಟಕ್ಕೆ ಹೋಗಬೇಕು. ಸದ್ಯಕ್ಕೆ ಆಫ್‌ಲೈನ್‌ನಲ್ಲಿ ಟಿಕೆಟ್‌ ವಿತರಣೆಯಾಗಲಿದ್ದು, ಸದ್ಯದಲ್ಲೇ ಆನ್‌ಲೈನ್‌ ಟಿಕೆಟ್‌ಗೆ ವ್ಯವಸ್ಥೆ ಆಗಲಿದೆ. ಸೋಮವಾರ ಬೆಟ್ಟದ ಬುಡದಲ್ಲಿರೋ ಪ್ರವೇಶ ದ್ವಾರದಲ್ಲೇ ಅಧಿಕಾರಿಗಳು ಟಿಕೆಟ್‌ ವಿತರಿಸಿದರು. ಸದ್ಯಕ್ಕೆ ಆನ್‌ಲೈನ್‌ನಲ್ಲಿ ಟಿಕೆಟ್‌ ಮಾರಾಟ ನಡೆಯುತ್ತಿಲ್ಲ. ಟಿಕೆಟ್‌ ಬುಕ್ಕಿಂಗ್‌ಗೆ ಇನ್ನು ಸಾಫ್ಟ್‌ವೇರ್‌ ಅಭಿವೃದ್ಧಿಪಡಿಸಬೇಕಿರುವ ಕಾರಣ ಸದ್ಯಕ್ಕೆ ಆಫ್‌ಲೈನ್‌ನಲ್ಲೇ ಟಿಕೆಟ್‌ ವಿತರಿಸಿದ್ದಾರೆ. ವೀಕೆಂಡ್‌ ಹೊತ್ತಿಗೆ ಆನ್‌ಲೈನ್‌ ಬುಕ್ಕಿಂಗ್‌ ಶುರುವಾಗುವ ನಿರೀಕ್ಷೆ ಇದೆ. ನಂದಿ ಗಿರಿಧಾಮದ ಮೇಲಿರುವ ಪಾರ್ಕಿಂಗ್‌ ಸ್ಥಳವಕಾಶ ನೋಡಿಕೊಂಡು ಕಾರು, ಬೈಕ್‌ಗಳಲ್ಲಿ ಬರುವ ಪ್ರವಾಸಿಗರಿಗೆ ಪಾಸ್‌ ವಿತರಿಸಲಾಗುವುದು. ಹಿಂದೆ ಪಾರ್ಕಿಂಗ್‌ ಲಾಟ್‌ ತುಂಬಿದ್ದರೂ ಟಿಕೆಟ್‌ ನೀಡಲಾಗುತ್ತಿತ್ತು. ಆದರೆ ಈಗ ಪಾರ್ಕಿಂಗ್‌ಗೆ ಅವಕಾಶವಿದ್ದರಷ್ಟೇ ಟಿಕೆಟ್‌ ವಿತರಣೆ ನಡೆಯಲಿದೆ. ಇದರಿಂದ ಬೆಟ್ಟದಲ್ಲಿ ಜನದಟ್ಟಣೆ ಆಗುವುದನ್ನು ತಡೆಯಲು ಸಾಧ್ಯವಾಗುತ್ತದೆ.