'ಕರಾವಳಿ ಬೆಡಗಿ' ಅನುಷ್ಕಾ ಶೆಟ್ಟಿಯ ಈ ಹೊಸ ಫೋಟೋಗಳು ಸಖತ್ ವೈರಲ್!

ಕರಾವಳಿ ಬೆಡಗಿ ಅನುಷ್ಕಾ ಶೆಟ್ಟಿಗೆ ದಕ್ಷಿಣ ಭಾರತದಲ್ಲಿ ಸಿಕ್ಕಾಪಟ್ಟೆ ಅಭಿಮಾನಿ ಬಳಗವೇ ಇದೆ. ಈಚೆಗೆ ಅವರು ಎಲ್ಲಿಯೂ ಹೊರಗೆ ಕಾಣಿಸಿಕೊಂಡಿರಲಿಲ್ಲ. ಆದರೆ, ಇತ್ತೀಚಿನ ಅವರ ಎರಡು ಫೋಟೋಗಳು ಮಾತ್ರ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿವೆ.

'ಕರಾವಳಿ ಬೆಡಗಿ' ಅನುಷ್ಕಾ ಶೆಟ್ಟಿಯ ಈ ಹೊಸ ಫೋಟೋಗಳು ಸಖತ್ ವೈರಲ್!
Linkup
ಕಳೆದ 15 ವರ್ಷಗಳಿಂದ ದಕ್ಷಿಣ ಭಾರತದಲ್ಲಿ ಸ್ಟಾರ್ ಆಗಿ ಮಿಂಚುತ್ತಿರುವವರು ನಟಿ ಅನುಷ್ಕಾ ಶೆಟ್ಟಿ. ಬಾಹುಬಲಿ ಚಿತ್ರದಲ್ಲಿ ದೇವಸೇನಾ ಪಾತ್ರ ಮಾಡಿದ ಮೇಲಂತೂ ಅವರ ಜನಪ್ರಿಯತೆ ದ್ವಿಗುಣಗೊಂಡಿತ್ತು. ಆದರೆ, ಬಾಹುಬಲಿ ಸರಣಿ ನಂತರ ಅವರ ಸಿನಿಮಾಗಳ ಸಂಖ್ಯೆ ತುಂಬ ಕಮ್ಮಿ ಆಗಿದೆ. ಆದರೂ, ಅನುಷ್ಕಾ ಮೇಲಿನ ಕ್ರೇಜ್ ಮಾತ್ರ ಅಭಿಮಾನಿಗಳಲ್ಲಿ ಹಾಗೇ ಇದೆ. ಈಚೆಗೆ ಅವರ ಎರಡು ಫೋಟೋಗಳು ಸಖತ್ ವೈರಲ್ ಆಗುತ್ತಿವೆ. ಜೊತೆಗೆ ಟ್ವಿಟರ್‌ನಲ್ಲೂ ಟ್ರೆಂಡಿಂಗ್‌ನಲ್ಲಿವೆ. ದಪ್ಪ ಆಗಿಬಿಟ್ಟರಾ ಅನುಷ್ಕಾ? 6 ವರ್ಷಗಳ ಹಿಂದೆ ಸೈಜ್ ಝೀರೋ ಸಿನಿಮಾಕ್ಕಾಗಿ ಅನುಷ್ಕಾ ಶೆಟ್ಟಿ ಸ್ವಲ್ಪ ದಪ್ಪ ಆಗಿದ್ದರು. ಆನಂತರ ಸಣ್ಣ ಆಗಲು ಅವರು ತುಂಬ ಪ್ರಯತ್ನ ಪಡಬೇಕಾಯ್ತು. ಒಂದಷ್ಟು ಸಣ್ಣ ಆಗಿ ಬಾಹುಬಲಿಯಲ್ಲೂ ಕಾಣಿಸಿಕೊಂಡರು. ಕೊನೆಗೆ ಅಮೆರಿಕಕ್ಕೆ ಹೋಗಿ ಸಣ್ಣ ಆಗಿಬಂದರು ಎಂಬ ಮಾತುಗಳು ಕೇಳಿಬಂದಿದ್ದವು. ಆದರೆ, ಲಾಕ್‌ಡೌನ್‌ ಸಮಯದಲ್ಲಿ ಅನುಷ್ಕಾ ಪುನಃ ದಪ್ಪ ಆಗಿಬಿಟ್ಟರೇ ಎಂಬ ಅನುಮಾನವನ್ನು ಈ ಫೋಟೋ ಹುಟ್ಟುಹಾಕಿದೆ. ಫೋಟೋ ನೋಡಿ ಫ್ಯಾನ್ಸ್ ಫಿದಾ! ದಪ್ಪ ಇರಲಿ, ಸಣ್ಣ ಇರಲಿ, ಅನುಷ್ಕಾ ಅವರ ಹೊಸ ಫೋಟೋಗಳನ್ನು ನೋಡಿದ ಖುಷಿಯಲ್ಲಿ ಫ್ಯಾನ್ಸ್ ಇದ್ದಾರೆ. ಒಬ್ಬ ಸ್ಟಾರ್ ಹೀರೋಗೆ ಇರುವಷ್ಟೇ ಕ್ರೇಜ್ ಅನುಷ್ಕಾಗೂ ಇದೆ. 10 ವರ್ಷಗಳ ಹಿಂದೆಯೇ, ಅರುಂಧತಿ ಸಿನಿಮಾದಲ್ಲೇ ಅವರು ಅದನ್ನು ಸಾಬೀತು ಮಾಡಿದ್ದರು. 2018ರಲ್ಲಿ ತೆರೆಕಂಡ 'ಭಾಗಮತಿ' ಕೂಡ ಮಹಿಳಾ ಪ್ರಧಾನ ಸಿನಿಮಾವೇ ಆಗಿತ್ತು. ಈಚೆಗೆ ಬಂದ ನಿಶ್ಯಬ್ಧಂನಲ್ಲೂ ಅನುಷ್ಕಾ ಪಾತ್ರವೇ ಹೈಲೈಟ್ ಆಗಿತ್ತು! ನವೀನ್ ಜೊತೆ ಹೊಸ ಸಿನಿಮಾ ಸದ್ಯ ತೆಲುಗಿನ 'ಏಜೆಂಟ್ ಸಾಯಿ ಶ್ರೀನಿವಾಸ್ ಆತ್ರೇಯ', 'ಜಾತಿ ರತ್ನಾಲು' ಥರದ ಸಿನಿಮಾಗಳಿಂದ ಗುರುತಿಸಿಕೊಂಡಿರುವ ನವೀನ್ ಪೊಲಿಶೆಟ್ಟಿ ಜೊತೆ ಅನುಷ್ಕಾ ನಟಿಸುವ ಸಾಧ್ಯತೆ ಇದೆಯಂತೆ. 40ರ ಹರೆಯದ ಮಹಿಳೆ ಮತ್ತು 25ರ ಹರೆಯದ ಹುಡುಗನ ನಡುವಿನ ಪ್ರೀತಿಯನ್ನು ಈ ಸಿನಿಮಾದಲ್ಲಿ ಹೇಳಾಗುತ್ತಿದೆಯಂತೆ. 'ರಾ ರಾ ಕೃಷ್ಣಯ್ಯ' ಸಿನಿಮಾ ಖ್ಯಾತಿಯ ಮಹೇಶ್ ಇದರ ನಿರ್ದೇಶನ ಮಾಡುತ್ತಿದ್ದಾರೆ. ಪ್ರಭಾಸ್ ಸೋದರನ ಯುವಿ ಕ್ರಿಯೇಷನ್ಸ್‌ ಬ್ಯಾನರ್‌ನಡಿಯಲ್ಲಿ ಸಿನಿಮಾ ನಿರ್ಮಾಣ ಆಗುತ್ತಿದೆ. ಈ ಹಿಂದೆ ಇದೇ ಬ್ಯಾನರ್‌ನಲ್ಲಿ 'ಭಾಗಮತಿ' ಸಿನಿಮಾವನ್ನು ಅನುಷ್ಕಾ ಮಾಡಿದ್ದರು.