ಪ್ರೇಮಕಥೆಯುಳ್ಳ ಆಲ್ಬಂ ಸಾಂಗ್ ರಿಲೀಸ್ ಮಾಡಿ ಹಾರೈಸಿದ 'ರಿಯಲ್ ಸ್ಟಾರ್‌' ಉಪೇಂದ್ರ

ಕನ್ನಡದಲ್ಲಿ ಈಚೆಗೆ ಆಲ್ಬಂ ಹಾಡುಗಳ ಸಂಸ್ಕೃತಿ ಹೆಚ್ಚುತ್ತಿದೆ. ಸಿನಿಮಾ ನಟ-ನಟಿಯರ ಕೂಡ ಆಲ್ಬಂ ಸಾಂಗ್‌ನತ್ತ ಒಲವು ಬೆಳೆಸಿಕೊಳ್ಳುತ್ತಿದ್ದಾರೆ. ಸದ್ಯ 'ಕೃಷ್ಣ ತುಳಸಿ', 'ದಶರಥ' ಮುಂತಾದ ಸಿನಿಮಾಗಳಲ್ಲಿ ನಟಿಸಿರುವ ಮೇಘಶ್ರೀ ಅವರು ಕೂಡ ಒಂದು ಆಲ್ಭಂ ಸಾಂಗ್‌ನಲ್ಲಿ ನಟಿಸಿದ್ದಾರೆ.

ಪ್ರೇಮಕಥೆಯುಳ್ಳ ಆಲ್ಬಂ ಸಾಂಗ್ ರಿಲೀಸ್ ಮಾಡಿ ಹಾರೈಸಿದ 'ರಿಯಲ್ ಸ್ಟಾರ್‌' ಉಪೇಂದ್ರ
Linkup
'ಇವಳು ಸುಜಾತ' ಧಾರಾವಾಹಿ, ಕೃಷ್ಣ ತುಳಸಿ ಮುಂತಾದ ಸಿನಿಮಾಗಳಲ್ಲಿ ನಟಿಸಿರುವ ನಟಿ ಇದೇ ಮೊದಲ ಬಾರಿಗೆ ಆಲ್ಬಂ ಹಾಡೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಲವ್ ಸ್ಟೋರಿಯುಳ್ಳ ಈ 'ನಾನು ನಾನು ಪ್ರೀತಿಸುತ್ತಿರುವೆ' ಆಲ್ಬಂ ಹಾಡಿನಲ್ಲಿ ಮೇಘಶ್ರೀ ಜೊತೆಗೆ ಹೊಸ ಪ್ರತಿಭೆ ಅರುಣ್ ಚಂದ್ರಪ್ಪ ನಾಯಕರಾಗಿ ಮಿಂಚಿದ್ದಾರೆ. ಈ ಹಾಡು ರಿಲೀಸ್ ಆದ 24 ಗಂಟೆಗಳಲ್ಲಿ 1.5 ಲಕ್ಷಕ್ಕೂ ಅಧಿಕ ವೀವ್ಸ್ ಪಡೆದುಕೊಂಡಿರುವುದು ವಿಶೇಷ. ಅಂದಹಾಗೆ, ಈ ಹಾಡನ್ನು ರಿಲೀಸ್ ಮಾಡಿ, ಇಡೀ ತಂಡ ಶುಭ ಹಾರೈಸಿದ್ದಾರೆ 'ರಿಯಲ್ ಸ್ಟಾರ್' . ಇಡೀ ಹಾಡನ್ನು ಮಂಗಳೂರಿನ ಕಡಲ ತೀರದಲ್ಲಿ ಚಿತ್ರೀಕರಣ ಮಾಡಲಾಗಿದೆ. ಸೌಂದರ್ಯಕ್ಕಿಂತ ಪ್ರೀತಿ ಮುಖ್ಯ ಎಂಬ ಸಂದೇಶ ಈ ಹಾಡಿನಲ್ಲಿದೆ. 'ತನಿಖೆ' ಎಂಬ ಚಿತ್ರಕ್ಕೆ ನಿರ್ದೇಶನ ಮಾಡಿರುವ ಜಿ.ಎಸ್. ಕಲಿಗೌಡ ಈ ಆಲ್ಬಂ ಹಾಡಿಗೆ ಸಾಹಿತ್ಯ ಬರೆದಿದ್ದು, ನಿರ್ದೇಶನವನ್ನೂ ಮಾಡಿದ್ದಾರೆ. ಮುರಳಿ ಮಾಸ್ಟರ್, ಹುಸೇನ್ ನೃತ್ಯ ನಿರ್ದೇಶನ ಮಾಡಿದ್ದು, ಕ್ರಿಸ್ಟೋಫರ್ ಜೈಸನ್ ಸಂಗೀತ ನೀಡಿದ್ದಾರೆ. ಛಾಯಾಗ್ರಹಣದ ಹೊಣೆ ಶ್ಯಾಮ್ ಸಿಂಧನೂರು ಅವದ್ದು. ಡಿಎಂಎಫ್ (ಡೈಮೆಂಡ್ ಟ್ರೀ ಮ್ಯೂಸಿಕ್ ಫ್ಯಾಕ್ಟರಿ) ಆಡಿಯೋ ಸಂಸ್ಥೆಯ ಮಮತಾ ಶ್ರೀ ಈ ಆಲ್ಬಂ ಸಾಂಗ್‌ನ ನಿರ್ಮಾಣವನ್ನು ಮಾಡಿದ್ದಾರೆ. 'ಹೊಸಬರಿಗೆ ವೇದಿಕೆ ಕಲ್ಪಿಸಬೇಕೆಂಬ ನಮ್ಮ ಮೊದಲ ಪ್ರಯೋಗಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮೊದಲ ಪ್ರಯತ್ನದಲ್ಲೇ ಗೆದ್ದಿರುವ ಖುಷಿ ತಂಡಕ್ಕಿದೆ. ತಿಂಗಳಿಗೊಂದು ಆಲ್ಬಂ ಸಾಂಗ್ ಮಾಡಬೇಕೆಂಬ ಕನಸು ಈಗ ಮತ್ತಷ್ಟು ಗಟ್ಟಿಯಾಗಿದೆ. ಹೊಸ ಸಿನಿಮಾದ ಹಾಡುಗಳ ರೈಟ್ಸ್ ಪಡೆದುಕೊಳ್ಳಲು ಡೈಮಂಡ್ ಟ್ರೀ ಮ್ಯೂಸಿಕ್ ಫ್ಯಾಕ್ಟರಿ ಮುಂದಾಗಿದೆ' ಎಂದು ಅವರು ಹೇಳುತ್ತಾರೆ.