RRR Movie: ಅದೊಂದು ವಿಚಾರದಲ್ಲಿ ಸಖತ್ ಕಾನ್ಫಿಡೆಂಟ್ ಆಗಿದೆ 'ಆರ್‌ಆರ್‌ಆರ್' ಬಳಗ!

ನಿರ್ದೇಶಕ ರಾಜಮೌಳಿ ಅವರ ಬಹುನಿರೀಕ್ಷಿತ 'ಆರ್‌ಆರ್‌ಆರ್‌' ಚಿತ್ರದ ಮೇಕಿಂಗ್ ವಿಡಿಯೋ ತೆರೆಕಂಡಿದೆ. ಜೊತೆಗೆ ಒಂದು ವಿಚಾರದಲ್ಲಿ ಚಿತ್ರತಂಡ ಸಖತ್ ಕಾನ್ಫಿಡೆಂಟ್ ಆಗಿದೆ ಅನ್ನೋದನ್ನು ಒತ್ತಿ ಹೇಳಲಾಗಿದೆ. ಯಾವುದು ಆ ವಿಚಾರ?

RRR Movie: ಅದೊಂದು ವಿಚಾರದಲ್ಲಿ ಸಖತ್ ಕಾನ್ಫಿಡೆಂಟ್ ಆಗಿದೆ 'ಆರ್‌ಆರ್‌ಆರ್' ಬಳಗ!
Linkup
ಭಾರತದಲ್ಲಿ ನಿರ್ಮಾಣವಾಗುತ್ತಿರುವ ಬಹುನಿರೀಕ್ಷಿತ ಬಿಗ್ ಬಜೆಟ್ ಸಿನಿಮಾಗಳ ಸಾಲಿನಲ್ಲಿ '' ಕೂಡ ಇದೆ. ಭಾರತದ ಹಲವು ಭಾಷೆಗಳಲ್ಲದೆ, ವಿದೇಶಿ ಭಾಷೆಗಳಲ್ಲೂ ಈ ಸಿನಿಮಾ ತೆರೆಕಾಣುವುದು ಖಚಿತವಾಗಿದೆ. ಅಂದ್ರೆ ಕೇಳ್ಬೇಕಾ? ಅದ್ದೂರಿತನಕ್ಕೆ ಅವರು ಮತ್ತೊಂದು ಹೆಸರು ಅನ್ನೋ ಥರ ಆಗಿದೆ. 'ಬಾಹುಬಲಿ' ನೋಡಿದವರೆಲ್ಲ ಈ 'ಆರ್‌ಆರ್‌ಆರ್‌' ಮೇಲೆ ಬೆಟ್ಟದಷ್ಟು ನಿರೀಕ್ಷೆ ಇಟ್ಟುಕೊಂಡು ಕಾಯ್ತಾ ಇದ್ದಾರೆ. ಇಂತಹ ಟೈಮ್ ಅಲ್ಲಿ ಸಿನಿಮಾ ಹೇಗಿರಬಹುದು ಎಂಬುದರ ಬಗ್ಗೆ ಸಣ್ಣ ಝಲಕ್ ನೀಡಿ, ಕುತೂಹಲದ ಬೆಂಕಿಗೆ ತುಪ್ಪ ಸುರಿದಿದ್ದಾರೆ ರಾಜಮೌಳಿ! ಜೊತೆಗೆ ಆ ಒಂದು ವಿಚಾರದಲ್ಲಿ ನಮ್ಮ ಟೀಮ್ ಸಖತ್ ಕಾನ್ಫಿಡೆಂಟ್ ಆಗಿದೆ ಅನ್ನೋದನ್ನು ಸಾರಿ ಸಾರಿ ಹೇಳಿದ್ದಾರೆ! ಮೇಕಿಂಗ್ ಝಲಕ್ ನೀಡಿದ ರಾಜಮೌಳಿಜುಲೈ 15ರಂದು ಚಿತ್ರದ ಮೇಕಿಂಗ್ ವಿಡಿಯೋವನ್ನು ಚಿತ್ರತಂಡ ರಿಲೀಸ್ ಮಾಡಿದೆ. ಅದ್ದೂರಿ ಸೆಟ್, ಮೈಜುಮ್ಮೆನಿಸುವ ದುಬಾರಿ ಆಕ್ಷನ್‌ ಸೀನ್‌ಗಳನ್ನು 'ಆರ್‌ಆರ್‌ಆರ್' ಒಳಗೊಂಡಿದೆ ಎಂಬುದನ್ನು ಈ ಮೇಕಿಂಗ್ ವಿಡಿಯೋ ಸಾಬೀತು ಮಾಡಿದೆ. ಜೊತೆಗೆ ಚಿತ್ರದ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟುಗೊಳಿಸಿದೆ. ಇದೆಲ್ಲದರ ಜೊತೆಗೆ ಚಿತ್ರದ ರಿಲೀಸ್ ಡೇಟ್ ಅನ್ನು ಸಹ 'ಆರ್‌ಆರ್‌ಆರ್‌' ಇನ್ನೊಮ್ಮೆ ಒತ್ತಿ ಹೇಳಿದೆ. ಹೌದು, ಅಕ್ಟೋಬರ್ 13ರಂದು ಆರ್‌ಆರ್‌ಆರ್‌ ತೆರೆಕಾಣಲಿದೆ. ಅಕ್ಟೋಬರ್ 13ರಂದು ಸಿನಿಮಾ ರಿಲೀಸ್ ಆಗೋದು ಪಕ್ಕಾ?ಕೊರೊನಾ ಎಫೆಕ್ಟ್‌ನಿಂದಾಗಿ ಒಂದು ವರ್ಷದ ಹಿಂದೆಯೇ ರಿಲೀಸ್ ಆಗಬೇಕಿದ್ದ ಆರ್‌ಆರ್‌ಆರ್ ಸಿನಿಮಾ 2021ಕ್ಕೆ ಮುಂದೂಡಿಕೆ ಆಗಿತ್ತು. ನಂತರ ಜನವರಿ 8ರಂದು ರಿಲೀಸ್ ಆಗೋದು ಪಕ್ಕಾ ಎಂದು ಚಿತ್ರತಂಡ ಹೇಳಿಕೊಂಡಿತ್ತು. ಆದರೆ, ಅದು ಕೂಡ ನಿಜವಾಗಲಿಲ್ಲ. ಕೊರೊನಾ ಕಾರಣದಿಂದ ಯೋಜನೆಗಳೆಲ್ಲ ಬುಡಮೇಲಾಯಿತು. ಈಗ ಕೊರೊನಾ ಮೂರನೇ ಅಲೆ ಬರುವ ಸೂಚನೆ ಇದೆ. ಜೊತೆಗೆ ಚಿತ್ರಮಂದಿರಗಳು ಇನ್ನೂ ಕೂಡ ಪೂರ್ಣಪ್ರಮಾಣದಲ್ಲಿ ತೆರೆದಿಲ್ಲ. ಆದರೂ ಕೂಡ ಅಕ್ಟೋಬರ್ 13ರಂದು ಬಂದೇ ಬರ್ತಿವಿ ಎಂದು ಕಾನ್ಫಿಡೆಂಟ್ ಆಗಿ ಮೇಕಿಂಗ್ ವಿಡಿಯೋದಲ್ಲಿ ಹೇಳಿಕೊಂಡಿದೆ 'ಆರ್‌ಆರ್‌ಆರ್‌' ತಂಡ. ಅಂದಹಾಗೆ, 'ಆರ್‌ಆರ್‌ಆರ್‌' ಚಿತ್ರದ ಡಿಜಿಟಲ್ ಮತ್ತು ಸ್ಯಾಟಲೈಟ್ ಹಕ್ಕುಗಳು 325 ಕೋಟಿ ರೂಪಾಯಿಗೆ ಮಾರಾಟವಾಗಿವೆ. 'ಆರ್‌ಆರ್‌ಆರ್‌' ಚಿತ್ರ ತೆಲುಗು, ತಮಿಳು, ಹಿಂದಿ, ಕನ್ನಡ, ಮಲಯಾಳಂ ಹಾಗೂ ಇನ್ನಿತರ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಜೂನಿಯರ್ ಎನ್‌ಟಿಆರ್, ರಾಮ್ ಚರಣ್ ತೇಜ ಜೊತೆಗೆ ಒಲಿವಿಯಾ ಮೊರಿಸ್, ಆಲಿಯಾ ಭಟ್, ಅಜಯ್ ದೇವ್‌ಗನ್ ಮುಂತಾದವರು ನಟಿಸಿದ್ದಾರೆ. ಅದ್ಧೂರಿ ವೆಚ್ಚದಲ್ಲಿ ಡಿವಿವಿ ದಾನಯ್ಯ ನಿರ್ಮಾಣ ಮಾಡುತ್ತಿರುವ ಈ ಚಿತ್ರಕ್ಕೆ ಎಂ.ಎಂ.ಕೀರವಾಣಿ ಸಂಗೀತ ನೀಡಿದ್ದಾರೆ.