ಹಿಂದುತ್ವ, ಹಿಂದುಯಿಸಂ ಬೇರೆ ಬೇರೆ, ನನ್ನ ಹಿಂದುಯಿಸಂನ್ನು ಯಾವ ಪಕ್ಷವೂ ಪ್ರಭಾವಿಸಲಾಗದು: ನಟಿ ರಮ್ಯಾ

'ಸ್ಯಾಂಡಲ್‌ವುಡ್‌ ಕ್ವೀನ್' ನಟಿ ರಮ್ಯಾ ಸೋಶಿಯಲ್ ಮೀಡಿಯಾದಲ್ಲಿ ಹಿಂದುತ್ವ, ಹಿಂದುಯಿಸಂ ಬಗ್ಗೆ ಅವರ ಅಭಿಪ್ರಾಯ ಹಂಚಿಕೊಂಡಿದ್ದಾರೆ. ರಮ್ಯಾ ಪೋಸ್ಟ್‌ಗೆ ಸಾಕಷ್ಟು ಕಾಮೆಂಟ್ಸ್ ಬಂದಿದ್ದು, ಕೆಲವರು ಅವರ ಮಾತು ಮೆಚ್ಚಿದರೆ, ಇನ್ನೂ ಕೆಲವರು ತರಾಟೆಗೆ ತೆಗೆದುಕೊಂಡಿದ್ದಾರೆ.

ಹಿಂದುತ್ವ, ಹಿಂದುಯಿಸಂ ಬೇರೆ ಬೇರೆ, ನನ್ನ ಹಿಂದುಯಿಸಂನ್ನು ಯಾವ ಪಕ್ಷವೂ ಪ್ರಭಾವಿಸಲಾಗದು: ನಟಿ ರಮ್ಯಾ
Linkup
ಸಿನಿಮಾ, ರಾಜಕೀಯದಿಂದ ದೂರ ಉಳಿದಿರುವ 'ಸ್ಯಾಂಡಲ್‌ವುಡ್‌ ಕ್ವೀನ್' ನಟಿ ಸೋಶಿಯಲ್ ಮೀಡಿಯಾದಲ್ಲಿ ಅವರ ಅಭಿಪ್ರಾಯ ಹಂಚಿಕೊಳ್ಳೋದನ್ನು ಮರೆಯೋದಿಲ್ಲ. ಹಿಂದುತ್ವ ಎಂಬ ಪದದ ಬಗ್ಗೆ ಸದಾ ಚರ್ಚೆಯಾಗುತ್ತಲೇ ಇರುತ್ತದೆ, ಅದರಲ್ಲಿಯೂ ರಾಜಕೀಯ ಕ್ಷೇತ್ರದಲ್ಲಿ ಹಿಂದುತ್ವದ ಪದ ಬಳಕೆ ಜೋರಾಗಿಯೇ ನಡೆಯುತ್ತಿರುತ್ತದೆ. ಈಗ ಈ ಕುರಿತು ರಮ್ಯಾ, ಅವರ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಹಿಂದುತ್ವದ ಬಗ್ಗೆ ರಮ್ಯಾ ಹೇಳುವುದೇನು? "ಹಿಂದುತ್ವ, ಹಿಂದುಯಿಸಂ ಎರಡೂ ಒಂದೇ ಅಲ್ಲ, ಹಿಂದುಯಿಸಂ ರಾಜಕೀಯವಲ್ಲ. ಆದರೆ ಹಿಂದುತ್ವ ರಾಜಕೀಯವಾಗಿದೆ. ಹಿಂದುಯಿಸಂ ಎಲ್ಲರನ್ನೂ ಒಳಗೊಂಡು, ಪ್ರೀತಿಸುವಂತದ್ದಾಗಿದೆ. ಅದಕ್ಕೆ ವಿರುದ್ಧವಾದದ್ದು ಹಿಂದುತ್ವ. ನಿಜವಾದ ಹಿಂದುಗಳಿಗೆ ಇದರ ವ್ಯತ್ಯಾಸ ಅರಿವಾಗುವುದು" ಎಂದು ನಟಿ ರಮ್ಯಾ ಅವರು ಸೋಶಿಯಲ್ ಮೀಡಿಯಾ ಪೋಸ್ಟ್ ಹಂಚಿಕೊಂಡಿದ್ದಾರೆ. "ರಾಜಕೀಯ ವ್ಯಕ್ತಿಗಳು ಹಿಂದುಯಿಸಂನ್ನು ರಾಜಕೀಯ ಸಾಧನೆವಾಗಿ ಬಳಸಿಕೊಳ್ಳುತ್ತಿದ್ದಾರೆ. ಹೀಗಾಗಿ ಸನಾತನ ಧರ್ಮವನ್ನು ಈ ರೀತಿ ನೋಡಲು ಬೇಸರವಾಗುತ್ತಿದೆ. ನನ್ನ ಹಿಂದುಯಿಸಂನ್ನು ಯಾವ ಪಕ್ಷವೂ ಪ್ರಭಾವಿಸಲಾಗದು" ಎಂದು ಕೂಡ ರಮ್ಯಾ ಹೇಳಿದ್ದಾರೆ. ನಟಿ ರಮ್ಯಾ ಹೇಳಿಕೆಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗುತ್ತಿದೆ. ಅದರ ಜೊತೆಗೆ ಟೀಕೆಗಳು ವ್ಯಕ್ತವಾಗಿವೆ:-
  • ನಾನು ಮಾನವನಾಗಿ ಹುಟ್ಟಿದೆ, ಮಾನವನಾಗಿರುವೆ, ಧರ್ಮದ ಹೊರತಾಗಿ ಎಲ್ಲರೂ ಮಾನವರು.
  • ವಸುದೈವ ಕುಟುಂಬಕಂ,
  • ಪ್ರತಿಯೊಬ್ಬರು ಇದರ ಅರ್ಥ ತಿಳಿದುಕೊಳ್ಳಬೇಕು
  • ಸತ್ಯದ ಮಾತು. ಒಪ್ಪುವಂತಹ ಮಾತು, ನಾವೆಲ್ಲ ಒಂದು ಎಂದು ಬರೀ ಬಾಯಿ ಮಾತಾಗಿದೆ, ಮನದ ಮಾತು ಯಾರಿಗೂ ಕೇಳಿಸಲ್ಲ ಅನ್ನೋದು ಕೆಲವರ ಭಾವನೆ
  • ನಾನು ಮುಸ್ಲಿಂ ಮತ್ತು ನಾನು ಹಿಂದೂ ಧರ್ಮವನ್ನು ಗೌರವಿಸುತ್ತೇನೆ ಆದರೆ ಬಲಪಂಥೀಯ ಉಗ್ರಗಾಮಿ ಅಲ್ಲ
  • ನಾನು , ಹಿಂದುಯಿಸಂನ್ನು ಕಲಿಸಲು ಬರಬೇಡಿ, ನನ್ನ ಹಿಂದುಯಿಸಂ ಮೇಲೆ ಯಾರೂ ಪ್ರಭಾವ ಬೀರಲಾಗದು
  • ಎಲ್ಲ ಹಿಂದುಗಳು ಹುಟ್ಟಿನಿಂದಲೇ ಹಿಂದುಗಳು, ನಮ್ಮ ಭಾವನೆಗಳಿಗೆ ಧಕ್ಕೆ ಮಾಡೋದು ನಿಲ್ಲಿದು, ನಮಗೆ ನಿಮ್ಮಂತಹ ವ್ಯಕ್ತಿಗಳಿಂದ ಯಾವುದೇ ಸೆರ್ಟಿಫಿಕೇಟ್ ಬೇಕಿಲ್ಲ. ಹಿಂದುಯಿಸಂ ಧರ್ಮ ಆಗಿದ್ದರೆ ದಯವಿಟ್ಟು ಅರ್ಥ ತಿಳಿದುಕೊಂಡು ಮಾತನಾಡಿ. ಹಿಂದುತ್ವಂ ಅಂದರೆ ಹಿಂದುಗಳ ಇರುವಿಕೆ, ಹಿಂದು ಸಂಪ್ರದಾಯ ಇರುವಿಕೆ ಅಥವಾ ಹಿಂದುಯಿಸಂ ಅನುಸರಿಸುವವರು ಎಂದು ಕೂಡ ಅರ್ಥೈಸಲಾಗುತ್ತದೆ. ಹಿಂದುತ್ವಂ, ಹಿಂದುಯಿಸಂ ಬೇರೆ ಬೇರೆ ಆದರೆ ಇಸ್ಲಾಂ & ಇಸ್ಲಾಮಿಕ್ ಏನು? ಕ್ರಿಶ್ಚಿಯಾನಿಟಿ, ಕ್ರಿಶ್ಚಿಯನ್ ಏನು?
  • ಹಿಂದುಯಿಸಂನ ಬುಲೆಟ್ ಪ್ರೂಫ್ ಜಾಕೆಟ್‌ ಹಿಂದುತ್ವ
  • ಯಾಕೆ? ಏನಾಯ್ತು? ಈಗ ಯಾಕೆ ಹಿಂದುತ್ವ, ಹಿಂದಿಯಿಸಂ ಬಗ್ಗೆ ಮಾತನಾಡುತ್ತಿದ್ದೀರಿ?
  • ನಿಮ್ಮನ್ನು ನಟಿಯಾಗಿ ಇಷ್ಟಪಡ್ತೀವಿ, ರಾಜಕೀಯ ತೋರಿಸಬೇಡಿ
ಪುನೀತ್ ಅಂತಿಮ ದರ್ಶನ ಪಡೆದ ರಮ್ಯಾ ನಟಿ ರಮ್ಯಾ ಅವರು ಪುನೀತ್ ರಾಜ್‌ಕುಮಾರ್ ಅಂತಿಮ ದರ್ಶನ ಪಡೆಯಲು ಬೆಂಗಳೂರಿಗೆ ಬಂದಿದ್ದರು. ಅಪ್ಪು ಜೊತೆಗೆ ರಮ್ಯಾ 'ಅಭಿ', 'ಆಕಾಶ್', 'ಅರಸು' ಸಿನಿಮಾಗಳಲ್ಲಿ ನಟಿಸಿದ್ದರು. ಮತ್ತೆ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರೆ ಪುನೀತ್ ಜೊತೆಗೆ ಸಿನಿಮಾ ಮಾಡಬೇಕು ಎನ್ನುವ ಮನಸ್ಥಿತಿಯನ್ನು ಕೂಡ ರಮ್ಯಾ ಹೊಂದಿದ್ದರಂತೆ.