ಬೆಂಗಳೂರು: ‘ಹುಡುಗರು’ ಸಿನಿಮಾ ಮಾದರಿಯಲ್ಲಿ ಎಸ್ಸೆಸ್ಸೆಲ್ಸಿ ಹುಡುಗಿಯನ್ನು ಕಿಡ್ನ್ಯಾಪ್‌ ಮಾಡಿ ಮದುವೆ..!

ಜೂ.9ರಂದು ಮೆಡಿಕಲ್‌ ಶಾಪ್‌ ಹೋಗುವುದಾಗಿ ಹೊರಬಂದ ಬಾಲಕಿ ಮನೆ ಸೇರದಿದ್ದಾಗ, ಪೋಷಕರು ಹನುಮಂತನಗರ ಪೊಲೀಸ್‌ ಠಾಣೆಯಲ್ಲಿ ತಮ್ಮ ಮಗಳನ್ನು ಅಪಹರಿಸಿರುವುದಾಗಿ ಪ್ರಕರಣ ದಾಖಲಿಸಿದ್ದರು. ದೂರಿನನ್ವಯ ಕಾರ್ಯಾಚರಣೆಗಿಳಿದ ಹನುಮಂತನಗರ ಪೊಲೀಸ್‌ ಠಾಣೆ ಇನ್ಸ್‌ಪೆಕ್ಟರ್‌ ಹಾಗೂ ಸಿಬ್ಬಂದಿ ಬಾಲಕಿ ಮತ್ತು ಆರೋಪಿಗಳ ಸುಳಿವಿಗಾಗಿ ಫೇಸ್‌ಬುಕ್‌ ಹಾಗೂ ಇನ್‌ಸ್ಟಾಗ್ರಾಂ ಜಾಲಾಡಿ ಆರೋಪಿಗಳು ವಿಜಯನಗರದಲ್ಲಿರುವುದನ್ನು ಪತ್ತೆಹಚ್ಚಿ ಬಂದಿಸಿದ್ದಾರೆ.

ಬೆಂಗಳೂರು: ‘ಹುಡುಗರು’ ಸಿನಿಮಾ ಮಾದರಿಯಲ್ಲಿ ಎಸ್ಸೆಸ್ಸೆಲ್ಸಿ ಹುಡುಗಿಯನ್ನು ಕಿಡ್ನ್ಯಾಪ್‌ ಮಾಡಿ ಮದುವೆ..!
Linkup
ರವಿಕುಮಾರ ಬೆಟ್ಟದಪುರ ಬೆಂಗಳೂರು: ಆನ್‌ಲೈನ್‌ ತರಗತಿಗೆಂದು ಮೊಬೈಲ್‌ ತೆಗೆಸಿಕೊಂಡು ಇನ್‌ಸ್ಟಾಗ್ರಾಂನಲ್ಲಿ ಪ್ರೇಮದ ಬಲೆಗೆ ಬಿದ್ದ ಬಾಲಕಿಯನ್ನು ಪಾಗಲ್‌ ಪ್ರೇಮಿಯ ಸ್ನೇಹಿತರಿಬ್ಬರು ಅಪಹರಿಸಿ ‘ಹುಡುಗರು’ ಚಲನಚಿತ್ರದ ರೀತಿಯಲ್ಲೇ ಸ್ನೇಹಿತನಿಗೆ ಮದುವೆ ಮಾಡಿಸಿರುವ ಘಟನೆ ಹನುಮಂತನಗರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. 16 ವರ್ಷದ ಬಾಲಕಿಯ ಪೋಷಕರು ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಬಾಲಕಿಯನ್ನು ಮದುವೆಯಾದ ಲಗ್ಗೆರೆ ದರ್ಶನ್‌ (20), ಮದುವೆ ಮಾಡಿಸಿದ ವಿಜಯನಗರದ ಚಂದ್ರು (19)ನನ್ನು ಬಂಧಿಸಿದ್ದಾರೆ. ಬಾಲಕಿಯನ್ನು ಅಪಹರಿಸಲು ಸಾಥ್‌ ನೀಧಿಡಿದ್ದ ಚನ್ನಪಟ್ಟಣದ ಗಿರೀಶ್‌ ತಲೆಮರೆಸಿಕೊಂಡಿದ್ದು, ಆತನ ಪತ್ತೆಗಾಗಿ ಶೋಧ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದರು. ಬಾಲಕಿ ಇನ್ನೂ ಎಸ್‌ಎಸ್‌ಎಲ್‌ಸಿ ವ್ಯಾಸಂಗ ಮಾಡುತ್ತಿದ್ದಾಳೆ. ಜುಲೈ 19ರಂದು ಪರೀಕ್ಷೆ ಬರೆಯಬೇಕಿತ್ತು. ಈ ಮಧ್ಯೆ ಪ್ರೇಮಪಾಶಕ್ಕೆ ಸಿಲುಕಿ ಭವಿಷ್ಯವನ್ನೇ ಅತಂತ್ರವಾಗಿಸಿಕೊಂಡಿದ್ದಾಳೆ. ಏನಿದು ಘಟನೆ? ಶ್ರೀನಗರದ ಆಟೋ ಚಾಲಕರೊಬ್ಬರು ಕಳೆದ ವರ್ಷ ಲಾಕ್‌ಡೌನ್‌ ಸಮಯದಲ್ಲಿ ಶಾಲೆ ಮುಚ್ಚಿದ್ದರಿಂದ ಆನ್‌ಲೈನ್‌ ತರಗತಿಯಲ್ಲಿ ಪಾಠ ಕಲಿಯಲೆಂದು ಸಾಲ ಮಾಡಿ ತಮ್ಮ ಮಗಳಿಗೆ ಮೊಬೈಲ್‌ ಕೊಡಿಸಿದ್ದರು. ಒಂಬತ್ತನೇ ತರಗತಿ ಓದುತ್ತಿದ್ದ ಬಾಲಕಿ ಇನ್‌ಸ್ಟಾಗ್ರಾಂ, ಫೇಸ್‌ಬುಕ್‌ನಲ್ಲಿ ಖಾತೆ ತೆರೆದಿದ್ದಳು. ಹೆಚ್ಚಿನ ಸಮಯ ಇನ್‌ಸ್ಟಾಗ್ರಾಂನಲ್ಲಿ ಇರುತ್ತಿದ್ದ ಬಾಲಕಿಗೆ ಲಗ್ಗೆರೆಯ ಯುವಕ ದರ್ಶನ್‌ ಫ್ರೆಂಡ್‌ ರಿಕ್ವೆಸ್ಟ್‌ ಕಳುಹಿಸಿದ್ದ. ಇಲ್ಲಿಂದ ಪ್ರಾರಂಭವಾದ ಅವರ ಸ್ನೇಹ ಒಂದು ವರ್ಷದಲ್ಲಿಪ್ರೇಮಕ್ಕೆ ತಿರುಗಿತ್ತು. ದರ್ಶನ್‌ ತನ್ನ ಪ್ರೇಮದ ಬಗ್ಗೆ ಸ್ನೇಹಿತರಾದ ಚಂದ್ರು ಬಳಿ ಹೇಳಿಕೊಂಡಿದ್ದ. ಮದುವೆ ಮಾಡಿಸುವುದಾಗಿ ದರ್ಶನ್‌ಗೆ ಭರವಸೆ ನೀಡಿದ್ದ ಚಂದ್ರು, ಚನ್ನಪಟ್ಟಣದಲ್ಲಿರುವ ತನ್ನ ಸ್ನೇಹಿತ ಗಿರೀಶ್‌ನನ್ನು ಬೆಂಗಳೂರಿಗೆ ಕರೆಸಿಕೊಂಡಿದ್ದ. ಮೂವರು ಸೇರಿ ಸಂಚು ರೂಪಿಸಿ ಜೂ.9ರಂದು ಬಾಲಕಿಯನ್ನು ಮನೆಯಿಂದ ಹೊರಬರಲು ಹೇಳಿ, ಹೊರ ಬಂದಾಗ ಅಪಹರಿಸಿದ್ದಾರೆ. ದೇವಸ್ಥಾನವೊಂದರಲ್ಲಿ ದರ್ಶನ್‌ ಜತೆ ಮದುವೆ ಮಾಡಿಸಿದ್ದಾರೆ. ಬಳಿಕ ಆ ದಂಪತಿ ವಾಸಕ್ಕೆಂದು ವಿಜಯನಗರದಲ್ಲಿ ಒಂದು ಮನೆಯನ್ನೂ ಮಾಡಿಕೊಟ್ಟಿದ್ದರು. ಜೂ.9ರಂದು ಮೆಡಿಕಲ್‌ ಶಾಪ್‌ ಹೋಗುವುದಾಗಿ ಹೊರಬಂದ ಬಾಲಕಿ ಮನೆ ಸೇರದಿದ್ದಾಗ, ಪೋಷಕರು ಹನುಮಂತನಗರ ಪೊಲೀಸ್‌ ಠಾಣೆಯಲ್ಲಿ ತಮ್ಮ ಮಗಳನ್ನು ಅಪಹರಿಸಿರುವುದಾಗಿ ಪ್ರಕರಣ ದಾಖಲಿಸಿದ್ದರು. ದೂರಿನನ್ವಯ ಕಾರ್ಯಾಚರಣೆಗಿಳಿದ ಹನುಮಂತನಗರ ಪೊಲೀಸ್‌ ಠಾಣೆ ಇನ್ಸ್‌ಪೆಕ್ಟರ್‌ ಹಾಗೂ ಸಿಬ್ಬಂದಿ ಬಾಲಕಿ ಮತ್ತು ಆರೋಪಿಗಳ ಸುಳಿವಿಗಾಗಿ ಫೇಸ್‌ಬುಕ್‌ ಹಾಗೂ ಇನ್‌ಸ್ಟಾಗ್ರಾಂ ಜಾಲಾಡಿ ಆರೋಪಿಗಳು ವಿಜಯನಗರದಲ್ಲಿರುವುದನ್ನು ಪತ್ತೆಹಚ್ಚಿ ಬಂದಿಸಿದ್ದಾರೆ. ಸದ್ಯ ಬಾಲಕಿಯನ್ನು ಪೋಷಕರಿಗೆ ಒಪ್ಪಿಸಿರುವ ಪೊಲೀಸರು, ಆರೋಪಿಗಳ ವಿರುದ್ಧ ಬಾಲ್ಯವಿವಾಹ, ಅಪಹರಣ, ಪೋಕ್ಸೊ ಕಾಯಿದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.